ಹೊಸ ಅಲೋಚನಾ ಪದ್ಧತಿಯನ್ನು ವಿದ್ಯಾರ್ಥಿ ಸಮುದಾಯದಲ್ಲಿ ಬೆಳೆಸುವುದು ಉನ್ನತ ಶಿಕ್ಷಣದ ಗುರಿ : ಜಯಚಂದ್ರ ಹತ್ವಾರ್

Upayuktha
0

      ಗೋವಿಂದದಾಸ ಕಾಲೇಜಿನ ಸ್ನಾತಕೋತ್ತರ ವಿದ್ಯಾರ್ಥಿ ದಿನಾಚರಣೆ


ಸುರತ್ಕಲ್‌:
ಹೊಸ ಅಲೋಚನಾ ಪದ್ಧತಿಯನ್ನು ವಿದ್ಯಾರ್ಥಿ ಸಮುದಾಯದಲ್ಲಿ ಬೆಳೆಸುವುದು ಉನ್ನತ ಶಿಕ್ಷಣದ ಗುರಿಯಾಗಿದೆ. ಜ್ಞಾನ ವರ್ಧನೆ ಹಾಗೂ ಸಂಶೋಧನಾ ಪ್ರವೃತ್ತಿಗಳನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕೆಂದು ಹಿಂದು ವಿದ್ಯಾದಾಯಿನೀ ಸಂಘದ ಅಧ್ಯಕ್ಷ ಜಯಚಂದ್ರ ಹತ್ವಾರ್ ನುಡಿದಿದ್ದಾರೆ. ಅವರು ಗೋವಿಂದದಾಸ ಕಾಲೇಜಿನ ಎಂ.ಕಾಂ. ಮತ್ತು ರಸಾಯನ ಶಾಸ್ತ್ರ ಎಂ.ಎಸ್ಸಿ ಸ್ನಾತಕೋತ್ತರ ವಿಭಾಗಗಳ ಸ್ನಾತಕೋತ್ತರ ವಿದ್ಯಾರ್ಥಿ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದರು.


ಕಾಲೇಜಿನ ಆಡಳಿತಾತ್ಮಕ ನಿರ್ದೇಶಕ ಪ್ರೊ. ರಮೇಶ್ ಕುಳಾಯಿ ಮಾತನಾಡಿ ವಿದ್ಯಾರ್ಥಿಗಳು ಆಧುನಿಕಜಗತ್ತಿನ ಹೊಸ ವ್ಯವಹಾರಿಕ ಕೌಶಲವನ್ನು ಅಭಿವೃದ್ಧಿಪಡಿಸಿಕೊಳ್ಳಬೇಕೆಂದರು.


ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ.ಪಿ. ಕೃಷ್ಣಮೂರ್ತಿ ಮಾತನಾಡಿ ಶಿಕ್ಷಣ ಹಾಗೂ ಕೈಗಾರಿಕಾ ಸಂಸ್ಥೆಗಳ ನಡುವೆ ಜ್ಞಾನ ವಿನಿಮಯದ ಅವಶ್ಯಕತೆಯಿದ್ದು ವಿದ್ಯಾರ್ಥಿಗಳನ್ನು ಭವಿಷ್ಯದ ಸವಾಲುಗಳಿಗೆ ಸಜ್ಜುಗೊಳಿಸುವಲ್ಲಿ ಕಾಲೇಜು ಶ್ರಮಿಸುತ್ತಿದೆ ಎಂದರು.


ಸ್ನಾತಕೋತ್ತರ ಎಂ.ಕಾಂ. ವಿಭಾಗದ ಮುಖ್ಯಸ್ಥ ಸಜನ್ ಎಂ. ಆಚಾರ್ಯ ಮತ್ತು ಎಂ.ಎಸ್ಸಿ ರಸಾಯನ ಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಕಾರ್ತಿಕ್‍ ಜೆ.ಎಸ್. ಶುಭ ಹಾರೈಸಿದರು. 


ಹಿಂದು ವಿದ್ಯಾದಾಯಿನೀ ಸಂಘದ ಜೊತೆ ಕಾರ್ಯದರ್ಶಿ ಎಂ.ಜಿ. ರಾಮಚಂದ್ರ, ಆಡಳಿತಾಧಿಕಾರಿ ಮೃದುಲಾ, ಕಾಲೇಜಿನ ಆಂತರಿಕ ಗುಣಮಟ್ಟ ಖಾತರಿ ಕೋಶದ ಸಂಯೋಜಕ  ಪ್ರೊ. ಹರೀಶಆಚಾರ್ಯ, ಪ್ರಾಧ್ಯಾಪಕಿಯರಾದ ದೀಕ್ಷಾ, ನಿರೀಕ್ಷಾ, ಲಾವಣ್ಯ ಶೆಟ್ಟಿ ಉಪಸ್ಥಿತರಿದ್ದರು.


ಡಾ. ಶ್ರುತಿ ಸ್ವಾಗತಿಸಿದರು.  ಭಾರತಿ ಧನ್ಯವಾದಗೈದರು. ಹರ್ಷರಾಣಿ ಬಹುಮಾನ ವಿಜೇತರ ಪಟ್ಟಿಯನ್ನು ವಾಚಿಸಿದರು. ವಿದ್ಯಾರ್ಥಿನಿಯರಾದ ಅಶ್ವಿತಾ ಮತ್ತು ಸಂಜನಾರಾವ್‍ ಕಾರ್ಯಕ್ರಮ ನಿರೂಪಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter 

إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top