ಪುತ್ತೂರು: ಸೌತ್‍ಕೋರಿಯಾದಲ್ಲಿ ಅ.02ರಿಂದ ಅ.12ರ ವರೆಗೆ ನಡೆಯುವ 25ನೇ ಅಂತರಾಷ್ಟ್ರೀಯ ಸ್ಕೌಟ್ಸ್‌ಗೈಡ್ಸ್ ಜಾಂಬೂರಿಯಲ್ಲಿ ಸಂತ ಫಿಲೋಮಿನಾ ಪದವಿ ಪೂರ್ವಕಾಲೇಜಿನ ಪ್ರಾರ್ಥನಾಬಿ, ಸಮೃದ್ಧಿ ಚೌಟ, ಮತ್ತು ಬಿ.ಎಸ್‍ಅಫ್ಸಲ್‍ಇವರು ಭಾಗವಹಿಸಲಿದ್ದಾರೆ.
ಪ್ರಥಮ ವಿಜ್ಞಾನ ವಿಭಾಗದಪ್ರಾರ್ಥನಾ ಬಿ.ಇವರು ದರ್ಬೆ ಪ್ರಕಾಶ್ ಡೆಂಟಲ್‍ಕ್ಲಿನಿಕ್‍ನ ಡಾ.ಶ್ರೀಪ್ರಕಾಶ್ ಬಿ ಇವರ ಪುತ್ರಿ, ಪ್ರಥಮ ವಾಣಿಜ್ಯ ವಿಭಾಗದ ಎ. ಸಮೃದ್ಧಿ ಚೌಟ ಸರ್ವೆ ನಿವಾಸಿ ಪುಷ್ಪರಾಜ್ ಹಾಗೂ ಪ್ರೇಮ ದಂಪತಿಗಳ ಪುತ್ರಿ.,ದ್ವಿತೀಯ ವಿಜ್ಞಾನ ವಿಭಾಗದ ಬಿ.ಎಸ್ ಅಫ್ಸಲ್ ಪರ್ಲಡ್ಕ ನಿವಾಸಿ ಬಿ.ಎಸ್ ಮಹಮ್ಮದ್ ಇಕ್ಭಾಲ್ ಮತ್ತು ಶಮೀರ ಎಂ. ಐ ದಂಪತಿಗಳ ಪುತ್ರ.
ಕಾಲೇಜಿನ ಪ್ರಾಂಶುಪಾಲರದ ರೆ.ಫಾ. ಅಶೋಕ್‍ರಾಯನ್ ಕ್ರಾಸ್ತಾ ವಿದ್ಯಾರ್ಥಿಗಳನ್ನು ಅಭಿನಂದಿಸಿ ಶುಭಹಾರೈಸಿದರು. ರೋವರ್ಸ್ ರೇಂಜರ್ಸ್‍ನ ಸಂಯೋಜಕರಾದ ಶರತ್ ಆಳ್ವ, ಚಂದ್ರಾಕ್ಷ ಮತ್ತು ಪೂರ್ಣಿಮಡಿ.ಎಸ್ ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ