ಸಮುದ್ರದ ಅಲೆಯಲ್ಲಿ ದುಡಿಯುವಾತ ಯೋಧನಿಗಿಂತ ಕಡಿಮೆಯಲ್ಲ...

Upayuktha
0


ಪ್ರತಿಯೊಬ್ಬನು ದುಡಿಯುವುದು ಹೊಟ್ಟೆಗಾಗಿಯೇ ಹೊರತು ಇನ್ಯಾವುದಕ್ಕೂ ಅಲ್ಲ. ದುಡಿಯುವ ವಿಧಾನಗಳು ಬೇರೆ ಬೇರೆ ಇರಬಹುದು. ಹೇಗೆಂದರೆ, ಶಿಕ್ಷಕರು ನಿಂತುಕೊಂಡು ಪಾಠ ಮಾಡಿದರೆ, ದೊಡ್ಡ ದೊಡ್ಡ ಕಂಪನಿಗಳಲ್ಲಿ ಬ್ಯಾಂಕ್ ಗಳಲ್ಲಿ ಕುಳಿತುಕೊಂಡು ತಂತ್ರಜ್ಞಾನದಲ್ಲಿ ಕೆಲಸ ಮಾಡಿದರೆ ಇನ್ನಷ್ಟು ಜನ ಕೃಷಿಯ ಕೆಲಸದಲ್ಲಿ ತೊಡಗಿಸಿಕೊಂಡರೆ ಇದರೊಂದಿಗೆ ಮೀನುಗಾರಿಕೆ ಎನ್ನುವುದು ಸಹ ಬಹುದೊಡ್ಡ ಕೆಲಸವೆನ್ನಬಹುದು. ಹೇಗೆಂದರೆ ಇವರು ಭೀಕರವಾದ ಮಳೆ, ಗಾಳಿ, ಚಳಿ ಸಮುದ್ರದ ಅಲೆಗಳಲ್ಲಿ ಹೋರಾಟ ನಡೆಸುವವರು ಮೀನುಗಾರರು ಮತ್ತು ನಮ್ಮ ದೇಶ ಕಾಯುವ ಯೋಧರಿಗೆ ಅಜಗಜಾಂತರ ಸಂಬಂಧವಿದೆ ಎನ್ನಬಹುದು. ಅತ್ತ ಯೋಧರು ಮನೆಯವರನೆಲ್ಲಾ ತೊರೆದು ದೇಶಕ್ಕಾಗಿ ನಿದ್ದೆ ಬಿಟ್ಟು ಯಾವುದಕ್ಕೂ ಹಿಂಜರಿಯದೆ ಕೈಯಲ್ಲಿ ಬಂದೂಕನ್ನು ಹಿಡಿದು ಉಗ್ರರನ್ನು ಸೆರೆ ಹಿಡಿಯುವುದರಲ್ಲಿ ಪರಿತಪಿಸುವ ಸವಾಲುಗಳು ಒಂದಿಷ್ಟಲ್ಲ.


ನಮ್ಮಲ್ಲಿ ಒಂದು ಮಾತಿದೆ ಬೆಸ್ತರು (ಮೊಗವೀರರು) ಅಂದರೆ ಮೀನು ಹಿಡಿಯುವವರು ಇವರು ಮಾತ್ರವಲ್ಲದೆ ಇತರರು ಸಹ ತಮ್ಮ ಕಸುಬು ಎಂದು ಮೀನುಗಾರಿಕೆಯನ್ನು ಅವಲಂಬಿಸಿಕೊಂಡಿರುತ್ತಾರೆ. ಈ ಮೀನುಗಾರರು ಇದನ್ನು ಕಸುಬು ಎಂದು ಮಾಡದೇ ಇದ್ದಿದ್ದರೆ ಇಂದು ನಾವೆಲ್ಲ ಸ್ವಲ್ಪ ಪ್ರಮಾಣದಲ್ಲಾದರೂ ಆರೋಗ್ಯವಾಗಿರಲು ಸಾಧ್ಯವಿತ್ತಾ? ನಮಗೆ ವಿಧ ವಿಧವಾದ ವಿಟಮಿನ್ ಸಿಗುವಂತಹ ಮೀನುಗಳನ್ನು ಕಾಣಲು ಸಾಧ್ಯವಿತ್ತಾ ತಿನ್ನುವುದು ನಾವು ಆದರೂ ಇವರು ರಾತ್ರಿ ಹಗಲು ಆಳವಾದ ಸಮುದ್ರದಲ್ಲಿ ಬೀಸುವ ಗಾಳಿಯೊಂದಿಗೆ ಅಲೆಗಳೊಂದಿಗೆ ಮಧ್ಯದಲ್ಲಿ ಭಯ ಪಡದೆ ಮೀನಿಗೆ ಬಲೆಯನ್ನು ಬೀಸಿ ಹಿಡಿಯುತ್ತಿರುತ್ತಾರೆ. ಅದೆಷ್ಟೋ ಮೀನುಗಳನ್ನು ಹಿಡಿಯುವಾಗ ನೀರಿನಲ್ಲಿ ಸಾಗುವಾಗ ಅವರಿಗೆ ಎಷ್ಟು ಶಕ್ತಿ ಧೈರ್ಯ ಇರಬೇಕು ಎಂದು ನಾವು ಅದರತ್ತ ಕಣ್ಣು ಹಾಯಿಸಿದರೆ ಮಾತ್ರ ಅರಿಯಲು ಸಾಧ್ಯ.


ಮೀನುಗಾರಿಕೆ ಮಾಡಲು ಧೈರ್ಯವಿದ್ದರೆ ಮಾತ್ರ ಸಾಕಾಗುವುದಿಲ್ಲ. ಸಹನೆ ತಾಳ್ಮೆಯು ಅತೀ ಮುಖ್ಯ ಎನ್ನಬಹುದು. ಯಾಕೆಂದರೆ ಸಮುದ್ರದಲ್ಲಿ ಮೀನು ಹಿಡಿಯುವುದು ಎಂದರೆ ನಮ್ಮ ಚಿಕ್ಕ ತೋಡುಗಳಲ್ಲಿ ಹಿಡಿದಂತೆ ಎಂದು ಅಂದುಕೊಂಡಿರುವಿರಾ?. ಸಮುದ್ರದ ಆಳವನ್ನು ಮೊದಲೇ ಪರೀಕ್ಷಿಸಿಕೊಂಡು ನಾವೇ , ನೌಕೆಯನ್ನು ಹಿಡಿದು ಸಾಗಲು ಮುಂದಾಗುತ್ತಾರೆ. ಹೀಗೆ ಸಾಗಿದಾಗ ಇವರಿಗೆಯೇ ಅರಿವು ಇರುವುದಿಲ್ಲ.ತಾನು ಬದುಕು ಬರುವೆಯಾ ನನ್ನ ಸಂಸಾರದ ಜೊತೆ ಇರುವೆಯಾ? ಎಂದು ಎಲ್ಲೋ ಶೇಕಡದಷ್ಟು ಜನರಿಗೆ ಮಾತ್ರ ನಾನು ಬಂದೆ ಬರುತ್ತೇನೆಂದು ಮನದಲ್ಲಿದ್ದರೂ ಅಲ್ಲಿ ನಡೆಯುವ ಘಟನೆಗಳ ತುಣುಕು ಸಹ ಇವರ ಕಣ್ಣಮುಂದೆ ಇರಲು ಸಾಧ್ಯವಿಲ್ಲ. ಹೇಗೆಂದರೆ ಅಚಾನಕವಾದ ಜಲಪ್ರವಾಹ, ಸುಂಟರಗಾಳಿ ಎಲ್ಲವೂ ಮುಂದಾದಾಗ ಇವರು ಆ ಅಲೆಗಳ ನಡುವೆ ಹೇಗೆ ತಾನೇ ಎದುರಿಸಲು ಸಾಧ್ಯ.?  


ಆ ಸಂದರ್ಭದಲ್ಲಿ ಮನೆಯಲ್ಲಿ ನೀಡಿರುವ ಭರವಸೆಯು ಭರವಸೆಯಾಗಿಯೇ ಉಳಿದು ಬಿಡುತ್ತದೆ.ಆ ಕ್ಷಣ ಈತನನ್ನು ನಂಬಿ ಬದುಕಿದ್ದವರತ್ತ ಒಂದು ಬಾರಿ ಕಣ್ಣಾಯಿಸುವ ಯಾಕೆಂದರೆ ಈತ ಯಾವ ಸಮುದ್ರದಲ್ಲಿ ಎಲ್ಲಿ ಹೋಗಿದ್ದಾನೆ ಎನ್ನುವುದೇ ಅರಿವಿಲ್ಲದ ಮಡದಿಯು ತನ್ನ ಗಂಡನು ಈಗ ಬರಬಹುದು ಮತ್ತೆ ಬರಬಹುದು ಎಂದು ದಾರಿ ಕಾಯುತ್ತಾ ಕುಳಿತಿದ್ದವಳಿಗೆ ಈತ ಬದುಕಿ ಬಂದಿಲ್ಲ ಎಂದು ಬಹಳ ತಡವಾಗಿ ಅರಿವಾದಾಗ ಆಕೆ ಹೇಗೆ ತಾನೇ ಇದನ್ನು ಅರಗಿಸಿಕೊಳ್ಳುವಳು. ಆಕೆಯೊಂದಿಗೆ ಮಕ್ಕಳು ಅಪ್ಪ ಎಂದು ಕರೆಯುವ ಜೀವ ಇನ್ನೂ ನಮ್ಮೊಂದಿಗೆ ಇಲ್ಲಂದರೆ ನಮ್ಮ ಕುಟುಂಬವನ್ನು ತಾಯಿ ಒಬ್ಬಳೇ ನಡೆಸಿಕೊಂಡು ಹೋಗಲು ಸಾಧ್ಯವೇ ಎಂದು ಮಾನಸಿಕ ಖಿನ್ನತೆಗೆ ಒಳಗಾಗುವಂತೆ ಎಲ್ಲಾ ಲಕ್ಷಣಗಳು ಇರುತ್ತವೆ.


ನಮಗೆ ಯಾವುದೋ ಮಾರಾಟಗಾರರಿಂದ ಮೀನು ಸಿಗುತ್ತದೆ. ಈ ಮಾರಾಟಗಾರರು ಕೆಲವೊಂದು ಬಾರಿ ಐಸ್ ಹಾಕದೆ ಸಾಯಿಸಿಬಿಡುತ್ತಾರೆ. ತರುವ ರಭಸದಲ್ಲಿ ನಾವು ನೋಡಿರುವುದಿಲ್ಲ ಮಾರಾಟಗಾರರು ನೋಡಿದ್ದರು ಹಣದ ಆಸೆಯಿಂದ ನಮಗೆ ಕಳುಹಿಸುತ್ತಾರೆ. ನಮಗೆ ಇದೆಲ್ಲ ಗೊತ್ತಾಗುವುದು ಮನೆಗೆ ಬಂದು ಸಾಂಬಾರು ಮಾಡಲು ಸಿದ್ಧತೆ ಮಾಡಿದಾಗಲೇ.  ಮೀನುಗಾರರಿಗೆ ಬಯ್ಯುವ ಮುನ್ನ ಅವರು ಪಡುವ ಕಷ್ಟ ನಾವಾಗಲಿ ಮಾರಾಟಗಾರರಾಗಲಿ ಸಾಧ್ಯವಿಲ್ಲ. ಎಷ್ಟು ಹಡಗು ದೋಣಿಗಳ ಮುಳುಗಡೆಯ ಸುದ್ದಿಯನ್ನೇ ನಾವು ದಿನ ಪತ್ರಿಕೆ ಸುದ್ದಿ ಜಾಲತಾಣಗಳಲ್ಲಿ ಕಾಣುತ್ತೇವೆ. ಹೀಗೆ ಮುಳುಗಡೆಯಾಗಿ ಸಾವಿರಾರು ಮೀನುಗಾರರು ಸತ್ತರು ತಮ್ಮ ಕಸುಬನ್ನು ಬಿಟ್ಟಿಲ್ಲ .

ಯೋಧರಿಗೆ ಹೇಗೆ ಗೌರವ ನೀಡುತ್ತೇವೋ ಅದೇ ರೀತಿ ಮೀನುಗಾರರಿಗೆ ಗೌರವ ನೀಡಿ ರಕ್ಷಿಸಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯವಲ್ಲವೆ .?


-ಅನನ್ಯ ಎಚ್ ಸುಬ್ರಹ್ಮಣ್ಯ

ಪತ್ರಿಕೋದ್ಯಮ ವಿದ್ಯಾರ್ಥಿನಿ

ವಿವೇಕಾನಂದ (ಸ್ವಾಯತ್ತ) ಮಹಾವಿದ್ಯಾಲಯ ಪುತ್ತೂರು


 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top