ಸಾಹಿತ್ಯ ಲೋಕದ ಮಿನುಗುತಾರೆ- ಪ್ರಿಯಾ ಸುಳ್ಯ

Upayuktha
0

ಸಾಧನೆ ಎನ್ನುವ ಸರಳವಾದ ಪದದಲ್ಲಿ ಸಾವಿರಾರು ಕಷ್ಟಗಳಿರುತ್ತವೆ. ಅಂತಹ ಕಷ್ಟಗಳನ್ನು ಸಾಧನೆಯ ಮೆಟ್ಟಿಲೆಂಬಂತೆ ಅರಿತು, ನಿರಂತರ ಶ್ರದ್ದೆಯಿಂದ ಹೋರಾಡಿದಾಗ ಮಾತ್ರ ಸಾಧನೆಯ ಪಥದಲ್ಲಿ ಚಲಿಸಲು ಸಾಧ್ಯ. ಅಂತಹ ಹಾದಿಯಲ್ಲಿ ಚಲಿಸಿ ಸಾಧನೆಯ ಮೆಟ್ಟಿಲೇರಿದವರು ಪ್ರಿಯಾ ಸುಳ್ಯ.


ಇವರು ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ವೇಣುಗೋಪಾಲಗೌಡ ಮತ್ತು ಕಮಲಾಕ್ಷಿ ದಂಪತಿಗಳ ನಾಲ್ಕು ಜನ ಮಕ್ಕಳಲ್ಲಿ ಇವರೋರ್ವರು. ಇವರ ಮಗ ಹಾರ್ತಿಕ್. ಇವರು ಪ್ರಸ್ತುತ ಸವಣೂರು ಸೀತಾರಾಮ್ ರೈ ಅಧ್ಯಕ್ಷತೆಯನ್ನು ಹೊಂದಿರುವ ಆದರ್ಶ ವಿವಿಧೋದ್ದೇಶ ಸಹಕಾರ ಸಂಘ ಸುಳ್ಯ (ನಿ) ಎಂಬ ಸಂಸ್ಥೆಯಲ್ಲಿ 11 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ.


ಇವರು ತಮ್ಮ ಹವ್ಯಾಸವಾಗಿ ಅಭಿನಯ, ಭಜನೆ, ನೃತ್ಯ, ಚಿತ್ರಕಲೆ, ಕವನ ಬರೆಯುವುದನ್ನು ತೊಡಗಿಸಿಕೊಂಡರು. ಅಂದು ಹವ್ಯಾಸವಾಗಿ ರೂಡಿಸಿಕೊಂಡ ಕಲೆಗಳು ಇಂದು ಸಾಧನೆಯ ಪಟ್ಟಿಯಲ್ಲಿ ಮಿಂಚುವಂತೆ ಮಾಡಿದೆ. ಶ್ರದ್ಧೆಯಿಂದ ಯಾವುದೇ ಪರಿಶ್ರಮ ಹಾಕಿದರು ವ್ಯರ್ಥವಾಗಲಾರದು ಎಂಬ ಮಾತು ಪ್ರಿಯ ರವರ ಜೀವನದಲ್ಲಿ ಅಕ್ಷರಶಃ ಸತ್ಯವಾಗಿದೆ.


ಇವರು 2010ರ ಅಕ್ಟೋಬರ್‍‌ನಲ್ಲಿ ನಡೆದ ಸುದ್ದಿ ಬೆಳ್ಳಿ ಹಬ್ಬದ ಪ್ರಯುಕ್ತ ನಡೆದ ಕಾರ್ಯಕ್ರಮಗಳಲ್ಲಿ ಜಾನಪದ ನೃತ್ಯ, ಫಿಲಂ ಡ್ಯಾನ್ಸ್, ವೀರಗಾಸೆ, ಕೋಲಾಟ ತಂಡದಲ್ಲಿ ಭಾಗವಹಿಸಿ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿರುತ್ತಾರೆ. ಅದೇ ರೀತಿ ಸ್ವಸಹಾಯ ಸಂಘದ ದಶಮಾನೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಜಾನಪದ ಗೀತೆಗೆ ದ್ವಿತೀಯ, ಜಾನಪದ ನೃತ್ಯಕ್ಕೆ ಪ್ರಥಮ, ಫಿಲಂ ಡ್ಯಾನ್ಸ್ ಗೆ ದ್ವಿತೀಯ, ರಸಪ್ರಶ್ನೆಯಲ್ಲಿ ದ್ವಿತೀಯ ತಂಡವಾಗಿ ಪ್ರಶಸ್ತಿಯನ್ನು ಪಡೆದಿರುತ್ತಾರೆ. 2010ರಲ್ಲಿ ಶ್ರೀ ಕೃಷ್ಣ ದೇವರಾಯ ಎಂಬ ಪೌರಾಣಿಕ ನಾಟಕವನ್ನು ಸುಳ್ಯದ ಚೆನ್ನಕೇಶವ ದೇವಸ್ಥಾನದಲ್ಲಿ ನಡೆದ ಗಣಿತ್ಯೋತ್ಸವ ಕಾರ್ಯಕ್ರಮದಲ್ಲಿ ಮಾಡಿದ್ದಾರೆ. ಹಾಗೆಯೇ ಈ ನಾಟಕವನ್ನು 2011ರಲ್ಲಿ ಮಂಗಳೂರು ಆಕಾಶವಾಣಿಯಲ್ಲಿಯೂ ಪ್ರಸಾರವಾಗಿದೆ. ಸುಳ್ಯದ ಚೆನ್ನಕೇಶವ ದೇವರ ಜಾತ್ರೆಯಲ್ಲಿ ಹಾಗೂ ಕಾಯರ್ತೋಡಿ ಮಹಾ ವಿಷ್ಣುವಿನ ಜಾತ್ರೋತ್ಸವದಲ್ಲಿ ಯಕ್ಷ ನೃತ್ಯವನ್ನು ಕೂಡ ಇವರು ಮಾಡಿರುತ್ತಾರೆ. ಅನೇಕ ಕಡೆಯಲ್ಲಿ ಭಜನೆ ಕಾರ್ಯಕ್ರಮವನ್ನು ಕೂಡ ಇವರು ನೀಡಿರುತ್ತಾರೆ.


2016ರಲ್ಲಿ ಅರೆ ಭಾಷೆ ಸಾಹಿತ್ಯ ಸಮ್ಮೇಳನ ಕಾರ್ಯಕ್ರಮದಲ್ಲಿ ಪೂರ್ಣಚಂದ್ರ ತೇಜಸ್ವಿಯವರ 'ಕರ್ವಾಲೋ' ಕಾದಂಬರಿ ಆಧಾರಿತ ನಾಟಕವನ್ನು ಪ್ರದರ್ಶನ ನೀಡಿರುತ್ತಾರೆ. 2017ರಲ್ಲಿ ಶಶಿ ಬ್ರದರ್ಸ್ ರವರ ಸಂಭ್ರಮ ಕಲಾವಿದರ್ ನಾಟಕ ತಂಡದಲ್ಲಿ "ಮಂಡೆ ಹಾಕೋಡ್ಚಿ" ಎಂಬ ತುಳು ಕಾರ್ಯಕ್ರಮದಲ್ಲಿ ಪ್ರದರ್ಶನ ನೀಡಿರುತ್ತಾರೆ.


ಕೊರೋನಾ ಲಾಕ್ಡೌನ್ ಸಮಯದಲ್ಲಿ ವಾಯ್ಸ್ ಆಫ್ ಆರಾಧನಾ ಎಂಬ ಹೆಸರಿನ ಸಾಮಾಜಿಕ ಜಾಲತಾಣದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕೂಡ ಭಾಗವಹಿಸಿ "ವಾಯ್ಸ್ ಆರಾಧನಾ ತಂಡ "ಅವಾರ್ಡ್ ನೀಡಿ ಗೌರವಿಸಿದೆ.ಹೀಗೆ ಆನ್ಲೈನ್ ನಲ್ಲಿ ನಡೆದ ಹಲವಾರು ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ಪಡೆದಿದ್ದಾರೆ. ಶ್ರೀ ಕೃಷ್ಣ ಯುವಕ ಮಂಡಲ ಸಿಟಿ ಗುಡ್ಡೆ ಇವರಿಂದ ಸನ್ಮಾನ ಸ್ವೀಕರಿಸಿದ್ದಾರೆ. 2022ರ "ಸುದ್ದಿ ಬಿಡುಗಡೆ ದೀಪಾವಳಿ ವಿಶೇಷಾಂಕ" ಮತ್ತು "ಅಮರ ಸುಳ್ಯ ಸುದ್ದಿ ದೀಪಾವಳಿ ವಿಶೇಷಾಂಕ" ದಲ್ಲಿ ಕವನ ಮತ್ತು ಲೇಖನ ಪ್ರಕಟಗೊಂಡಿದೆ. ಧರ್ಮಸ್ಥಳದ ಕವಿಗೋಷ್ಠಿಯಲ್ಲಿ ಭಾಗವಹಿಸಿದ್ದಾರೆ. ಕರುನಾಡ ಹಣತೆ ಕವಿ ಬಳಗ ಮತ್ತು ಸಾಂಸ್ಕೃತಿಕ ಕಲಾತಂಡ (ರಿ) ಚಿತ್ರದುರ್ಗ ಕೋಲಾರ ಘಟಕದ ಕವಿಗೋಷ್ಠಿಯಲ್ಲಿ ಭಾಗವಹಿಸಿರುತ್ತಾರೆ. ರಾಜ್ಯ ಒಕ್ಕಲಿಗರ ಸಂಘದ ರಾಜ್ಯ ಮಹಿಳಾ ಘಟಕದ ಸಹ ಕಾರ್ಯದರ್ಶಿ ಯಾಗಿ ಆಯ್ಕೆಯಾಗಿರುತ್ತಾರೆ. ಡ್ಯಾನ್ಸ್ ಮಮ್ಮಿ ಡಾನ್ಸ್ ನಲ್ಲಿ ಆಡಿಶನ್ ವಿಭಾಗಕ್ಕೆ ಆಯ್ಕೆಯಾಗಿ ಪ್ರದರ್ಶನ ನೀಡಿರುತ್ತಾರೆ. ಜೆಸಿಐ ಬೆಳ್ತಂಗಡಿರವರು ಆಯೋಜಿಸಿದ ಫ್ಯಾಷನ್ ಶೋನಲ್ಲಿ ಭಾಗವಹಿಸಿದ ಅನುಭವ ಇವರದು.


ಹೆಮ್ಮೆಪಡುವ ಮತ್ತೊಂದು ವಿಷಯವೆಂದರೆ ದಿನಪತ್ರಿಕೆಯಲ್ಲಿ ಇವರು ಬರೆದ ಕವನ ಪ್ರಕಟವಾಗುತ್ತಿದೆ. ಇಷ್ಟಲ್ಲದೆ ಇವರು ನಿರೂಪಣೆಯಲ್ಲೂ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಅಖಿಲ ಕರ್ನಾಟಕ ಬೆಳದಿಂಗಳ "ಸಾಹಿತ್ಯ ಸಮ್ಮೇಳನ ಸಮಿತಿ ಮನೆಮನೆಗಳಲ್ಲಿ ಕಾವ್ಯ ಸಂಭ್ರಮ– 2" ಮತ್ತು ಮೈಸೂರಿನಲ್ಲಿ ನಡೆದ ಕವಿಗೋಷ್ಠಿ ಕಾರ್ಯಕ್ರಮದಲ್ಲಿ ನಿರೂಪಣೆ ಮಾಡಿರುತ್ತಾರೆ.


ಇಷ್ಟೆಲ್ಲಾ ಸಾಧನೆಗೈದರೂ ಸ್ವಲ್ಪವೂ ಆಹಂ ಇಲ್ಲದ ಸರಳತೆಯ ನಡೆಯ ಸ್ವಭಾವದವರು. ನಿಮ್ಮ ಸಾಧನೆಗೆ ಪ್ರೋತ್ಸಾಹ ಯಾರಿಂದೂ ಕೇಳಿದಾಗ ಅವರ ಮನದಲ್ಲಿ ಮೂಡಿದ ಪದವೊಂದೇ "ನನ್ನ ಅಪ್ಪ ಅಮ್ಮ ಹಾಗೂ ಮಗ". ಹೆಣ್ಣು ಮಕ್ಕಳನ್ನು ಮನೆಯಿಂದ ಹೊರಗೆ ಕಳುಹಿಸಲು ಆಲೋಚಿಸುವ ಜನರ ನಡುವೆ, ನನ್ನ ಕನಸಿಗೆ ಪ್ರೋತ್ಸಾಹ ನೀಡಿ, ಇಷ್ಟೆಲ್ಲಾ ನನ್ನ ಸಾಧನೆಗೆ ಅಡಿಪಾಯವಾಗಿರುವ ನನ್ನ ಅಪ್ಪ ಅಮ್ಮನಿಗೆ ನನ್ನ ನಮನಗಳು. ನನ್ನ ಮಗ ಏಕೆಂದರೆ ಎಳವೆಯಲ್ಲಿಯೇ ನನಗೆ ಪ್ರೋತ್ಸಾಹ ಮಾಡುತ್ತಾನೆ. ನಾನು ಅವನಿಗೆ ಸ್ಪೂರ್ತಿ ಅವನು ನನಗೆ ಸ್ಪೂರ್ತಿ ಇದೇ ನನ್ನ ಪುಟ್ಟ ಪ್ರಪಂಚ ಎಂದರು.


ಕನ್ನಡ ಸಾಹಿತ್ಯ ಸಾಗರ ಸಂಸ್ಥೆಯವರು ಆಯೋಜಿಸಿದ ಸಮ್ಮೇಳನದಲ್ಲಿ" ಆಯ್ದಕ್ಕಿ ಲಕ್ಕಮ್ಮ ರಾಜ್ಯ ಪ್ರಶಸ್ತಿ", ಕರುನಾಡ ಸೇವಾ ಟ್ರಸ್ಟ್ ಮಂಡ್ಯ ಇವರ ವತಿಯಿಂದ "ಕರುನಾಡ ವಿಭೂಷಣ ಪ್ರಶಸ್ತಿ 2022", "ಕಾವ್ಯಭೂಷಣ ಪ್ರಶಸ್ತಿ", "ಪ್ರಜಾಭೂಷಣ ಪ್ರಶಸ್ತಿ 2022" ಶ್ರೀ ಲಕ್ಕಮ್ಮ ದೇವಿ ಕಲಾಪೋಷಕ ಸಂಘ (ರಿ) ಬ್ಯಾಕೂಡ ಬೆಳಗಾವಿ ಇದರ ವತಿಯಿಂದ "ಕೌಜಲಗಿ ನಿಂಗಮ್ಮ ಪ್ರಶಸ್ತಿ ", "ಕರುನಾಡ ಮಹನೀಯ ಪ್ರಶಸ್ತಿ"," ಕೆಂಪಮ್ಮ ಪುರಸ್ಕಾರ", "ಕನ್ನಡ ರಾಜ್ಯೋತ್ಸವ ಪ್ರಶಸ್ತಿ" ಪಡೆದಿರುವ ಹೆಗ್ಗಳಿಕೆ ಇವರದು.


ಇವರು "ನಾನು ನಾನು ನಾವು" ಎಂಬ ಕವನ ಸಂಕಲನವನ್ನು ರಚಿಸಿದ್ದಾರೆ.


ಜನತೆಗೊಂದು ಸಂದೇಶ: ಕಲೆಗೆ ಪ್ರೋತ್ಸಾಹ ನೀಡಬೇಕು. ಇಂದಿನ ಯುವ ಪೀಳಿಗೆಯ ಆಸಕ್ತರಿಗೆ ತಮ್ಮ ಕಲೆಯ ಬಗ್ಗೆ ಪ್ರೋತ್ಸಾಹ ನೀಡುವುದರ ಮೂಲಕ ಹುರಿದುಂಬಿಸಬೇಕೇ ಹೊರತು ಟೀಕಿಸಬಾರದು. ತಮ್ಮ ಸಾಧನೆಯ ಜೊತೆಗೆ ಇತರರನ್ನು ಪ್ರೋತ್ಸಾಹಿಸಬೇಕು.


ಒಟ್ಟಿನಲ್ಲಿ "ಆಡು ಮುಟ್ಟದ ಸೊಪ್ಪಿಲ್ಲ" ಎಂಬ ಮಾತಿನಂತೆ ಇವರು ಕೈಯಾಡಿಸದ ಜಾಗವಿಲ್ಲ. ಪ್ರತಿ ಕ್ಷೇತ್ರದಲ್ಲೂ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಬಹುಮುಖ ಪ್ರತಿಭೆ ಪ್ರಿಯಾ ಸುಳ್ಯರವರಿಗೆ ಅಭಿನಂದನೆಗಳು. ನಿಮ್ಮ ಸಾಹಿತ್ಯ ಲೋಕದ ಪಯಣ ಹೀಗೆ ಸಾಗಲಿ ಎಂದು ಆಶಿಸೋಣ.



- ಕೀರ್ತನ ಒಕ್ಕಲಿಗ ಬೆಂಬಳೂರು

ಪ್ರಥಮ ಬಿಬಿಎ

ವಿವೇಕಾನಂದ ಕಾಲೇಜು ಪುತ್ತೂರು

ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter  


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top