ಎಸ್ಸೆಸ್ಸೆಲ್ಸಿ ಸಾಧನೆ: ಯಲ್ಲಾಪುರ ಮೊಳೆಮನೆಯ ಶ್ರೀಕೃಷ್ಣ ಗಣಪತಿ ಭಟ್‌ಗೆ ಸನ್ಮಾನ

Upayuktha
0

ಪಣಜಿ: ಗೋವಾ ರಾಜಧಾನಿ ಪಣಜಿಯ ಪೀಪಲ್ಸ್‌ ಹೈಸ್ಕೂಲ್‍ನಲ್ಲಿ ವ್ಯಾಸಂಗ ಮಾಡುತ್ತಿರುವ ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಮೊಳೆಮನೆಯ ಶ್ರೀಕೃಷ್ಣ ಗಣಪತಿ ಭಟ್ ಈತನು ಪ್ರಸಕ್ತ ವರ್ಷದ 10 ನೇಯ ತರಗತಿ ಇಂಗ್ಲೀಷ್ ಮಾಧ್ಯಮದಲ್ಲಿ ಶೇ 92ರಷ್ಟು ಅಂಕ ಪಡೆದು ಸಾಧನೆಗೈದಿದ್ದು, ಈತನ ಸಾಧನೆ ಗುರುತಿಸಿ ಹವ್ಯಕ ವಲಯ ಗೋವಾ ವತಿಯಿಂದ ಮಡಗಾಂವ ವೀರಶೈವ ಲಿಂಗಾಯತ ಮಠದಲ್ಲಿ ಭಾನುವಾರ ಆಯೋಜಿಸಿದ್ದ ವಾರ್ಷಿಕ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.


ಕುಮಟಾ ಹವ್ಯಕ ಮಂಡಳದ ಅಧ್ಯಕ್ಷರಾದ ಜಿ.ಎಸ್.ಹೆಗಡೆ, ಹೊನ್ನಾವರ ಮಂಡಳದ ಅಧ್ಯಕ್ಷರಾದ ಆರ್.ಜಿ.ಹೆಗಡೆ, ಕುಮಟಾ ಮಂಡಳದ ಉಪಾಧ್ಯಕ್ಷರಾದ ಎಸ್.ವಿ.ಹೆಗಡೆ, ಕುಮಟಾ ಮಂಡಳದ ಕೋಶಾಧ್ಯಕ್ಷರಾದ ಜಿ.ಎಸ್.ಉಪ್ಪುಂದ, ಹಾಗೂ ಗೋವಾ ಹವ್ಯಕ ವಲಯದ ಅಧ್ಯಕ್ಷ ಈಶ್ವರ ಹೆಗಡೆ, ಸ.ಕಾರ್ಯದರ್ಶಿ ಮಂಜುನಾಥ ಹೆಗಡೆ, ಸ.ಕಾರ್ಯದರ್ಶಿ ಗಿರೀಶ್ ಹೆಗಡೆ, ಹವ್ಯಕ ವಲಯದ ಮಹಾಬಲ ಭಟ್, ನಿವೃತ್ತ ಪ್ರಾಚಾರ್ಯ ಶ್ರೀಪಾದ ಎನ್. ಭಟ್ ಉಪಸ್ಥಿತರಿದ್ದು ವಿದ್ಯಾರ್ಥಿ ಶ್ರೀಕೃಷ್ಣನನ್ನು ಸನ್ಮಾನಿಸಿದರು.


ಶ್ರೀಕೃಷ್ಣ ಭಟ್ ಈತನು ವ್ಯಾಸಂಗ ಮಾಡುತ್ತಿರುವ ಪಣಜಿಯ ಪೀಪಲ್ಸ್‌ ಸ್ಕೂಲ್‍ನಲ್ಲಿ ನಡೆದ ಶಾರ್ಟ್‌ ಫಿಲ್ಮ್‌ ಸ್ಫರ್ಧೆಯಲ್ಲಿಯೂ ಕೂಡ ಪ್ರಶಸ್ತಿ ಪಡೆದು ಸಾಧನೆಗೈದಿದ್ದ. ಉತ್ತರ ಕನ್ನಡ ಮೂಲದ ಶ್ರೀಕೃಷ್ಣ ಈತನು ಗೋವಾ ರಾಜಧಾನಿ ಪಣಜಿಯಲ್ಲಿ ಇಂಗ್ಲೀಷ್ ಮಾಧ್ಯಮ ಶಾಲೆಯಲ್ಲಿ ಹತ್ತನೇಯ ತರಗತಿಯಲ್ಲಿ ಹೆಚ್ಚಿನ ಅಂಕ ಗಣಿಸಿ ಸಾಧನೆಗೈದಿದ್ದಕ್ಕೆ ಗೋವಾ ಕನ್ನಡಿಗರಿಂದ, ಕನ್ನಡ ಸಂಘಟನೆಗಳಿಂದ ಪ್ರಶಂಸೆ ವ್ಯಕ್ತವಾಗುತ್ತಿದೆ. ಶ್ರೀಕೃಷ್ಣ ಭಟ್ ಈತನು ಗಣಪತಿ ಹಾಗೂ ಪಾರ್ವತಿ ಭಟ್ ದಂಪತಿಗಳ ಮಗನಾಗಿದ್ದಾನೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter  

إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top