ಸಕಲ ಕಲಾ ನಿಪುಣೆ- ದೀಪ್ತಿ ಅಡ್ಡಂತ್ತಡ್ಕ

Upayuktha
0

ಸ್ಪಷ್ಟ ನಿಲುವು ಅಚಲವಾದ ಗುರಿ ಇದ್ದರೆ ನಾವು ಅಂದುಕೊಂಡದ್ದನ್ನು ನನಸಾಗಿಸುವ ಹಾದಿ ಹಿಡಿಯುವುದು ಸಾಧ್ಯವಾಗದೇನಲ್ಲ. ಇದೇ ರೀತಿಯಲ್ಲಿ ತನ್ನ ಕಿರಿಯ ವಯಸ್ಸಿನಿಂದಲೇ ತಾನೋರ್ವ ಸಾಹಿತಿ ಆಗಬೇಕೆಂಬ ಆಕಾಂಕ್ಷೆಯನ್ನಿರಿಸಿಕೊಂಡು ಪ್ರಸ್ತುತ ಅದೇ ದಾರಿಯಲ್ಲಿ ಸಾಗುತ್ತಿರುವವರು ದೀಪ್ತಿ ಅಡ್ಡಂತ್ತಡ್ಕ.


ಇವರು ಮೂಲತ: ಕಾಸರಗೋಡು ಜಿಲ್ಲೆಯ, ಕಾಸರಗೋಡು ತಾಲೂಕಿನ ದೇಲಂಪಾಡಿ ಗ್ರಾಮದವರು. ಒಂದರಿಂದ ಏಳನೇ ತರಗತಿಯವರೆಗೆ ಸರಕಾರಿ ಶಾಲೆ ಅಲಂತ್ತಡ್ಕ ಹಾಗೂ ಎಂಟರಿಂದ ಹತ್ತನೇ ತರಗತಿಯವರೆಗೆ ಗವರ್ನಮೆಂಟ್ ಹೈಸ್ಕೂಲ್ ಸುರುಳಿಮೂಲೆ ನೆಟ್ಟಣಿಗೆ ಮುಡ್ನೂರು ನಲ್ಲಿ ಹಾಗೂ ತಮ್ಮ ಹೈಸ್ಕೂಲ್ ಹಾಗೂ ಪಿಯುಸಿ ಶಿಕ್ಷಣವನ್ನು ಪುತ್ತೂರಿನ ಕೊಂಬೆಟ್ಟು ಕಾಲೇಜಿನಲ್ಲಿ ಪೂರ್ಣಗೊಳಿಸಿ ಪ್ರಸ್ತುತ ಪುತ್ತೂರಿನ ನೆಹರುನಗರದ ವಿವೇಕಾನಂದ ಮಹಾವಿದ್ಯಾಲಯದಲ್ಲಿ ದ್ವಿತೀಯ ವರ್ಷದ ಪತ್ರಿಕೋದ್ಯಮ ವಿದ್ಯಾರ್ಥಿನಿಯಾಗಿ ವ್ಯಾಸಂಗ ನಡೆಸುತ್ತಿದ್ದಾರೆ.


ಕಲಾ ಪ್ರವೀಣೆ

ದೀಪ್ತಿ ಇವರು ಬರವಣಿಗೆ ಕ್ಷೇತ್ರದಲ್ಲಿ ಉತ್ತಮ ಹಿಡಿತ ಹೊಂದಿದ್ದಾರೆ. ಕೇವಲ ಬರವಣಿಗೆ ಮಾತ್ರವಲ್ಲದೇ ಇನ್ನಿತರ ಕ್ಷೇತ್ರದಲ್ಲೂ ಆಸಕ್ತಿ ಹೊಂದಿರುವ ಇವರು ಅನೇಕ ಕಲೆಗಳನ್ನು ತಮ್ಮಲ್ಲಿ ಕರಗತ ಮಾಡಿಕೊಂಡಿದ್ದಾರೆ ಎಂದರೆ ತಪ್ಪಾಗಲಾರದು. ಈಕೆ ಓರ್ವ ಉತ್ತಮ ಯೋಗ ಪಟುವು ಹೌದು ಹಾಗೆ ನೃತ್ಯ ನಿಪುಣೆಯೂ ಹೌದು. ಪೆನ್ನು ಹಿಡಿದು ಬರೆಯಲೂ ಸೈ ಗೆಜ್ಜೆ ಕಟ್ಟಿ ಕುಣಿಯಲೂ ಸೈ ಎಂಬಂತೆ ವಿವಿಧ ಬಗೆಯ ನೃತ್ಯ ಅಭ್ಯಸಿಸಿದ್ದಾರೆ. ಹಲವಾರು ನೃತ್ಯ ಸ್ಪರ್ಧೆಗಳಲ್ಲಿ ಭಾಗವಹಿಸಿರುವ ಇವರು ರಾಜ್ಯಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ಮಿಂಚಿದ್ದಾರೆ. ನೃತ್ಯಭ್ಯಾಸವನ್ನು ವಿದ್ಯಾಶ್ರೀ ರೈ, ನಾಗರಾಜ್  ಹಾಗೂ ವಿದ್ಯಾಶ್ರೀ ಕಲ್ಲರ್ಪೆ ಇವರ ಬಳಿ ಹಾಗೆಯೇ ಭರತನಾಟ್ಯವನ್ನು ವಿಧುಶ್ರೀ ಯೋಗೀಶ್ವರಿ ಜಯಪ್ರಕಾಶ್ ಇವರ ಬಳಿ ಕರಗತ ಮಾಡಿಕೊಂಡರು. ಭರತನಾಟ್ಯ ಪ್ರವೀಣೆಯಾದ ಈಕೆ ಜೂನಿಯರ್ ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್ ಪಡೆದುಕೊಂಡಿದ್ದಾರೆ. ಮಾತ್ರವಲ್ಲದೇ ಯಕ್ಷಗಾನ ಅರ್ಥಗಾರಿಕೆ, ನಾಟಕ, ದ್ವನಿ ಡಬ್ಬಿಂಗ್, ಟೈಲರಿಂಗ್ ನಲ್ಲಿ ತೊಡಗಿಸಿಕೊಂಡಿದ್ದಾರೆ.


ಕ್ರೀಡಾ ಕ್ಷೇತ್ರದಲ್ಲೂ ಆಸಕ್ತಿ ಹೊಂದಿರುವ ಇವರು ಉತ್ತಮ ಖೋಖೋ ಆಟಗಾರ್ತಿ. ಹಲವಾರು ಪ್ರಶಸ್ತಿ ಪುರಸ್ಕಾರಗಳನ್ನು ಮೂಡಿಗೆರಿಸಿಕೊಂಡಿದ್ದಾರೆ. ನೆಟ್ಟಣಿಗೆ ಮುಡ್ನೂರು, ಕರ್ನೂರು ಹೈಸ್ಕೂಲ್ ನ ದೈಹಿಕ ಶಿಕ್ಷಕ ದೇವಿಪ್ರಕಾಶ್ ಇವರಲ್ಲಿ ತರಬೇತಿ ಪಡೆದುಕೊಂಡಿದ್ದಾರೆ. ತಾಲೂಕು ಮಟ್ಟದ ಖೋ ಆಟದಲ್ಲಿ ಆಲ್ ರೌಂಡರ್ ಪ್ರಶಸ್ತಿಯನ್ನು ಬಾಚಿಕೊಂಡಿದ್ದಾರೆ.


ಸಾಹಿತ್ಯದೆಡೆಗಿನ ಅಪಾರ ಒಲವು

ತಮ್ಮ ಕಿರಿಯ ವಯಸ್ಸಿನಿಂದಲೂ ಸಾಹಿತ್ಯದೆಡೆಗೆ ಹೆಚ್ಚಿನ ಆಸಕ್ತಿ ಹೊಂದಿದ ದೀಪ್ತಿಯವರು ತಾನು ವಾಣಿಜ್ಯ ವಿಭಾಗದ ವಿದ್ಯಾರ್ಥಿನಿಯಾಗಿದ್ದರೂ ಕೂಡ ತಮ್ಮ ಪಿಯುಸಿ ನಂತರದ ಶಿಕ್ಷಣಕ್ಕಾಗಿ ಪತ್ರಿಕೋದ್ಯಮ ವಿಭಾಗವನ್ನು ಆರಿಸಿಕೊಂಡರು. ತನ್ನ ಆಸಕ್ತಿಯನ್ನು ಇನ್ನಷ್ಟು ಹೆಚ್ಚು ಕಾರ್ಯರೂಪಕ್ಕೆ ತರಲು ಪತ್ರಿಕೋದ್ಯಮವು ಸಹಕಾರಿಯಾಯಿತು ಎನ್ನುತ್ತಾರೆ ದೀಪ್ತಿ.


"ಲೇಖನಗಳನ್ನು ಬರೆಯಬೇಕೆಂದು ಬಹಳ ಆಸೆ ಇತ್ತು. ಆದರೆ ಯಾವ ರೀತಿಯಾಗಿ ಪ್ರಾರಂಭಿಸಬೇಕು ಎಂದು ತಿಳಿಯುತ್ತಿರಲಿಲ್ಲ. ತರಗತಿಯಲ್ಲಿ ಮೇಡಂ ಬಂದು ಚಿಕ್ಕ ಚಿಕ್ಕ ವಿಷಯಗಳಿಂದಲೇ  ಬರೆಯುವ  ಮೂಲಕ ನಿಮ್ಮನ್ನು ತೊಡಗಿಸಿಕೊಳ್ಳಿ ಎಂದರು. ನಾನು ಮೊದಲು ಒಂದು ಸಣ್ಣ ಕವನ ಬರೆದೆ. ನಂತರದ ದಿನಗಳಲ್ಲಿ ಹೆಚ್ಚು ಹೆಚ್ಚು ಬರವಣಿಗೆಯಲ್ಲಿ ತೊಡಗಿಸಿಕೊಂಡೆ. ಇದು ಇವರ ಮಾತುಗಳು.


ನನ್ನ ಅಮ್ಮನೇ ನನ್ನ ಶಕ್ತಿ

ನೂರಕ್ಕೂ ಅಧಿಕ ಲೇಖನ ಸೇರಿದಂತೆ ಇನ್ನಿತರ ಬರಹಗಳನ್ನು ಬರೆದಿರುವ ಇವರಿಗೆ ಇವರ ಮನೆಯವರ ಪ್ರೋತ್ಸಾಹ ಉತ್ತಮವಾಗಿದೆ. ಅದರಲ್ಲೂ ತನ್ನ ತಾಯಿ ನನಗೆ ಇಲ್ಲಿಯವರೆಗೂ ಯಾವುದೇ ಸ್ಪರ್ಧೆ ಆಗಿರಬಹುದು ಅಥವಾ ಇನ್ನಿತರ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತೇನೆ ಎಂದಾಗ ಯಾವುದಕ್ಕೂ ಅಡ್ಡಿಯುಂಟು ಮಾಡಿಲ್ಲ. ಹೆಚ್ಚು ಪ್ರೋತ್ಸಾಹಿಸಿ ಕಳುಹಿಸಿ ಕೊಡುತ್ತಾರೆ. ನಾನು ಇಂದು ಏನೇ ಸಾಧನೆ ಮಾಡಿದ್ದರೂ ಅವುಗಳ ಹಿಂದಿರುವ ಶಕ್ತಿಯೇ ನನ್ನಮ್ಮ ಎಂದು ತಮ್ಮ ತಾಯಿಯ ಪ್ರೋತ್ಸಾಹವನ್ನು ನೆನೆಯುತ್ತಾರೆ.


ಇವರ ಅಕ್ಕನಿಗೆ ಪತ್ರಿಕೋದ್ಯಮ ವ್ಯಾಸಂಗ ಮಾಡಬೇಕೆಂಬ ಆಸೆ ಇತ್ತು. ಆದರೆ ಕಾರಣಾಂತರಗಳಿಂದ ಬಿ.ಕಾಂ ವ್ಯಾಸಂಗಕ್ಕೆ ತೆರಳಿದರು. ಆದರೆ ತನ್ನ ಕನಸನ್ನು ತನ್ನ ತಂಗಿಯು ಇಂದು ನನಸು ಮಾಡುತ್ತಿದ್ದಾಳೆ ಎಂದುಕೊಂಡು ದೀಪ್ತಿ ಇವರಿಗೆ ಇವರ ಅಕ್ಕನ ಪ್ರೋತ್ಸಾಹವು ಹೆಚ್ಚಿದೆ. ತಮ್ಮ ಭವಿಷ್ಯದ ದಿನಗಳಲ್ಲಿ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಮುಂದುವರೆದು ಏನಾದರೂ ಸಾಧನೆ ಮಾಡಿ ತನ್ನ ತಾಯಿಯನ್ನು ಬಹಳ ಚೆನ್ನಾಗಿ ನೋಡಿಕೊಳ್ಳಬೇಕು ಎಂಬ ಇರಾದೆ ಹೊಂದಿದ್ದಾರೆ. ಇವರ ಎಲ್ಲಾ ಆಸೆ ಕನಸುಗಳು ಈಡೇರಲಿ. ಒಳ್ಳೆಯ ಹೆಸರು ಗಳಿಸುವಂತಾಗಲಿ.

 -ಪ್ರಸಾದಿನಿ. ಕೆ ತಿಂಗಳಾಡಿ

ಪ್ರಥಮ ಪತ್ರಿಕೋದ್ಯಮ ವಿಭಾಗ

ವಿವೇಕಾನಂದ ಮಹಾವಿದ್ಯಾಲಯ (ಸ್ವಾಯತ್ತ) ಪುತ್ತೂರು


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter  

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top