ಪುತ್ತೂರು: ಇಲ್ಲಿನ ವಿವೇಕಾನಂದ ಕಲಾ ವಿಜ್ಞಾನ ವಾಣಿಜ್ಯ ಸ್ವಾಯತ್ತ ಮಹಾ ವಿದ್ಯಾಲಯ ಇದರ ಆಶ್ರಯದಲ್ಲಿ ಅಂತರ್ ಕಾಲೇಜು ಮಟ್ಟದ 42 ನೇ ಮಾನ್ಸೂನ್‍ಚೆಸ್ ಪಂದ್ಯಾಟ ಇದೇ ಜುಲೈ 6, 7 ಹಾಗೂ 8 ರಂದು ನಡೆಯಲಿದೆ.
ದ.ಕ, ಉಡುಪಿ ಹಾಗೂ ಕೊಡಗುಜಿಲ್ಲೆಯ ವ್ಯಾಪ್ತಿಗೆ ಒಳಪಟ್ಟ ಎಲ್ಲಾ ಪದವಿ ಕಾಲೇಜು ಇಂಜಿನಿಯರಿಂಗ್ ಮತ್ತು ವೈದ್ಯಕೀಯ ಕಾಲೇಜುಗಳ ವಿದ್ಯಾರ್ಥಿಗಳು ಇದರಲ್ಲಿ ಭಾಗವಹಿಸಲು ಅವಕಾಶವಿದೆ.
ಪಂದ್ಯಾಟವನ್ನು ದ.ಕ ಜಿಲ್ಲಾಚೆಸ್ ಅಸೋಸಿಯೇಷನ್ ನ ಅಧ್ಯಕ್ಷ ರಮೇಶ್‍ಕೋಟೆ ಉದ್ಘಾಟಿಸಲಿದ್ದು ಕಾಲೇಜಿನ ಸಂಚಾಲಕ ಮುರಳಿಕೃಷ್ಣ ಕೆ.ಎನ್ ಅಧ್ಯಕ್ಷತೆ ವಹಿಸಲಿದ್ದಾರೆ. ಸಮಾರೋಪ ಸಮಾರಂಭದಲ್ಲಿ ಬಹುಮಾನ ವಿತರಣೆಯನ್ನು ಪುತ್ತೂರಿನ ವಿವೇಕಾನಂದ ಪಾಲಿಟೆಕ್ನಿಕ್ ನ ಆಡಳಿತ ಮಂಡಳಿಯ ಅಧ್ಯಕ್ಷ ವಿಶ್ವೇಶ್ವರ ಭಟ್ ಬಂಗಾರಡ್ಕ ನೆರವೇರಿಸಲಿದ್ದು ಕಾಲೇಜಿನ ಅಧ್ಯಕ್ಷ ಡಾ. ಶ್ರೀಪತಿ ಕಲ್ಲೂರಾಯ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ.
ಜುಲೈ 6 ರಂದು ಪೂರ್ವಾಹ್ನ 10 ಗಂಟೆಗೆ ಕಾಲೇಜಿನ ನೇತಾಜಿ ಸಭಾಭವನದಲ್ಲಿ ಪಂದ್ಯಾಟವು ಆರಂಭವಾಗಲಿದ್ದು ಸ್ಪಿನ್ ಮಾದರಿಯಲ್ಲಿ ನಡೆಯಲಿದೆ. ಭಾಗವಹಿಸುವ ಸ್ಫರ್ಧಿಗಳು ಚೆಸ್ ಬೋರ್ಡ್ ಮತ್ತು ದಾಳವನ್ನು ಸ್ವತಃ ತರಬೇಕು ಹಾಗೂ ಪ್ರಾಂಶುಪಾಲರ ಸಹಿ ಇರುವಗುರುತಿನ ಪತ್ರ ಹೊಂದಿರಬೇಕು. ಪಂದ್ಯಕ್ಕೆ ರೂಪಾಯಿ 80 ಪ್ರವೇಶ ಶುಲ್ಕವಿರುತ್ತದೆ. ಸ್ಪರ್ಧೆಯಲ್ಲಿ ಪ್ರಥಮ ದ್ವಿತೀಯ ತೃತೀಯ ಸ್ಥಾನ ಗಳಿಸಿದ ವಿಜೇತರಿಗೆ ಶಾಶ್ವತ ಫಲಕ ಮತ್ತು ಉತ್ತಮ ಇಪ್ಪತ್ತು ಮಂದಿ ಆಟಗಾರರಿಗೆ ಪ್ರಮಾಣ ಪತ್ರದೊಂದಿಗೆ ಸ್ಮರಣಿಕೆ ನೀಡಲಾಗುತ್ತದೆ. ಎಲ್ಲಾ ಸುತ್ತುಗಳಲ್ಲಿ ಆಟದ ಆಟಗಾರರಿಗೆ ಭಾಗವಹಿಸಿ ಪ್ರಮಾಣ ಪತ್ರ ನೀಡಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ದೈಹಿಕ ಶಿಕ್ಷಣ ನಿರ್ದೆಶಕ ರವಿಶಂಕರ್ ವಿಟ್ಲಇವರನ್ನು ಸಂಪರ್ಕಿಸಿ ಎಂದು ಪ್ರಕಟಣೆಯಲ್ಲಿ ಕಾಲೇಜಿನ ಪ್ರಾಂಶುಪಾಲ ಪ್ರೋ.ವಿಷ್ಣು ಗಣ ಪತಿ ಭಟ್ ತಿಳಿಸಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ