ರಾಮಾಯಣ ಹಕ್ಕಿನೋಟ-4: ಪ್ರತಿದಿನ ರಾಮಾಯಣ ಕಿರು ಮಾಹಿತಿ

Upayuktha
0

ಶ್ರೀರಾಮಾಯನಮ:

ಸರಯೂ ನದಿಯ ತೀರದಲ್ಲಿ 'ಕೋಸಲ'ವೆಂಬ ದೇಶವಿದೆ.ಅದು ಫಲಭರಿತ, ಸಂಪದ್ಭರಿತ, ಸಮೃದ್ಧ - ಸಂತುಷ್ಟ ಭರಿತ ಜನರಿಂದ ತುಂಬಿದ ದೇಶ.ತ್ರಿಲೋಕ ಪ್ರಸಿದ್ಧವಾದ ಅಯೋಧ್ಯೆ ಅದರ ರಾಜಧಾನಿ.ಇದನ್ನು ಮನು ಚಕ್ರವರ್ತಿಯು ನಿರ್ಮಿಸಿದ್ದನು.ಸುತ್ತಲೂ ಅಭೇದ್ಯವಾದ ಕೋಟೆಯಿತ್ತು.ಅದರ ಮೇಲೆ ಶತ್ರುನಾಶಕವಾದ ಶತಘ್ನಿ ಎಂಬ ನೂರಾರು ಯಂತ್ರಗಳಿದ್ದವು.ಸಹಜವಾಗಿಯೇ ಅದು ಗೆಲ್ಲಲಾಗದ ಅಯೋಧ್ಯಾ ನಗರ.ಉದ್ಯಾನ,ಮನೆ, ಮಂದಿರ, ರಾಜಭವನ, ಅಂಗಡಿ ಮುಂಗಟ್ಟುಗಳು,ಕಲಾಮಂದಿರಗಳು...ಎಲ್ಲವೂ ಅಸಾಮಾನ್ಯವಾಗಿದ್ದವು.ಒಂದೇ ವಾಕ್ಯದಲ್ಲಿ ಹೇಳುವುದಿದ್ದರೆ ದೇಶ ವಿದೇಶಗಳ ಜನರು ಪ್ರವಾಸ ಮಾಡಿ ಬಂದು ನೋಡಿ ಹೋಗುವ ಆದರ್ಶ ನಗರ.


ಇಕ್ಷ್ವಾಕು ಮಹಾರಾಜನ ವಂಶದ ದಶರಥ ಕೋಸಲದೇಶದ ರಾಜನಾಗಿದ್ದನು.ಅವನು ಹಾಗೂ ಅವನ ರಾಜ್ಯ ಸ್ವರ್ಗ ಮರ್ತ್ಯ ಪಾತಾಳ - ಈ ಮೂರೂ ಲೋಕಗಳಲ್ಲಿ ಹೆಸರುವಾಸಿ.ಚತುರಂಗ ಬಲಗಳಿಂದ ಕೂಡಿದ ಅವನು ಆ ವಂಶದಲ್ಲೇ ಆ ತನಕದ ರಾಜರುಗಳಲ್ಲಿ ಅತ್ಯಂತ ಶ್ರೇಷ್ಠ ರೀತಿಯಲ್ಲಿ ರಾಜ್ಯಭಾರ ಮಾಡಿದ ಕೀರ್ತಿಯನ್ನು ಗಳಿಸಿದ್ದನು. 


ಅವನಿಗೆ ಸುಮಂತ್ರನೇ ಮೊದಲಾದ ಎಂಟು ಮಂದಿ ಅತ್ಯಂತ ಸಮರ್ಥರಾದ ಮಂತ್ರಿಗಳಿದ್ದರು.ವಸಿಷ್ಠ ವಾಮದೇವ ಗೌತಮ ಮೊದಲಾದ ಮಹರ್ಷಿಗಳು ಅವನ ಮಾರ್ಗದರ್ಶಕರಾಗಿದ್ದರು, ಪುರೋಹಿತರಾಗಿದ್ದರು.ಅವನ ಸಮರ್ಥ ಆಡಳಿತದಿಂದಾಗಿ ಇಡೀ ಕೋಶಲ ದೇಶ ಸುಭಿಕ್ಷವಾಗಿತ್ತು.


  ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter 

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top