ಗೋವಿಂದದಾಸ ಕಾಲೇಜು: ವಿಶ್ವನಾಥ ಪಿ. ಶೆಟ್ಟಿ ದತ್ತಿ ನಿಧಿ ಉಪನ್ಯಾಸ ಕಾರ್ಯಕ್ರಮ

Upayuktha
0

ಸುರತ್ಕಲ್‌: ಪ್ರಸಕ್ತ ಸಂದರ್ಭದಲ್ಲಿ ರಸಾಯನಶಾಸ್ತ್ರ ವಿಷಯಗಳಿಗೆ ವಿಪುಲ ಅವಕಾಶಗಳಿವೆ. ಇಂದು ನಡೆಯುತ್ತಿರುವ ರಸಾಯನಶಾಸ್ತ್ರದ ಸಂಶೋಧನೆಗಳ ಕುರಿತು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವುದು ಅವಶ್ಯಕ ಎಂದು ಮಂಗಳೂರು ವಿಶ್ವ ವಿದ್ಯಾನಿಲಯದ ರಸಾಯನಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕರಾದ  ಡಾ.ಎಂ.ಆರ್.ಮದ್ದನಿ ಅಭಿಪ್ರಾಯಪಟ್ಟರು. ಅವರು ಸ್ನಾತಕೋತ್ತರ ರಸಾಯನಶಾಸ್ತ್ರ ವಿಭಾಗ, ಗೋವಿಂದದಾಸ ಕಾಲೇಜು ಆಯೋಜಿಸಿದ್ದ ವಿಶ್ವನಾಥ ಪಿ. ಶೆಟ್ಟಿ ದತ್ತಿ ನಿಧಿ ಉಪನ್ಯಾಸ ಕಾರ್ಯಕ್ರಮ ಸರಣಿ ಉಧ್ಘಾಟಿಸಿ ಮಾತನಾಡಿದರು. ಅವರು ಸಾವಯವ ರಸಾಯನಶಾಸ್ತ್ರಕ್ಕೆ ಸಂಬಂಧಿಸಿದ ‘1,6- ಎಡಿಶನ್ಸ್ ಆಫ್ ಪಾರಾ ಕ್ವಿನೋನ್ ಮಿಥೈಡ್ಸ್” ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿದರು.


ಪ್ರಾಂಶುಪಾಲರಾದ ಪ್ರೊ.ಕೃಷ್ಣಮೂರ್ತಿ ಪಿ. ಮಾತನಾಡಿ ರಸಾಯನಶಾಸ್ತ್ರ ವಿಷಯಗಳ ಸಂಶೋಧನೆಗಳಲ್ಲಿ ವಿದ್ಯಾರ್ಥಿಗಳು ಹೆಚ್ಚು ತೊಡಗಿಸಿಕೊಳ್ಳಬೇಕು ಎಂದರು. ಆಡಳಿತ ನಿರ್ದೇಶಕರಾದ ಪ್ರೊ.ರಮೇಶ್ ಕುಳಾಯಿ ಶುಭ ಹಾರೈಸಿದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಹಿಂದೂ ವಿದ್ಯಾದಾಯಿನಿ ಸಂಘದ ಕಾರ್ಯದರ್ಶಿ ಶ್ರೀರಂಗ ಎಚ್ ಮಾತನಾಡಿ ಉದ್ಯಮಿ ವಿಶ್ವನಾಥ ಪಿ. ಶೆಟ್ಟಿ ಯವರು ಶಿಕ್ಷಣ ಕ್ಷೇತ್ರಕ್ಕೆ ನೀಡುತ್ತಿರುವ ಕೊಡುಗೆಗಳನ್ನು ಶ್ಲಾಘಿಸಿದರು. ಕಾರ್ಯಕ್ರಮದ ಸಂಯೋಜಕರಾದ ಸ್ನಾತಕೋತ್ತರ ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ.ಕಾರ್ತಿಕ ಜೆ. ಎಸ್ ಸ್ವಾಗತಿಸಿದರು. ನಿರೀಕ್ಷಾ ಪಿ. ಅತಿಥಿ ಪರಿಚಯ ಮಾಡಿದರು. ಡಾ.ಶ್ರುತಿ ಎ. ವಂದಿಸಿದರು. ಅನ್ನಪೂರ್ಣ ಕಾರ್ಯಕ್ರಮ ನಿರೂಪಿಸಿದರು. 

ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter  

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top