ಸುರತ್ಕಲ್: ಸಮಾಜ ಸೇವಾಸಂಸ್ಥೆಗಳು ಶೈಕ್ಷಣಿಕ ಸಂಸ್ಥೆಗಳ ಅಭಿವೃದ್ಧಿಗೆ ಶ್ರಮಿಸುತ್ತಿರುವುದು ಸ್ವಾಗತಾರ್ಹ. ಸಮಾಜ ಸೇವೆಯ ಮೂಲಕ ರೋಟರಿ ಸಂಸ್ಥೆ ಅಂತರ್‍ರಾಷ್ಟ್ರೀಯ ಮಟ್ಟದಲ್ಲಿ ಮಾನ್ಯತೆ ಪಡೆದಿದೆ ಎಂದು 3181 ಜಿಲ್ಲಾ ರೋಟರಿಯ 2024-25 ರ ಚುನಾಯಿತ ಜಿಲ್ಲಾ ಗವರ್ನರ್ ರೊ.ವಿಕ್ರಮದತ್ತ ನುಡಿದಿದ್ದಾರೆ. ಅವರು ಸುರತ್ಕಲ್ ರೋಟರಿ ಕ್ಲಬ್‍ನ 2023-24 ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಪದಗ್ರಹಣ ನಡೆಸಿ ಮಾತನಾಡಿದರು.
ನೂತನ ಅಧ್ಯಕ್ಷರಾಗಿ ಯೋಗೀಶ್ ಕುಳಾಯಿ, ಕಾರ್ಯದರ್ಶಿಯಾಗಿ ರಮೇಶರಾವ್.ಎಂ., ಕೋಶಾಧಿಕಾರಿಯಾಗಿ ಉಮೇಶ ಭಟ್ ಅಧಿಕಾರ ಸ್ವೀಕರಿಸಿದರು.
ನಿರ್ದೇಶಕರಾಗಿ ಮುರಳೀಧರ ಅಡ್ಕೋಳಿ, ಕೆ. ರಾಜಮೋಹನ ರಾವ್, ಶಿವಾನಂದ ಹೆಚ್. ಎಂ., ಹೊಸಬೆಟ್ಟು ಮೋಹನ ರಾವ್, ಪ್ರದೀಪ್ ಕುಮಾರ್, ಸತೀಶ್ ರಾವ್ ಇಡ್ಯಾ, ರಾಘವೇಂದ್ರ ಪಿ., ಕೃಷ್ಣಮೂರ್ತಿ ಪಿ., ಚಂದ್ರಕಾಂತ್ ಮರಾಠೆ, ಪಿ. ಪುರುಷೋತ್ತಮ ರಾವ್, ಪಿ.ಶ್ರೀನಿವಾಸ ರಾವ್, ಆನಂದರಾವ್ ಎಂ., ಡಾ.ಬಾಲಕೃಷ್ಣ ಆಚಾರ್ಯ, ಹರಿಕೃಷ್ಣ ಪಿ, ವಿದ್ಯಾಲಕ್ಷ್ಮಿ ಅರವಿಂದ, ಸಚ್ಚಿದಾನಂದ, ನಿತೇಶ್ ಕುಮಾರ್, ಉಪಾಧ್ಯಕ್ಷರಾಗಿ ಭರತ್ ತಿಂಗಳಾಯ, ನಿಯೋಜಿತ ಅಧ್ಯಕ್ಷರಾಗಿ ಸಂದೀಪ್ ರಾವ್, ನಿಕಟ ಪೂರ್ವ ಅಧ್ಯಕ್ಷೆಯಾಗಿ ಯಶೋಮತಿ ಅಧಿಕಾರ ಸ್ವೀಕರಿಸಿದರು.
ನೂತನ ಸದಸ್ಯರಾಗಿ ಅಮರ್, ಡಾ.ಬಿ.ಮನು ಮತ್ತು ಸತೀಶ್ ಸದಾನಂದ ಸೇರ್ಪಡೆಗೊಂಡರು. ರೋಟರಿ 3181 ವಲಯ 2 ರ ಅಸಿಸ್ಟೆಂಟ್ ಜಿಲ್ಲಾ ಗವರ್ನರ್ ರೊ. ವಿನೋದ್‍ಕುಡ್ವ ವಿಶೇಷ ಸಂಚಿಕೆ ಸುಹೃತ್‍ನ್ನು ಬಿಡುಗಡೆಗೊಳಿಸಿದರು.
ನಿಗರ್ಮಿತ ಅಧ್ಯಕ್ಷೆ ಯಶೋಮತಿ ಅನುಭವಗಳನ್ನು ಹಂಚಿಕೊಂಡರು. ನೂತನ ಅಧ್ಯಕ್ಷ ಯೋಗೀಶ್ ಕುಳಾಯಿ ಕಾರ್ಯ ಯೋಜನೆಗಳನ್ನು ತಿಳಿಸಿದರು. ವಲಯ ಸೇನಾನಿ ಪ್ರವೀಣ್‍ಚಂದ್ರ ಶರ್ಮ ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಹಾಗೂ ಸಮವಸ್ತ್ರಗಳನ್ನು ವಿತರಿಸಿದರು.
ರವಿಲೋಚನ ಆಚಾರ್, ಶಶಿಧರ ತಂತ್ರಿ, ಡಾ. ಅರವಿಂದ ಭಟ್ ಉಪಸ್ಥಿತರಿದ್ದರು. ಸುರತ್ಕಲ್ ಇನ್ನರ್ ವೀಲ್ ಕ್ಲಬ್‍ನ ನಿಯೋಜಿತ ಅಧ್ಯಕ್ಷೆ ಸಾವಿತ್ರಿ ರಮೇಶ ಭಟ್ ಶುಭ ಹಾರೈಸಿದರು. ಕಾರ್ಯದರ್ಶಿ ರಮೇಶ ರಾವ್.ಎಂ ವಂದಿಸಿದರು. ಶ್ರೀಧರ ಟಿ.ಎನ್. ಕಾರ್ಯಕ್ರಮ ನಿರೂಪಿಸಿದರು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ