ಆಕಾಶವಾಣಿ ವಾಹಿನಿಗಳ ವಿಲೀನ: ಅರೆಬರೆ ಮಾಹಿತಿ, ಅನರ್ಥ ಮತ್ತು ವ್ಯರ್ಥ ಚರ್ಚೆಗಳು

Upayuktha
0

ಲ್ಲೆಡೆ ಒಂದೇ ಸಮ ಪ್ರಶ್ನೆಗಳು.. ಒಬ್ಬರು tweet ಮಾಡುತ್ತಾರೆ, ಮತ್ತೊಬ್ಬರು ಸುದ್ದಿ ಮಾಡುತ್ತಾರೆ, ಇನ್ನೊಬ್ಬರು ಪ್ರಶ್ನೆ ಮಾಡುತ್ತಿದ್ದಾರೆ...

ಪ್ರತಿಭಟನೆ ಮಾಡ್ತಾರಂತೆ! ಇಷ್ಟಕ್ಕೂ ವಿಷಯ ಏನು?

ಪ್ರಸಾರಭಾರತಿ FM Rainbow ನಿಲ್ಲಿಸುತ್ತಾರಂತೆ..!

ಬೆಂಗಳೂರಿನ ಏಕೈಕ FM (?) ವಾಹಿನಿಯನ್ನು ನಿಲ್ಲಿಸುತ್ತಾರೆ !!

ಹೀಗೆ ಅನಿಸಿದ್ದೆಲ್ಲ ಮಾತಾಡುತ್ತಿದ್ದರೆ, ಆಶ್ಚರ್ಯವಾಗುತ್ತದೆ.


ಬೆಂಗಳೂರಿನಲ್ಲಿ ಕೇಂದ್ರ ಸರ್ಕಾರದ ಅಥವಾ ಪ್ರಸಾರ ಭಾರತಿಯ 3 FM ಕೇಂದ್ರಗಳು ಇವೆ. (ಏಕೈಕ ಅಲ್ಲ)

FM101.3 mhz ಅಂದರೆ Rainbow

FM102.9 mhz ಅಂದರೆ ವಿವಿಧ ಭಾರತಿ

FM100.1 mhz ಅಂದರೆ ಅಮೃತವರ್ಷಿಣಿ


ಇವು ಯಾವುದೂ ನಿಲ್ಲುತ್ತಿಲ್ಲ.

ಅಮೃತವರ್ಷಿಣಿಯಲ್ಲಿ ರಾಷ್ಟೀಯ ವಾಹಿನಿಯ ರಾಗಮ್ ವಾಹಿನಿಯನ್ನು ಕೇಳಬಹುದು. ಅಮೃತವರ್ಷಿಣಿ ಶಾಸ್ತ್ರೀಯ ಸಂಗೀತವಾಹಿನಿ. ರಾಗಮ್ ಸಹ ಶಾಸ್ತ್ರೀಯ ಸಂಗೀತವೇ. ಎರಡಕ್ಕೂ ಅಂತರ ಇಲ್ಲ. ರಾಗಮ್ Satellite ವಾಹಿನಿ. ಅದನ್ನು 100.1 ರಲ್ಲಿ ರೇಡಿಯೋ Set ಮೂಲಕ ಇಂದಿಗೂ ಕೇಳಬಹುದು. ಅಮೃತವರ್ಷಿಣಿ ಪ್ರಸಾರ ಇದೆ.


ಇನ್ನು FM rainbow 101.3mhz

ಖಂಡಿತ ಕನ್ನಡ ಕಾರ್ಯಕ್ರಮ ಪ್ರಸಾರ ಆಗುತ್ತಿದೆ ಮತ್ತು ಆಗುತ್ತದೆ. ಇಲ್ಲಿ ಗಮನಿಸಬೇಕಾದ ಸಂಗತಿ ಎಂದರೆ ಮೀಡಿಯಂ wave 612 khz ನ ಕಾರ್ಯಕ್ರಮ ಗಳು 101.3ರಲ್ಲಿ ಬರುತ್ತವೆ ಎಂಬುದು. ಅತ್ಯುತ್ತಮ ಕನ್ನಡ ಮಾಹಿತಿಪೂರ್ಣ ಪ್ರಧಾನ ವಾಹಿನಿ ಕಾರ್ಯಕ್ರಮ FM ನಲ್ಲಿ ಕೇಳುವಂತೆ ಆಗುವ ಸಾಧ್ಯತೆ ಇದೆ.

Medium wave ತಂತ್ರಜ್ಞಾನ ಹಳತಾಗಿದೆ.


ರೇಡಿಯೋ ಸೆಟ್‌ಗಳು ಸಿಗುತ್ತಿಲ್ಲ, ಹೀಗಿರುವಾಗ medium wave ಕಾರ್ಯಕ್ರಮ ಎಫ್‌ಎಂನಲ್ಲಿ ಕೇಳುವುದು ಸಂತೋಷದ ಸಂಗತಿಯೇ ಅಲ್ಲವೇ. ಹಳೆಯ ತಂತ್ರಜ್ಞಾನದ MW Station  ನಿಧಾನವಾಗಿ FM ಆಯಿತು ಎಂದು ಭಾವಿಸಬಹುದು. 101.3 ನಿಂತಿತು ಎಂದು ಅಲ್ಲ. ಇನ್ನು ಮನರಂಜನೆ ಮಾಹಿತಿ ಚಿತ್ರಗೀತೆ Game Show, ಮುಂತಾದ RJ ಮಾತಿನ ಕಾರ್ಯಕ್ರಮ FM ವಿವಿಧ ಭಾರತಿಯಲ್ಲಿ ಪ್ರಸಾರ ಆಗುತ್ತದೆ.


Mobile app ಮೂಲಕ ಆಕಾಶವಾಣಿಯ ಯಾವುದೇ channel ಅನ್ನು ವಿಶ್ವದ ಯಾವುದೇ ಮೂಲೆಯಿಂದ ಕೇಳಬಹುದು. ತಂತ್ರಜ್ಞಾನ ಮುಂದುವರೆದಿದೆ. ಈಗ ಒಂದೇ ಕಡೆ ಮೂರು ನಾಲ್ಕು FM ಕೇಂದ್ರಗಳ ನಿರ್ವಹಣೆ ಮಾಡುವ ಬದಲು ಜಿಲ್ಲೆಗೆ ಒಂದು FM ಕೊಡುವ ಆಲೋಚನೆಯಲ್ಲಿದೆ ಎಂದು ಎರಡು ವರ್ಷದ ಹಿಂದೆ ಪ್ರಸಾರ ಭಾರತಿ CEO ಹೇಳಿದ್ದನ್ನು ಸ್ಮರಿಸಬಹುದು.


ಚಿತ್ರಗೀತೆ ಪ್ರೇಮಿಗಳು FM 102.9 ಕೇಳಬಹುದು. ಕನ್ನಡಭಾರತಿ, ಚಿಂತನ, ಗೀತಾರಾಧನ, ನಾಟಕ, ರೂಪಕ, ವನಿತಾವಿಹಾರ, ಯುವವಾಣಿ, ಕೃಷಿರಂಗ ತರಹದ ಕಾರ್ಯಕ್ರಮಗಳನ್ನು 101.3 ರಲ್ಲಿ ಕೇಳಬಹುದು.


ನೋಕಿಯಾ ಹಳೆಯ ಮಾದರಿ phone ಬಳಸುವುದು ಬಿಟ್ಟು android ಗೆ ಬದಲಾಯಿಸಲಿಲ್ಲವೇ? ಹಾಗೇ ಇದು. Mobile ಬಂದ ಮೇಲೆ ಪತ್ರ ಬರೆಯುವುದನ್ನು ನೀವು ನಿಲ್ಲಿಸಲಿಲ್ಲವೇ? ಹಾಗೇ ಇದು. Medium wave radio outdated ತಂತ್ರಜ್ಞಾನ ಎಂಬುದು ಅರಿತರೆ, ಸಾಕು. ಅದಕ್ಕಾಗಿ FM ನಲ್ಲಿ ಪ್ರಸಾರ ಎಂದು ಅರ್ಥ ಮಾಡಿಕೊಂಡರೆ, ಸ್ವಲ್ಪ ಅಲೋಚಿಸಿದರೆ ಸಾಕು.

 

ಹಿಂದಿ ಹೇರಿಕೆಯೂ ಅಲ್ಲ, ನಿಂತುಹೋಗುವುದೂ ಅಲ್ಲ. ಈ ಎಲ್ಲ ಸಂಗತಿಗಳನ್ನು ಸುಲಭವಾಗಿ ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ನಿರಂತರವಾಗಿ ರೇಡಿಯೋ ಕೇಳುತ್ತಿರುವ ನಮ್ಮ ಶ್ರೋತೃ ಮಿತ್ರರಿಗೆ ಇದು ಗೊತ್ತು. ಆದರೆ ಸುದ್ದಿ ಬರೆಯುವವರಿಗೆ ಯಾಕೋ ಗೊತ್ತಾಗುತ್ತಿಲ್ಲ. ಅರ್ಥ ಮಾಡಿಕೊಂಡರೆ  ಆಮೇಲೆ ಚರ್ಚೆ  ಮಾತನಾಡಬಹುದು.


- ಬಿ.ಕೆ ಸುಮತಿ

ಕಾರ್ಯಕ್ರಮ ನಿರೂಪಕರು, ಆಕಾಶವಾಣಿ ಬೆಂಗಳೂರು


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter  

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top