ಪೆರ್ಲ: ಸತ್ಯನಾರಾಯಣ ಎಎಲ್‌ಪಿ ಶಾಲೆಯ ವತಿಯಿಂದ ವಾಚನಾ ಮಾಸಾಚರಣೆಯ ಸಮಾರೋಪ ಹಾಗೂ ಶಾಲಾ ಡೈರಿ ಬಿಡುಗಡೆ ಕಾರ್ಯಕ್ರಮ ಗುರುವಾರ ಶಾಲಾ ಲೈಬ್ರರಿ ಸಭಾಂಗಣದಲ್ಲಿ ಜರಗಿತು. ಕಾರ್ಯಕ್ರಮವನ್ನು ಶಾಲಾ ಪ್ರಬಂಧಕ ಶ್ರೀಕೃಷ್ಣ ವಿಶ್ವಾಮಿತ್ರ ಉದ್ಘಾಟಿಸಿದರು. ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷೆ ಜ್ಯೋತಿಲಕ್ಷ್ಮಿ ಕಾಕುಂಜೆ ಅಧ್ಯಕ್ಷತೆ ವಹಿಸಿದ್ದರು. ಪತ್ರಕರ್ತ ಜಯ ಮಣಿಯಂಪಾರೆ ವಾಚನ ಮಾಸಾಚರಣೆಯ ಸಮಾರೋಪ ಭಾಷಣಗೈದರು.
ರಕ್ಷಕ ಶಿಕ್ಷಕ ಸಂಘದ ರವಿ ಸೂರ್ಡೆಲು, ಉದಯ ಶುಭಂ, ರಮೇಶ್ಚಂದ್ರ, ದೇವಕಿ, ಮೋಹನ ಪೆರ್ಲ, ಹಮೀದ್ ಕುರೆಡ್ಕ, ನಿವೃತ್ತ ಶಿಕ್ಷಕಿ ಸುಶೀಲ ಟೀಚರ್ ಮೊದಲಾದವರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಶಾಲಾ ಸ್ಥಾಪಕರಾದ ದಿವಂಗತ ಪರ್ತಾಜೆ ವೆಂಕಟ್ರಮಣ ಭಟ್ಟರ ಜನ್ಮ ದಿನಾಚರಣೆಯ ಅಂಗವಾಗಿ ಮಕ್ಕಳಿಗೆ ನಡೆಸಿದ ರಸಪ್ರಶ್ನೆ ಸ್ಪರ್ಧೆಯಲ್ಲಿ ಬಹುಮಾನ ವಿಜೇತರಾದವರಿಗೆ ಬಹುಮಾನ ನೀಡಲಾಯಿತು. ಶಾಲಾ ಶಿಕ್ಷಕರು ನೇತೃತ್ವ ವಹಿಸಿದ್ದರು. ಶಾಲಾ ಮುಖ್ಯೋಪಾಧ್ಯಾಯ ಗೋಪಾಲಕೃಷ್ಣ ಭಟ್ ಸ್ವಾಗತಿಸಿ, ಶಿಕ್ಷಕಿ ಸಂಧ್ಯಾ ವಂದಿಸಿದರು. ಶಿಕ್ಷಕ, ಮಕ್ಕಳ ರಂಗತಜ್ಞ ಉದಯ ಸಾರಂಗ್ ಕಾರ್ಯಕ್ರಮ ನಿರೂಪಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ