ಗೋವಿಂದದಾಸ ಕಾಲೇಜಿನಲ್ಲಿ ಕಾರ್ಗಿಲ್ ವಿಜಯ ದಿವಸ ಆಚರಣೆ

Upayuktha
0


ಸುರತ್ಕಲ್‌:
ಗೋವಿಂದದಾಸ ಕಾಲೇಜಿನ ಎನ್.ಸಿ.ಸಿ ಮತ್ತು ವಿದ್ಯಾರ್ಥಿ ಸೆನೆಟ್ ಸಹಯೋಗದಲ್ಲಿ ಕಾರ್ಗಿಲ್ ವಿಜಯ ದಿವಸವನ್ನು ಆಚರಿಸಲಾಯಿತು. ಕಾಲೇಜಿನ ಪ್ರಾಂಶುಪಾಲ ಪ್ರೊ. ಪಿ. ಕೃಷ್ಣಮೂರ್ತಿ ಮಾತನಾಡಿ ಕಾರ್ಗಿಲ್‍ ಯುದ್ಧದಲ್ಲಿ ಹೋರಾಡಿದ ಹಾಗೂ ಹುತಾತ್ಮರಾದ ವೀರಯೋಧರ ಸ್ಮರಣೆಯನ್ನು ನಿರಂತರವಾಗಿ ನಡೆಸಿ ಗೌರವಿಸಬೇಕು ಎಂದರು. 


ಕಾಲೇಜಿನ ಆಡಳಿತಾತ್ಮಕ ನಿರ್ದೇಶಕ ಪ್ರೊ. ರಮೇಶ್ ಕುಳಾಯಿ, ಕಾಲೇಜಿನ ಉಪಪ್ರಾಚಾರ್ಯ ಹಾಗೂ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪ್ರೊ. ರಮೇಶ್ ಭಟ್‍ಎಸ್.ಜಿ ಪ್ರಾಧ್ಯಾಪಕರಾದ ಪ್ರೊ. ಧನ್ಯಕುಮಾರ್ ವೆಂಕಣ್ಣವರ್, ಡಾ. ಕಾರ್ತಿಕ್‍ ಜೆ.ಎಸ್, ಪ್ರಾಧ್ಯಾಪಕಿ ಪವಿತ್ರ, ಗ್ರಂಥ ಪಾಲಕಿ ಡಾ. ಸುಜಾತ ಬಿ., ಸಾಂಸ್ಕೃತಿಕ ನಿರ್ದೇಶಕ ವಿನೋದ್ ಮತ್ತು ವಿದ್ಯಾರ್ಥಿ ನಾಯಕರು ಪುಷ್ಪ ನಮನ ಸಲ್ಲಿಸಿದರು. ಎನ್.ಸಿ.ಸಿ ಅಧಿಕಾರಿ ಕ್ಯಾಪ್ಟನ್ ಸುಧಾಯು ಕಾರ್ಯಕ್ರಮ ಸಂಯೋಜಿಸಿದರು.

ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter 

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top