ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬಜೆಟ್ ಮಂಡಿಸುವುದರಲ್ಲಿ ಹೊಸ ದಾಖಲೆ ಏನೇೂ ಮಾಡಿದರು. ಆದರೆ ಚುನಾವಣಾ ಕಾಲದಲ್ಲಿ ಕೊಟ್ಟ ಗ್ಯಾರಂಟಿಗೆ ಹಣ ತುಂಬಿಸುವುದರಲ್ಲಿ ಸುಸ್ತಾಗಿ ಹೇೂಗಿದ್ದಾರೆ ಅನ್ನುವುದು ಸ್ವಷ್ಟವಾಗಿ ಈ ಬಾರಿಯ ಬಜೆಟ್ ಮಂಡನೆಯಲ್ಲಿ ಸ್ವಷ್ಟವಾಗಿ ಕಾಣುತ್ತದೆ. ತೆರಿಗೆಯ ಹೆಚ್ಚಳ ಇದು ಜನ ಸಾಮಾನ್ಯರ ದಿನ ನಿತ್ಯದ ಬದುಕಿನ ಮೇಲೆ ನೇರ ಪರಿಣಾಮ ಬೀರುವುದಂತೂ ಸತ್ಯ. ಹಾಗಾಗಿ ಉಚಿತವಾಗಿ ನೀಡಿದ ಗ್ಯಾರಂಟಿಯ ಫಲವಾಗಿ ಬೆಲೆ ಏರಿಕೆಯ ಬಿಸಿ ಜನಸಾಮಾನ್ಯರನ್ನು ತಟ್ಟಿದರೂ ಆಶ್ಚರ್ಯಪಡಬೇಕಾಗಿಲ್ಲ.
ಈ ಗ್ಯಾರಂಟಿಯ ಹೊಂಡವನ್ನು ತುಂಬಿಸಲು ಶೇ.26 ರಷ್ಟು ಸಾಲಕ್ಕೆ ಕೈ ಹಾಕಬೇಕಾದದ್ದು ಅಭಿವೃದ್ಧಿಯ ದೃಷ್ಟಿಯಿಂದ ಪೂರಕವಲ್ಲ. ಬದಲಾಗಿ ಉದ್ಯೋಗ ಶಿಕ್ಷಣ ಆರೇೂಗ್ಯ ರಂಗಕ್ಕೆ ಹೆಚ್ಚಿನ ಒತ್ತು ಕೊಡಬಹುದಿತ್ತು. ಇನ್ನೊಂದು ಅಥ೯ದಲ್ಲಿ ಸಿದ್ದರಾಮಯ್ಯನವರ ಹೊಸ ದಾಖಲೆಯ ಬಜೆಟ್ "ಅಹಿಂದ" ಬಜೆಟ್ ಅಂದರೂ ತಪ್ಪಾಗಲಾರದು. ಬಹುಮುಖ್ಯವಾಗಿ ತಾವು ನಂಬಿಕೊಂಡ ಅಲ್ಪಸಂಖ್ಯಾತರು ಹಿಂದುಳಿದ ವರ್ಗಗಳನ್ನು ತೃಪ್ತಿಪಡಿಸುವ ಕೆಲಸ ಈ ಬಜೆಟ್‌ನಲ್ಲಿ ಸ್ವಷ್ಟವಾಗಿ ಕಾಣುತ್ತದೆ.
ಕೇವಲ ಒಂದು ವರುಷದ ಹಿಂದೆ ಬಿಜೆಪಿ ಸರ್ಕಾರ ತಂದ ಹೊಸ ಶಿಕ್ಷಣ ನೀತಿಯನ್ನು ಸಂಪೂರ್ಣವಾಗಿ ಕೈಬಿಡುವ ನಿರ್ಧಾರ ಸರಿ ಅಲ್ಲ. ಅಲ್ಪಸ್ವಲ್ಪ ಲೇೂಪ ದೇೂಷಗಳನ್ನು ಸರಿಪಡಿಸಿ ಮುಂದುವರಿಸ ಬೇಕಿತ್ತು. ಸರ್ಕಾರ ಬದಲಾದ ಹಾಗೆ ಶಿಕ್ಷಣ ಕ್ರಮ ಬದಲಾಯಿಸುವುದರಿಂದ ಇದರ ತೊಂದರೆ ಅನುಭವಿಸುವುದು ಶಿಕ್ಷಣ ಕ್ಷೇತ್ರದಲ್ಲಿ ನೇರವಾಗಿ ತೊಡಗಿಸಿಕೊಂಡ ಶಿಕ್ಷಕರು ವಿದ್ಯಾರ್ಥಿಗಳು ಹಾಗೂ ಹೆತ್ತವರು.
ಕಾಂಗ್ರೆಸ್ ಚುನಾವಣಾ ಸಂದರ್ಭದಲ್ಲಿ ಗ್ಯಾರಂಟಿ ಹೊರತಾಗಿ ನೀಡಿದ ಭರವಸೆಗಳಾದ ಆಶಾ ಕಾರ್ಯಕರ್ತರ ಸಮಸ್ಯೆಯಾಗಲಿ ಸರ್ಕಾರಿ ನೌಕರರ ಹಳೆ ಪಿಂಚಣಿ ಬೇಡಿಕೆಗಳಾಗಲಿ ಸರಕಾರಿ ನೌಕರರ ಏಳನೇ ವೇತನದ ಕುರಿತಾಗಿ ಯಾವುದೆ ವಿಚಾರ ಬಜೆಟ್‌ನಲ್ಲಿ ಪ್ರಸ್ತಾವನೆ ಮಾಡದೇ ಇರುವುದು ಅವರ ಕೇಳಿ ಓಟು ನೀಡಿದ ಮತದಾರರಿಗೆ ತುಂಬಾ ಬೇಸರ ತಂದಿರುವುದಂತೂ ಸತ್ಯ.
ಅಭಿವೃದ್ಧಿ ಕೆಲಸಗಳಿಗೆ ಈ ಬಜೆಟ್‌ನಲ್ಲಿ ಯಾವುದೇ ಆದ್ಯತೆ ಇಲ್ಲ. ಬರೇ ಗೇೂಡೆಗಳಿಗೆ ಬಣ್ಣ ಬಳಿಯುವ ಕೆಲಸದಂತಿದೆ. ಪ್ರವಾಸೋದ್ಯಮ ಮೀನುಗಾರಿಕೆ ಮುಂತಾದ ವಲಯಗಳಿಗೆ ಯಾವುದೇ ಆದ್ಯತೆ ಇಲ್ಲ. ಇಷ್ಟೆಲ್ಲಾ ಹಣಕಾಸು ಆಡಚಣೆಯ ನಡುವೆ ಕನಕಪುರಕ್ಕೆ ಮೆಡಿಕಲ್ ಕಾಲೇಜು ನೀಡುವ ಭರವಸೆ ಉಪ ಮುಖ್ಯಮಂತ್ರಿಗಳನ್ನು ತೃಪ್ತಿ ಪಡಿಸುವುದು ಸ್ವಷ್ಟವಾಗಿ ಕಾಣಿಸುತ್ತದೆ.
ಅಂತೂ ಸಿದ್ದರಾಮಯ್ಯನವರ ಹದಿನಾಲ್ಕನೇ ಬಜೆಟ್ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಿದವರಿಗೆ ನೀಡಿದ ಅನು"ದಾನ"ವೆಂದೇ ವ್ಯಾಖ್ಯಾನಿಸಬೇಕಾಗಿದೆ.
-ಪ್ರೊ. ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಉಡುಪಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ