ರಾಮಾಯಣ ಹಕ್ಕಿನೋಟ-1: ಪ್ರತಿದಿನ ರಾಮಾಯಣ ಕಿರು ಮಾಹಿತಿ

Upayuktha
0

ರಾಮಾಯಣ ಮಾಸಾಚರಣೆ ಪ್ರಯುಕ್ತ ಪ್ರತಿದಿನ ರಾಮಾಯಣದ ಬಗ್ಗೆ ಕಿರು ಮಾಹಿತಿ



ಓಂ ಶ್ರೀರಾಮಾಯ ನಮ:

ಬ್ರಹ್ಮನು ನೂರು ಕೋಟಿ ಶ್ಲೋಕಗಳ ರಾಮಾಯಣವನ್ನು ರಚಿಸಿ ನಾರದಾದಿ ಮಹರ್ಷಿಗಳಿಗೆ ಉಪದೇಶಿಸಿದನು. ಬ್ರಹ್ಮನ ಆದೇಶದಂತೆ ನಾರದನು ಭೂಲೋಕದಲ್ಲಿ ಮನುಷ್ಯರಿಗೆ ರಾಮಾಯಣದ ಕತೆಯನ್ನು ಸಂಕ್ಷಿಪ್ತವಾಗಿ ಉಪದೇಶಿಸಲು ವಾಲ್ಮೀಕಿ ಮಹರ್ಷಿಗಳಲ್ಲಿಗೆ ಬಂದನು.

ನಾರದನ ಅಪೇಕ್ಷೆ, ಬ್ರಹ್ಮನ ಆದೇಶದ ಮೇರೆಗೆ ವಾಲ್ಮೀಕಿ ಮಹರ್ಷಿಗಳು ಉತ್ತರ ಕಾಂಡವೂ ಸೇರಿದಂತೆ 'ಏಳು ಕಾಂಡಗಳು', 'ಐನ್ನೂರು ಸರ್ಗಗಳು' ಮತ್ತು 'ಇಪ್ಪತ್ನಾಲ್ಕು ಸಾವಿರ ಶ್ಲೋಕಗಳು'ಳ್ಳ ರಾಮಾಯಣವನ್ನು ರಚಿಸಿದರು.

 

ಭಾರತದರ್ಶನ ಪ್ರಕಾಶನದವರು ಪ್ರಕಟಿಸಿದ ಶ್ರೀಮದ್ವಾಲ್ಮೀಕಿರಾಮಾಯಣದಲ್ಲಿ (ಇಲ್ಲಿ ಸ್ವಲ್ಪ ಹೆಚ್ಚಿವೆ)


ಏಳು ಕಾಂಡಗಳು- ಸರ್ಗಗಳು

ಬಾಲ ಕಾಂಡ- 77

ಅಯೋಧ್ಯಾ ಕಾಂಡ- 119

ಅರಣ್ಯ ಕಾಂಡ- 75

ಕಿಷ್ಕಿಂಧಾ ಕಾಂಡ- 67

ಸುಂದರ ಕಾಂಡ- 68

ಯುದ್ದ ಕಾಂಡ- 131

ಉತ್ತರ ಕಾಂಡ- 110

ಒಟ್ಟಿಗೆ  647 ಸರ್ಗಗಳಿವೆ.


ಸುದೀರ್ಘ ಕಾಲದಲ್ಲಿ ಸಾಗಿಬಂದ ಅದರಲ್ಲೂ ಹೆಚ್ಚಿನ ಕಾಲದಲ್ಲಿ ಮೌಖಿಕವಾಗಿ ಒಂದು ಕಾವ್ಯ ಸಾಗಿ ಬಂದಾಗ ಶ್ಲೋಕಗಳ ಸಂಖ್ಯೆಯಲ್ಲಿ ಹೆಚ್ಚು ಕಡಿಮೆಯಾಗುವುದು ಸಹಜ ತಾನೇ?

ತಾನು ರಚಿಸಿದ ರಾಮಾಯಣವನ್ನು ವಾಲ್ಮೀಕಿ ಮಹರ್ಷಿಗಳು ಮೊದಲು ಲವ-ಕುಶರಿಗೆ ಉಪದೇಶಿಸಿದರು. ಅವರು ಅದನ್ನು ತಾಳ ಲಯಬದ್ಧವಾಗಿ ಮುನಿವೃಂದಗಳಲ್ಲಿ, ರಾಮನ ಆಸ್ಥಾನದಲ್ಲಿ ಹಾಡಿ ಮೆಚ್ಚುಗೆ ಗಳಿಸಿದರು.


ರಾಮಾಯಣ ಜಗತ್ತಿನ ಆದಿಕಾವ್ಯ. ವಾಲ್ಮೀಕಿ ಆದಿಕವಿ.


ಸಂಕಲನ: ವಿಶ್ವ ಉಂಡೆಮನೆ

(ವಿಶ್ವೇಶ್ವರ ಭಟ್ ಉಂಡೆಮನೆ)


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter 

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top