ಉಜಿರೆ ಎಸ್‌ಡಿಎಂ ಕಾಲೇಜಿನ 19 ವರ್ಷದ ಬಾಲಕನ 'ಘಾಟ್ ಸ್ಟೇ' ಸಂಸ್ಥೆಗೆ ಪ್ರತಿಷ್ಠಿತ ಪ್ರಶಸ್ತಿ

Upayuktha
0

ಕರ್ನಾಟಕ ಟ್ರೇಡರ್ಸ್ ಚೇಂಬರ್ ಆಫ್ ಕಾಮರ್ಸ್‌ನಿಂದ best homestay booking platform of the year



ಉಜಿರೆ: ಉಜಿರೆ ಎಸ್‌ಡಿಎಂ ಕಾಲೇಜಿನ ಯುವಕ ಸಾಧನೆ ಮಾಡಿ, ಯುವ ಜನತೆಗೆ ಮಾದರಿಯಾಗಿದ್ದಾನೆ. ಹೌದು, ಅತಿ ಸಣ್ಣ ವಯಸ್ಸಿಗೆ ಯುವಕ 'ಘಾಟ್ ಸ್ಟೇ' ಸಂಸ್ಥೆ ಸ್ಥಾಪಿಸಿ ಪ್ರತಿಷ್ಟಿತ ಕರ್ನಾಟಕ ಟ್ರೇಡರ್ಸ್ ಚೇಂಬರ್ ಆಫ್ ಕಾಮರ್ಸ್ ಅವರು ಆಯೋಜಿಸಿದ Karnataka business awards 2023ನಲ್ಲಿ best homestay booking platform of the year ಪ್ರಶಸ್ತಿ ಬಾಚಿಕೊಂಡಿದ್ದಾನೆ.


ಹೊರನಾಡಿನ ಹೊಸನೆಲದ ಜಯಲೀಲಾ ಮತ್ತು ಮಂಜಪ್ಪ ದಂಪತಿಯ ಮಗ ಸುಜನ್ ಜೈನ್ (19) ಘಾಟ್ ಸ್ಟೇ ಸಂಸ್ಥೆ ಸ್ಥಾಪಿಸಿದ್ದು, ಈ ಸಂಸ್ಥೆ ಹೋಂಸ್ಟೇಗಳ ಬುಕಿಂಗ್ ಪ್ಲಾಟ್‍ಫಾರ್ಮ್ ವಿಭಾಗದಲ್ಲಿ ರಾಜ್ಯ ಮಟ್ಟದಲ್ಲಿ ಪ್ರಶಸ್ತಿಗೆ ನಾಮಿನೇಷನ್ ಪಡೆದಿತ್ತು. ಸದ್ಯ ಸುಜನ್ ಜೈನ್ ಅವರ ಘಾಟ್ ಸ್ಟೇ ಸಂಸ್ಥೆ ಕರ್ನಾಟಕ ಟ್ರೇಡರ್ ಚೇಂಬರ್ ಆಫ್ ಕಾಮರ್ಸ್ ಸಂಸ್ಥೆಯ ಬುಸಿನೆಸ್ ಪುರಸ್ಕಾರ 2023 ಗಳಿಸಿದೆ.



ಬೆಂಗಳೂರಿನ ಇಬಿಸು ಸ್ಟುಡಿಯೊದಲ್ಲಿ ಇತ್ತೀಚೆಗೆ ನಡೆದ ವರ್ಣರಂಜಿತ ಕಾರ್ಯಕ್ರಮದಲ್ಲಿ ಸುಜನ್ ಜೈನ್ ಪ್ರತಿಷ್ಟಿತ best homestay booking platform ಪ್ರಶಸ್ತಿಯನ್ನು ಪಡೆದರು. ಈ ಸಂದರ್ಭದಲ್ಲಿ ಯುವಕನ ತಾಯಿ ಜಯಲೀಲಾ ಅವರೂ ವೇದಿಕೆಯಲ್ಲಿದ್ದು, ಮಗನ ಯಶಸ್ಸು ಕಂಡು ಆನಂದಿಸಿದರು.


ಸುಜನ್ ಪ್ರಸ್ತುತ ಉಜಿರೆ ಎಸ್‍ಡಿಎಂ ಕಾಲೇಜಿನಲ್ಲಿ ಬಿ ವೊಕ್ ಪದವಿಯ ಎರಡನೇ ಸೆಮಿಸ್ಟರ್ ವ್ಯಾಸಂಗ ಮಾಡುತ್ತಿದ್ದಾರೆ. ಅತಿ ಸಣ್ಣ ವಯಸ್ಸಿಗೆ ಯುವಕನ ಈ ಸಾಧನೆ ಯುವ ಜನತೆಗೆ ಮಾದರಿಯಾಗಿದೆ. ಹೆತ್ತವರಿಗೆ ಹೆಮ್ಮೆಯ ವಿಷಯವೂ ಆಗಿದೆ.


- ದರ್ಶನ್, ಮಡಂತ್ಯಾರು

ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter 


إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top