ಶಂಕರ ಸಾಹಿತ್ಯ ಪ್ರಶಸ್ತಿ ಪ್ರದಾನ, 'ತಿರಿ' ಪುಸ್ತಕ ಲೋಕಾರ್ಪಣೆ

Upayuktha
0

ಭಾಷೆಯು ಸಾಹಿತ್ಯದ ಲಿಖಿತ ಮಾಧ್ಯಮವಾಗಿದೆ: ಡಾ. ಕೆ.ಎಂ ಕೃಷ್ಣ ಭಟ್ 


ಪುತ್ತೂರು: ಎಲ್ಲಾ ಭಾಷೆಯು ಒಂದೇ ರೀತಿಯ ಆಯಾಮವನ್ನು ಹೊಂದಿಲ್ಲ. ಇದನ್ನು ಜಗತ್ತಿಗೆ ಪರಿಚಯಿಸುವುದು ಮಹತ್ತರ ಕೆಲಸವಾಗಿದೆ. ಶ್ರಮಪಟ್ಟು ಮಾಡಿದ ಕೆಲಸಕ್ಕೆ ಜೀವನದುದ್ದಕ್ಕೂ ಯಶಸ್ಸನ್ನು ಪಡೆಯಲು ಅನೇಕ ದಾರಿಗಳು ಸಿಗುತ್ತದೆ ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ. ಕೆ.ಎಂ ಕೃಷ್ಣ ಭಟ್ ಹೇಳಿದರು.


ಡಾ.ಮನಮೋಹನ ಇವರ ತಿರಿ ಎಂಬ ಕೃತಿ ಅದ್ಭುತವಾಗಿದೆ. ಈ ಪುಸ್ತಕದಲ್ಲಿ ಮೋಡಗಳೇ ನಮಗೆ ನೀರಿನ ಆಧಾರ ಎಂದು ಉಲ್ಲೇಖಿಸಲಾಗಿದೆ. ನೀರು ಮತ್ತು ಕೃಷಿ ಎರಡರಲ್ಲೂ ಸಮೀಕರಿಸಿದ್ದು ಆಧುನಿಕತೆಯ ವಿಷಯಗಳ ಮೂಲಕ ಸುಸ್ಥಿರತೆಯಿಂದ ಅಸ್ಥಿರತೆಯ ಕಡೆಗೆ ಸಾಗುವುದು. ಈಗಿನ ಕಾಲದಲ್ಲಿ ನಾಶ ಆಗುವ ವಿಚಾರಗಳನ್ನು ಮನನ ಮಾಡುವವರು ಕಡಿಮೆ ಆಗಿದ್ದಾರೆ ಎಂದು ಅಭಿಪ್ರಾಯಪಟ್ಟರು.


ಇವರು ಇಲ್ಲಿನ ವಿವೇಕಾನಂದ ಕಲಾ ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ) ದ ಕನ್ನಡ ಸಂಘ ಮತ್ತು ಐಕ್ಯೂಎಸಿ ಇದರ ಸಹಯೋಗದಲ್ಲಿ ನಡೆದ ಶಂಕರ ಸಾಹಿತ್ಯ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ತಿರಿ ಪುಸ್ತಕ ಲೋಕಾರ್ಪಣ ಕಾರ್ಯಕ್ರಮದ ಅಧ್ಯಕ್ಷರಾಗಿ ಮಾತನಾಡಿದರು.

  

ಈ ಸಂದರ್ಭದಲ್ಲಿ ಶಂಕರ ಸಾಹಿತ್ಯ ಪ್ರಶಸ್ತಿ ಪುರಸ್ಕಾರಕ್ಕೆ ಭಾಜನರಾದ ಡಾ. ವಿಘ್ನರಾಜ್ ಎಸ್. ಆರ್ ಮಾತನಾಡಿ, ಗ್ರಂಥಗಳನ್ನು ಉಳಿಸುವುದು ಬಹುಮುಖ್ಯ. ಇದನ್ನು ಸಂರಕ್ಷಿಸುವುದರಿಂದ ಕೃತಿಯು ಉಳಿಯುತ್ತದೆ ಎಂದು ಹೇಳಿದರು. ಅನೇಕ ಪ್ರಾಚೀನ ಮನೆಗಳಲ್ಲಿ ಇಂದಿಗೂ ಗ್ರಂಥಗಳಿವೆ. ಅವುಗಳನ್ನು ಸಂರಕ್ಷಿಸಿದರೆ ಅಪರೂಪದ ಕೃತಿಗಳು ಸಿಗುವುದಕ್ಕೆ ಸಾಧ್ಯ, ಹಳೆಯ ಕೃತಿಗಳು ಬೆಳಕಿಗೆ ಬರಬೇಕಿದೆ, ಇಂತಹ ಪುಣ್ಯ ಕೆಲಸವನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಹೆಗ್ಗಡೆಯವರು ಮುಂದುವರಿಸುತ್ತಾ ಬರುತ್ತಿದ್ದಾರೆ. ಅವರಿಂದ ಇಂದು ನನಗೆ ಶಂಕರ ಸಾಹಿತ್ಯ ಪ್ರಶಸ್ತಿ ದೊರಕುವುದಕ್ಕೆ ಸಾಧ್ಯವಾಯಿತು ಎಂದರು.

   

ತಿರಿ ಕೃತಿಯನ್ನು ಲೋಕಾರ್ಪಣೆ ಮಾಡಿದ ಮುಖ್ಯ ಅತಿಥಿ ಡಾ.ರಾಧಾಕೃಷ್ಣ ಬೆಳ್ಳೂರು ಮಾತನಾಡಿ, ಹಿಂದಿನ ಕಾಲದಲ್ಲಿ ತಾಳೆ ಗರಿಗಳ ಮೇಲೆ ಗ್ರಂಥವನ್ನು  ಬರೆಯುತ್ತಿದ್ದರು. ಆದರೆ ಅಂತಹ ಗ್ರಂಥಗಳು ಈಗ ಕಾಣಸಿಗುವುದು ಕಡಿಮೆಯಾಗಿದೆ. ಅದನ್ನು ಸಂಶೋಧನೆ ಮಾಡಿ ಸಂಗ್ರಹಿಸುವುದೇ ಹರ ಸಾಹಸವಾಗಿದೆ. ಹಾಗೆಯೇ ಆ ಗ್ರಂಥಗಳನ್ನು ಉಳಿಸುವುದು ನಮ್ಮ ಕರ್ತವ್ಯವಾಗಿದೆ ಎಂದು ನುಡಿದರು.


ಈ ಸಂದರ್ಭದಲ್ಲಿ ಕಾಲೇಜಿನ ವಿಶ್ರಾಂತ ಪ್ರಾಂಶುಪಾಲ ಡಾ. ಪೀಟರ್ ವಿಲ್ಸನ್ ಪ್ರಭಾಕರ್ ಕೃತಿಯ ಬಗೆಗೆ ಮಾತನಾಡಿದರು. ಕಾರ್ಯಕ್ರಮದಲ್ಲಿ  ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಡಾ. ಶ್ರೀಪತಿ ಕಲ್ಲೂರಾಯ, ಸಂಚಾಲಕ ಮುರಳಿ ಕೃಷ್ಣ ಕೆ.ಎನ್, ಪ್ರಾಂಶುಪಾಲ ಪ್ರೊ. ವಿಷ್ಣು ಗಣಪತಿ ಭಟ್, ತಿರಿ ಕೃತಿಯ ಲೇಖಕ ಮತ್ತು ಕನ್ನಡ ವಿಭಾಗದ ಉಪನ್ಯಾಸಕ ಡಾ. ಮನಮೋಹನ ಎಂ, ಪರೀಕ್ಷಾಂಗ ಕುಲಸಚಿವ ಡಾ. ಎಚ್‌.ಜಿ ಶ್ರೀಧರ್ ಉಪಸ್ಥಿತರಿದ್ದರು.


ಕನ್ನಡ ವಿಭಾಗದ ಉಪನ್ಯಾಸಕ ಡಾ. ಮನಮೋಹನ್ ಎಂ ವಂದಿಸಿ, ಉಪನ್ಯಾಸಕಿ ಡಾ. ಗೀತಾ ಕುಮಾರಿ ಟಿ ಕಾರ್ಯಕ್ರಮವನ್ನು ನಿರ್ವಹಿಸಿದರು. ವಿದ್ಯಾರ್ಥಿನಿಯರಾದ ಸೌಮ್ಯ ಮತ್ತು ದೀಪ ಪ್ರಾರ್ಥಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter  

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top