ಬೆಂಗಳೂರು: ನಗರದ ಪ್ರತಿಷ್ಠಿತ ವಿಜಯ ಕಾಲೇಜು ಆರ್ ವಿ ರಸ್ತೆ ಹಾಗು ಬೆಂಗಳೂರು ಕಾನೂನು ಅದ್ಯಯನ ಸಂಸ್ಥೆ ಸಹಯೋಗದಲ್ಲಿ ಇಂದು (ಜು.21) ಶುಕ್ರವಾರ ಬಸವನಗುಡಿಯ ಆರ್ ವಿ ರಸ್ತೆಯ ವಿಜಯ ಕಾಲೇಜಿನಲ್ಲಿ ಆಯೋಜಿಸಲಾಗಿದೆ.
ಇಂದು ಬೆಳಿಗ್ಗೆ 9.30 ನಿಮಿಷಕ್ಕೆ ಕಾಲೇಜು ಶಿಕ್ಷಣ ಇಲಾಖೆಯ ಉಪ ಆಯುಕ್ತ ಪ್ರೊ. ಕೆ.ರಾಮಕೃಷ್ಣ ರೆಡ್ಡಿ ಅವರು ವಿಚಾರ ಸಂಕಿರಣವನ್ನು ಉದ್ಘಾಟನೆ ಮಾಡುವರು. ಬೌಧ್ಧಿಕ ಆಸ್ತಿಯ ಹಕ್ಕುಗಳು ವಿಷಯದ ತಜ್ಞ ಟಿ.ಎಸ್ ಶ್ರೀಧರ್ ಅವರು ಆಶಯ ಭಾಷಣವನ್ನು ಮಾಡುವರು. ಬಿ.ಹೆಚ್.ಎಸ್. ಉನ್ನತ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಜಿ.ವಿ ವಿಶ್ವನಾಥ್ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ವಿಚಾರ ಸಂಕಿರಣದ ಸಂಚಾಲಕಿ ಡಾ. ಬಿ.ಪಿ. ನೇತ್ರಾವತಿ ಅವರು ತಿಳಿಸಿದ್ದಾರೆ.
ವಿಚಾರ ಸಂಕಿರಣದಲ್ಲಿ ಅನೇಕ ವಿದ್ವಾಂಸರುಗಳು ತಮ್ಮ ವಿದ್ವತ್ ಪೂರ್ಣವಾದ ವಿಚಾರಗಳನ್ನು ಮಂಡಿಸಲಿದ್ದಾರೆ. ವಿಚಾರ ಸಂಕಿರಣದ ಸಮಾರೋಪ ಸಮಾರಂಭವನ್ನು ಇಂದು ಸಂಜೆ ಆಯೋಜಿಸಲಾಗಿದ್ದು ಬೆಂಗಳೂರು ವಿಶ್ವವಿದ್ಯಾಲಯದ ಕಾನೂನು ಕಾಲೇಜಿನ ಪ್ರೊ. ವಿ ಸಂದೇಶ್ ಅವರು ಸಮಾರೋಪ ಭಾಷಣ ಮಾಡಲಿದ್ದಾರೆ. ಬಿ ಹೆಚ್.ಎಸ್. ಉನ್ನತ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಗಳಾದ ಎನ್.ಬಿ. ಭಟ್ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ವಿಚಾರ ಸಂಕಿರಣದ ಉದ್ಘಾಟನೆ ಹಾಗೂ ಸಮಾರೋಪ ಸಮಾರಂಭದಲ್ಲಿ ನಾಡಿನ ಖ್ಯಾತ ಶಿಕ್ಷಣ ತಜ್ಞ ಡಾ. ಕೆ.ಎಸ್ ಸಮೀರ ಸಿಂಹ ಅವರು ಗೌರವ ಅತಿಥಿಗಳಾಗಿ ಎಂದು ಸಂಕೀರ್ಣದ ಉಪ ಸಂಚಾಲಕರಾದ ಡಾ. ಗೋಪಾಲಕೃಷ್ಣ ಅವರು ತಿಳಿಸಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ