ಪುತ್ತೂರು: ಅಂತರ್ ಕಾಲೇಜು ಜಿಲ್ಲಾ ಮಟ್ಟದ ಕನ್ನಡ ಪ್ರಬಂಧ ಸ್ಪರ್ಧೆ

Upayuktha
0

ಪುತ್ತೂರು: ಇಲ್ಲಿನ ವಿವೇಕಾನಂದ ಕಲಾ,ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ) ಇದರ ಸಹಯೋಗದಲ್ಲಿ ಪಡೀಲು ಶಂಕರ ಭಟ್ಟ ಸ್ಮಾರಕ ದತ್ತಿನಿಧಿ ಪ್ರಯುಕ್ತ ಅಂತರ್ ಕಾಲೇಜು ಕನ್ನಡ ಪ್ರಬಂಧ ಸ್ಪರ್ಧೆ ಪದವಿ ವಿದ್ಯಾರ್ಥಿಗಳಿಗೆ ನಡೆಯಲಿದೆ.


ಪ್ರಬಂಧದ ವಿಷಯ "ಜಗತ್ತಿಗೆ ಭಾರತೀಯ ವಿಜ್ಞಾನ ಪರಂಪರೆಯ ಕೊಡುಗೆ" ಈ ಪ್ರಬಂಧ ಸ್ಪರ್ಧೆಯಲ್ಲಿ ಆಸಕ್ತರು ಭಾಗವಹಿಸಬಹುದು.


ಭಾಗವಹಿಸುವ ವಿದ್ಯಾರ್ಥಿಗಳಿಗೆ ನಿಯಮಗಳು ಈ ರೀತಿ ಇವೆ.ಪ್ರಬಂಧವು 4 ಪುಟಗಳನ್ನು ಮೀರಬಾರದು. ಪ್ರತಿ ಹಾಳೆಯ ಒಂದು ಪುಟದಲ್ಲಿ ಮಾತ್ರ ಬರೆದಿರಬೇಕು. ಕಾಲೇಜು ಮುಖ್ಯಸ್ಥರ ಸಹಿ ಮತ್ತು ಮುದ್ರೆ ಇರಬೇಕು. ಪ್ರಬಂಧ ಸ್ವೀಕರಿಸಲು ಕೊನೆಯ ದಿನಾಂಕ 28-7-2023. ಸ್ಪರ್ಧಾ  ಸಮಿತಿ ಹಾಗೂ ತೀರ್ಪುಗಾರರ ನಿರ್ಣಯವು  ಅಂತಿಮವಾಗಿರುತ್ತದೆ ಹಾಗೂ  ಸ್ಪರ್ಧಾ ವಿಜೇತರಿಗೆ ಬಹುಮಾನ ನೀಡುವ ದಿನಾಂಕವನ್ನು ಪತ್ರ ಮುಖೇನ ತಿಳಿಸಲಾಗುವುದು.


ಭಾಗವಹಿಸುವ ವಿದ್ಯಾರ್ಥಿಗಳು ತಮ್ಮ ಪ್ರಬಂಧಗಳನ್ನು ಈ ವಿಳಾಸಕ್ಕೆ ಅಂಚೆ ಮೂಲಕ ಕಳುಹಿಸಿಕೊಡಬೇಕು- ಪ್ರಾಂಶುಪಾಲರು,ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ), ನೆಹರು ನಗರ, ಪುತ್ತೂರು- 574203, ದ.ಕ ವಿಜೇತರಿಗೆ ನಗದು ಬಹುಮಾನವಿರುತ್ತದೆ.ಪ್ರಥಮ ಬಹುಮಾನ- ರೂ 3,500/- ದ್ವಿತೀಯ ಬಹುಮಾನ-ರೂ 2,000/- ಎಂದು ಪ್ರಕಟನೆಯಲ್ಲಿ ಕಾಲೇಜಿನ ಪ್ರಾಂಶುಪಾಲ ಪ್ರೊ.ವಿಷ್ಣು ಗಣಪತಿ ಭಟ್ ತಿಳಿಸಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter  

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top