ಇತಿಹಾಸದ ಬರವಣಿಗೆಯಲ್ಲಿ ಶಾಸನಗಳ ಪಾತ್ರ ಹಿರಿದಾದುದು - ಪ್ರಶಾಂತ್ ಶೆಟ್ಟಿ

Upayuktha
0


ಸುರತ್ಕಲ್‌:
ಇತಿಹಾಸದ ಬರವಣಿಗೆಯಲ್ಲಿ ಶಾಸನಗಳ ಪಾತ್ರ ಹಿರಿದಾದುದು. ಸಾಹಿತ್ಯಿಕ ಹಾಗೂ ಲಿಖಿತ ಆಧಾರಗಳಲ್ಲಿನ ಗೊಂದಲಗಳನ್ನು ಸರಿಪಡಿಸಿ ಪೂರಕ ಮಾಹಿತಿಯನ್ನು ಶಾಸನಗಳು ಒದಗಿಸುತ್ತವೆ ಎಂದು ಬ್ರಹ್ಮಾವರ ಎಸ್ ಎಂ ಎಸ್ ಕಾಲೇಜಿನ ಪ್ರಾಧ್ಯಾಪಕ ಪ್ರಶಾಂತ್ ಶೆಟ್ಟಿ ನುಡಿದರು. ಅವರು ಗೋವಿಂದ ದಾಸ ಕಾಲೇಜಿನ ಆಂತರಿಕ ಗುಣಮಟ್ಟ ಖಾತರಿ ಕೋಶ,  ಮಾನವಿಕ ಸಂಘ ಹಾಗೂ ಇತಿಹಾಸ ವಿಭಾಗ ಏರ್ಪಡಿಸಿದ ‘ಎಫಿಗ್ರಫಿ’ ಕಾರ್ಯಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು. ಶಾಸನಗಳ ಅಧ್ಯಯನಕ್ಕೆ ಭಾಷೆ ಹಾಗೂ ಲಿಪಿಯ ಜ್ಞಾನ ಕೂಡಾ ಅವಶ್ಯಕವಾಗಿದ್ದು, ಲಿಪಿಯ ಬೆಳವಣಿಗೆ ಹಾಗೂ ಶಾಸನದ ಓದಿನ ವಿಧಾನವನ್ನು ತಿಳಿಸಿದರು.


ಮುಖ್ಯ ಅತಿಥಿ ಗೋವಿಂದ ದಾಸ ಕಾಲೇಜಿನ ಆಡಳಿತಾತ್ಮಕ ನಿರ್ದೇಶಕ ಪ್ರೊ.ರಮೇಶ್ ಕುಳಾಯಿ ಶಾಸನಗಳ ಮಹತ್ವವನ್ನು ತಿಳಿಸಿದರು.ಕಾಲೇಜಿನ ಪ್ರಾಂಶುಪಾಲ ಪ್ರೊ.ಕೃಷ್ಣಮೂರ್ತಿ ಪಿ. ಅಧ್ಯಕ್ಷತೆ ವಹಿಸಿ ಮಾತನಾಡಿ ತುಳುನಾಡಿನ ಇತಿಹಾಸ ಸಂಶೋಧನೆಗೆ ಹಿರಿಯ ಶಾಸನ ತಜ್ಞ ದಿ.ಕೆ.ವೆಂಕಟರಾಯಾಚಾರ್ಯರು ನೀಡಿದ ಕೊಡುಗೆಯನ್ನು ತಿಳಿಸಿದರು. ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರ ತಂಡ ಚಿತ್ರಾಪುರ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿರುವ ಶಾಸನಗಳ ಪ್ರಾತ್ಯಕ್ಷಿಕಾ ಅಧ್ಯಯನಕ್ಕೆ ಭೇಟಿನೀಡಿತು. ಪ್ರಶಾಂತ್ ಶೆಟ್ಟಿಯವರು ಶಾಸನಗಳ ಓದುವಿಕೆಯ ಕ್ರಮವನ್ನು ತಿಳಿಸಿ ಕೊಟ್ಟರು.


ಕಾಲೇಜಿನ ಉಪಪ್ರಾಂಶುಪಾಲ ಪ್ರೊ. ರಮೇಶ್ ಭಟ್ ಎಸ್.ಜಿ., ದೈಹಿಕ ನಿರ್ದೇಶಕ ಡಾ.ಪ್ರಶಾಂತ್, ಡಾ.ಕಾರ್ತಿಕ್, ರಶ್ಮಿ ಕಾಯರ್‍ಮಾರ್, ದಯಾ ಸುವರ್ಣ ಉಪಸ್ಥಿತರಿದ್ದರು. ಡಾ.ವಿಜಯಲಕ್ಷ್ಮೀ ಸ್ವಾಗತಿಸಿದರು. ಪ್ರೊ.ಹರೀಶ್ ಆಚಾರ್ಯ ವಂದಿಸಿದರು. ಪ್ರಾಕೃತ ಅಧ್ಯಯನ ಮತ್ತು ಸಂಶೋಧನ ಕೇಂದ್ರ ಶ್ರವಣಬೆಳಗೊಳದ ವತಿಯಿಂದ ಅಯೋಜಿಸಿದ ಪ್ರಾಕೃತ ಡಿಪ್ಲೋಮ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ನೀಡಲಾಯಿತು. ಸೌಪರ್ಣಿಕ ಕಾರ್ಯಕ್ರಮ ನಿರೂಪಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter   

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top