ದಕ್ಷಿಣ ಕೊರಿಯಾದಲ್ಲಿ 25ನೇ ವಿಶ್ವ ಸ್ಕೌಟ್ ಜಾಂಬೂರಿ: ಸುದಾನ ಶಾಲೆಯ 7 ವಿದ್ಯಾರ್ಥಿಗಳು

Upayuktha
0


ಪುತ್ತೂರು:
ಪುತ್ತೂರಿನ ಸುದಾನ ವಸತಿ ಶಾಲೆಯ 7 ಮಂದಿ ವಿದ್ಯಾರ್ಥಿಗಳು ದಕ್ಷಿಣ ಕೊರಿಯಾದ ಜಿಯೋಲ್ಲಾಬುಕ್–ಡೋ ನಗರದ ಸೇಮಾಂಗೇಯಂನಲ್ಲಿ ನಡೆಯಲಿರುವ 25ನೇ ವಿಶ್ವ ಸ್ಕೌಟ್ ಜಾಂಬೂರಿಯಲ್ಲಿ ಭಾಗವಹಿಸಲಿದ್ದಾರೆ. ಆಗಸ್ಟ್ 1 ರಿಂದ 12ರ ವರೆಗೆ 25ನೇ ವಿಶ್ವ ಸ್ಕೌಟ್ ಜಾಂಬೂರಿಯು ಆಯೋಜಿತವಾಗಿದ್ದು, ಇದರಲ್ಲಿ ನಾಯಕತ್ವ ಮತ್ತು ಜೀವನ ಕೌಶಲ್ಯಗಳನ್ನು ಸ್ಕೌಟಿಂಗ್ ಚಟುವಟಿಕೆಗಳ ಮೂಲಕ ಅಭಿವೃದ್ಧಿಪಡಿಸಲು ಬೋಧಿಸಲಾಗುತ್ತದೆ. ಜಾಗತಿಕ ಸಮಸ್ಯೆಗಳೆಡೆಗೆ ಸ್ಪಂದಿಸುವ ಮತ್ತು ಸಕ್ರಿಯ ನಾಗರಿಕನಾಗುವ ಆದರ್ಶಗಳನ್ನು ಶಿಬಿರಾರ್ಥಿಗಳಲ್ಲಿ ಮೂಡಿಸುವ ಸದುದ್ದೇಶವನ್ನು ಈ ಉತ್ಸವವು ಹೊಂದಿದೆ. 


ಇದಕ್ಕೆ ಸುದಾನ ಶಾಲೆಯ ಪ್ರತಿಭಾವಂತ ಹಾಗೂ ರಾಜ್ಯ ಪುರಸ್ಕಾರವನ್ನು ಪಡೆದ ವಿದ್ಯಾರ್ಥಿಗಳಾದ ಮಾ| ಸತ್ಯಪ್ರಸಾದ್ ನಾಯಕ್ (ಶ್ರೀ. ರಾಘವೇಂದ್ರ ನಾಯಕ್ ಹಾಗೂ ಶ್ರೀಮತಿ. ಲಕ್ಷ್ಮೀ ನಾಯಕ್ ರವರ ಪುತ್ರ) ಮಾ| ಅನಿಕೇತ್ ಎನ್ (ಶ್ರೀ. ನಳಿನಾಕ್ಷ ಮತ್ತು ಶ್ರೀಮತಿ. ಗಾಯತ್ರಿ. ಪಿ. ಯವರ ಪುತ್ರ), ಮಾ| ಅಕ್ಷಯ ಕೃಷ್ಣ ( ಶ್ರೀ.ನಾಗೇಶ್ ಎ ಮತ್ತು ಶ್ರೀಮತಿ. ರಾಜೀವಿ ಯವರ ಪುತ್ರ), ಮಾ| ಅಕ್ಷತ್ ಕುಮಾರ್ (ಶ್ರೀ. ಜಿ.ಈಶ್ವರ್ ನಾಯ್ಕ್ ಮತ್ತು ಶ್ರೀಮತಿ. ಮಾಲತಿಯವರ ಪುತ್ರ), ಮಾ| ಮಹಮ್ಮದ್ ಅರ್ಫಾನ್ ಶಹನ್ (ಶ್ರೀ. ಅಬ್ದುಲ್ ಮಜೀದ್ ಮತ್ತು ಶ್ರೀಮತಿ. ಆಶ್ಪಾನ ರವರ ಪುತ್ರ) ಮಾ| ವೃಷಭ್ ಆರ್ ರೈ (ಶ್ರೀಮತಿ. ಭವ್ಯ ರೈ ಯವರ ಪುತ್ರ ) ಮತ್ತು ಮಾ| ಮಹಮ್ಮದ್ ಅಫ್ಜಲ್ (ಶ್ರೀ. ಬಿ.ಎಸ್ ಮೊಹಮ್ಮದ್ ಇಕ್ಬಾಲ್ ಮತ್ತು ಶ್ರೀಮತಿ ಶಮೀರ ರವರ ಪುತ್ರ) ರವರು ಆಯ್ಕೆಯಾಗಿದ್ದಾರೆ. ‘ನಿಮ್ಮ ಕನಸುಗಳನ್ನು ಚಿತ್ರಿಸಿಕೊಳ್ಳಿ’ (Draw your dream) ಎಂಬ ಧ್ಯೇಯ ವಾಕ್ಯದೊಂದಿಗೆ ನಡೆಯುವ ಜಾಂಬೂರಿ ಉತ್ಸವದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ 46 ಸ್ಕೌಟ್ ಮತ್ತು ಗೈಡ್ಸ್ ಹಾಗೂ 5 ಶಿಕ್ಷಕರು ಕೂಡ ಭಾಗವಹಿಸುತ್ತಿದ್ದು ವಿದ್ಯಾರ್ಥಿಗಳು ವಿವಿಧ ದೇಶಗಳೊಂದಿಗೆ ತಮ್ಮ ಸಂಸ್ಕೃತಿಯನ್ನು ಹಂಚಿಕೊಳ್ಳಲಿದ್ದಾರೆ. ಈ ಸದವಕಾಶವನ್ನು ಪಡೆದ ವಿದ್ಯಾರ್ಥಿಗಳಿಗೆ ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ. ಶೋಭಾ ನಾಗರಾಜ್ ರವರು ಶುಭವನ್ನು ಹಾರೈಸಿದ್ದಾರೆ. 

   

ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top