ರಾಮಾಯಣ ಹಕ್ಕಿನೋಟ-2: ಪ್ರತಿದಿನ ರಾಮಾಯಣ ಕಿರು ಮಾಹಿತಿ

Upayuktha
0




ರಾಮಾಯಣ ಮಾಸಾಚರಣೆ ಪ್ರಯುಕ್ತ ಪ್ರತಿದಿನ ರಾಮಾಯಣದ ಬಗ್ಗೆ ಕಿರು ಮಾಹಿತಿ

ಬ್ರಹ್ಮನ ಆದೇಶದಂತೆ ನಾರದ ಮಹರ್ಷಿಗಳು  ವಾಲ್ಮೀಕಿ ಮಹರ್ಷಿಗಳ ಆಶ್ರಮಕ್ಕೆ ಬಂದರು.ವಾಲ್ಮೀಕಿ ಮಹರ್ಷಿಗಳು ನಾರದರಲ್ಲಿ-ಈಗ ಲೋಕದಲ್ಲಿ ಸಕಲ ಕಲ್ಯಾಣ ಗುಣಗಳಿಂದ ಕೂಡಿದ ವೀರತೆ ಧೀರತೆ ಸಹನೆ ತ್ಯಾಗ ಮುಂತಾದ ಸರ್ವಗುಣ ಸಂಪನ್ನನಾದ ಪುರುಷೋತ್ತಮನು ಇದ್ದಾನೆಯೇ ಎಂದು ಕೇಳಿದರು.ಆಗ ನಾರದನು- ಇದ್ದಾನೆ.ಇಕ್ಷ್ವಾಕು ವಂಶದ ದಶರಥ ಮಹಾರಾಜನ ಮಗ ಶ್ರೀ ರಾಮನೇ ಆ ಪುರುಷೋತ್ತಮ ಎಂದು ಉತ್ತರಿಸಿ ತುಂಬಾ ಚಿಕ್ಕದಾಗಿ ಆದರೆ ಚೊಕ್ಕದಾಗಿ ರಾಮನ- ರಾಮಾಯಣದ ಕತೆಯನ್ನು ವಾಲ್ಮೀಕಿ ಮಹರ್ಷಿಗಳಿಗೆ ಹೇಳಿದನು.

ಇದರಲ್ಲಿ ರಾಮನ ಹುಟ್ಟು, ಕೈಕೇಯಿಗಿದ್ದ ವರಗಳಿಂದಾಗಿ ಸೀತೆ ಲಕ್ಷ್ಮಣರೊಂದಿಗೆ ವನವಾಸ,

ಭರತನಿಗೆ ಪಾದುಕೆಗಳನ್ನು ಕೊಟ್ಟಿದ್ದು, 

ದಂಡಕಾರಣ್ಯ ವಾಸ,

ಜನಸ್ಥಾನದಲ್ಲಿದ್ದಾಗ ಶೂರ್ಪನಖಿಯು ಬಂದಿದ್ದು,

ಸೀತಾಪಹರಣ,

ಶಬರಿ ದರ್ಶನ,

ಸುಗ್ರೀವನ ಗೆಳೆತನ,

ಸೀತಾನ್ವೇಷಣೆ, ಹನುಮಂತನಿಂದ ಸೀತಾ ದರ್ಶನ,

ಲಂಕಾದಹನ,

ಸೇತುಬಂಧನ,

ಕಪಿ ಸೇನೆಯ ನೆರವಿನಿಂದ ರಾವಣನೊಂದಿಗೆ ಯುದ್ಧ,

ರಾವಣ ಸಂಹಾರ, 

ಸೀತೆಯ ಅಗ್ನಿ ಪರೀಕ್ಷೆ, ಅಯೋಧ್ಯಾ ಪ್ರವೇಶ ಪಟ್ಟಾಭಿಷೇಕ ರಾಜ್ಯಭಾರ..ಹೀಗೆ ಎಲ್ಲವೂ ಸೇರಿದ್ದು ಅವನ್ನು ಸಂಕ್ಷಿಪ್ತವಾಗಿ ಹೇಳಿದರು.

ಈ ಕತೆಯೇ ಮುಂದೆ ವಾಲ್ಮೀಕಿ ಮಹರ್ಷಿಗಳು ರಾಮಾಯಣವನ್ನು ವಿಸ್ತಾರವಾಗಿ ಬರೆಯಲು ಪ್ರೇರಣೆ ನೀಡಿತು.


ಮಹರ್ಷಿ ವಾಲ್ಮೀಕಿಗಳ ಐದು ಶ್ಲೋಕಗಳ ಪ್ರಶ್ನೆಗಳಿಗೆ ನಾರದ ಮಹರ್ಷಿಗಳು ತೊಂಬತ್ತು ಶ್ಲೋಕಗಳಲ್ಲಿ ಸೊಗಸಾಗಿ ಸಂಕ್ಷಿಪ್ತವಾಗಿ ಉತ್ತರಿಸಿದರು.


ಇಲ್ಲೊಂದು ವಿಶೇಷತೆಯಿದೆ.

ಬ್ರಹ್ಮನು ಹೇಳಿದ ನೂರು ಕೋಟಿ ಶ್ಲೋಕಗಳ ರಾಮಾಯಣದ ಸಾರವನ್ನು ನಾರದ ಮಹರ್ಷಿಗಳು ತೊಂಬತ್ತು ಶ್ಲೋಕಗಳಲ್ಲಿ ವಾಲ್ಮೀಕಿ ಮಹರ್ಷಿಗಳಿಗೆ ಹೇಳಿದರು.ರಾಮಾಯಣ ಕತೆಯನ್ನು ಕೇಳಲಿರುವವನಿಗೆ ನಮ್ಮ ಈಗಿನ ಭಾಷೆಯಲ್ಲಿ ಹೇಳುವುದಾದರೆ ಇದು ಟ್ರೈಲರ್!

ಇದು ರಾಮಾಯಣದ ಮೊದಲ ಮುನ್ನೋಟ.

ಸಂಕಲನ: ವಿಶ್ವ ಉಂಡೆಮನೆ

(ವಿಶ್ವೇಶ್ವರ ಭಟ್ ಉಂಡೆಮನೆ)


 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top