ಸುದಾನ ಶಾಲೆಯಲ್ಲಿ ‘ಜಲಸಿರಿ ಯೋಜನೆ” ಕಾರ್ಯಗಾರ

Upayuktha
0


ಪುತ್ತೂರು:
ಪುತ್ತೂರಿನ ಸುದಾನ ವಸತಿಯುತ ಶಾಲೆಯಲ್ಲಿ ಮಂಗಳೂರು ಮತ್ತು ಪುತ್ತೂರು ನಗರ ಸಭೆಯ ಸಹಯೋಗದಲ್ಲಿ, ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಜಲಸಂರಕ್ಷಣೆಯ ಬಗ್ಗೆ ಹಾಗೂ ಜಲಸಿರಿ ಯೋಜನೆಯ ಬಗ್ಗೆ ಮಾಹಿತಿ ಕಾರ್ಯಗಾರವನ್ನು ಆಯೋಜಿಸಲಾಗಿತ್ತು. KUIDFC - ಗ್ರಾಮೀಣ ಮಹಿಳಾ ಅಭಿವೃದ್ಧಿ ಶಿಕ್ಷಣ ಸಂಸ್ಥೆಯ ಸಂಪನ್ಮೂಲ ಅಧಿಕಾರಿಗಳಾದ ಶ್ರೀಮತಿ. ಅಮಿಷ  r. Cf® Gender Specialist ಆಗಮಿಸಿ ಸಾಕ್ಷ್ಯಚಿತ್ರ ಮತ್ತು ಪ್ರಾತ್ಯಕ್ಷಿಕೆಯ ಮೂಲಕ ಮಾಹಿತಿಯನ್ನು ನೀಡುತ್ತಾ ನೀರಿನ ಸಮರ್ಪಕ ನಿರ್ವಹಣೆ, ಜಲಸಂರಕ್ಷಣೆಯ ಬಗ್ಗೆ ತಿಳಿಸಿದರು. ಪುತ್ತೂರು ನಗರ ಸಭೆಯ ಸಾರ್ವಜನಿಕ ಸಂವಹನ ತಜ್ಞರಾಗಿರುವ ಶ್ರೀಯುತ ಉಸ್ಮಾನ್ ರವರು, ಪ್ರಾಸ್ತಾವಿಕ ನುಡಿಗಳನ್ನಾಡಿದರು. 


ಶಾಲಾ ಮುಖ್ಯಶಿಕ್ಷಕಿ ಶೋಭಾ ನಾಗರಾಜ್ ಶುಭ ಹಾರೈಸಿದರು. ಸಂಯೋಜಕಿ ಪ್ರತಿಮಾ ಎನ್.ಜಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.  ಪುತ್ತೂರು ನಗರ ಸಭೆಯ ಸಂವಹನ ತಜ್ಞರಾಗಿರುವ ಕುಮಾರಿ. ನವ್ಯಶ್ರೀ, ಹಾಗೂ ಕುಮಾರಿ. ದಿವ್ಯ ಸಹಕರಿಸಿದರು. ಶಾಲಾ ವಿದ್ಯಾರ್ಥಿನಿಯರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮವು ಪ್ರಾರಂಭವಾಯಿತು. ಶಾಲಾ ವಿಜ್ಞಾನ ಶಿಕ್ಷಕಿಯರಾದ  ಪೂಜಾ ಎಂ.ವಿ ಸ್ವಾಗತಿಸಿದರು. ಹರ್ಷಿತಾ ಪ್ರಜ್ವಲ್ ವಂದಿಸಿದರು.  ನಿರ್ಮಲಾ ನವೀನ್ ಡಿಸೋಜ ಕಾರ್ಯಕ್ರಮವನ್ನು ನಿರ್ವಹಿಸಿದರು. 


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter  

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top