ಪುತ್ತೂರು: “ಬುದ್ಧಿವಂತಿಕೆ ಮತ್ತು ಪರಿಶ್ರಮವಿದ್ದರೆ ಮಾತ್ರ ಜೀವನದಲ್ಲಿ ಯಶಸ್ಸನ್ನು ಪಡೆಯಲು ಸಾಧ್ಯ. ವಿದ್ಯಾರ್ಥಿ ಜೀವನದಲ್ಲಿ ಕಷ್ಟಪಟ್ಟು ಅಭ್ಯಾಸವನ್ನು ಮಾಡಿದರೆ ಭವಿಷ್ಯವು ಸುಖಮಯವಾಗಿರುತ್ತದೆ”. ಎಂದು ಪ್ರೋ. ಬಿ.ವಿ. ಸೂರ್ಯನಾರಾಯಣ ರವರು ಅಭಿಪ್ರಾಯ ಪಟ್ಟರು. ಇವರು ಪುತ್ತೂರಿನ ಸುದಾನ ವಸತಿ ಶಾಲೆಯಲ್ಲಿ ಹತ್ತನೇ ತರಗತಿಯ ವಿದ್ಯಾರ್ಥಿಗಳಿಗಾಗಿ ನಡೆದ “ಯುವ ಪ್ರೇರಣಾ” ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಪ್ರೇರಣಾದಾಯಕ ಉಪನ್ಯಾಸವನ್ನು ಮಾಡಿದರು. ಈ ಕಾರ್ಯಕ್ರಮವು MRPL ಸಂಸ್ಥೆಯ ಪ್ರಾಯೋಜಕತ್ವದಲ್ಲಿ, ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ನಡೆಯಿತು.
ಸಭಾಧ್ಯಕ್ಷತೆಯನ್ನು ವಹಿಸಿದ್ದ ಶಾಲಾ ಮುಖ್ಯಶಿಕ್ಷಕಿ ಶ್ರೀಮತಿ.ಶೋಭಾನಾಗರಾಜ್ ರವರು “ಬದುಕಿನ ಗುರಿಯನ್ನು ಕಂಡುಕೊಂಡು ದೃಢಚಿತ್ತದಿಂದ ಮುನ್ನಡೆಯಿರಿ” ಎಂದು ಶುಭ ಹಾರೈಸಿದರು. ಇಂಟರ್ಯಾಕ್ಟ್ ಕ್ಲಬ್ ನ ವಿದ್ಯಾರ್ಥಿ ಪ್ರತಿನಿಧಿ ಇಶಿತಾ ಎಸ್ ನಾಯರ್ (10ನೇ), ಕಾರ್ಯದರ್ಶಿ ನಿಕೋಲಸ್ ರೋನಿನ್ ಮಥಾಯಿಸ್ (9ನೇ), ವೇದಿಕೆಯಲ್ಲಿ ಉಪಸ್ಥಿತರಿದ್ದರು. ಉಪನ್ಯಾಸದ ಬಳಿಕ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮವನ್ನು ನಡೆಸಲಾಯಿತು. ಸಹಶಿಕ್ಷಕಿ ಶ್ರೀಮತಿ. ವಿನಯಾ ರೈ ಕಾರ್ಯಕ್ರಮವನ್ನು ನಿರೂಪಿಸಿದರು. ಸುದಾನ ಶಾಲೆಯ ಇಂಟರ್ಯಾಕ್ಟ್ ಕ್ಲಬ್ ‘ಸ್ಪಂದನಾ’ ಕಾರ್ಯಕ್ರಮವನ್ನು ಆಯೋಜಿಸಿತ್ತು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ