ಮೈಸೂರು: ಸರಸ್ವತಿ ಪುರಂನ ಶ್ರೀ ಕೃಷ್ಣ ಧಾಮದಲ್ಲಿ 36ನೇ ಚಾತುರ್ಮಾಸ್ಯ ವ್ರತ ಸಂಕಲ್ಪದಲ್ಲಿರುವ ಶ್ರೀ ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಅಧಿಕ ಮಾಸದ ಪ್ರಯುಕ್ತ ತಾವು ನಾಡಿನಾದ್ಯಂತ ನಡೆಸುವಂತೆ ಕರೆ ನೀಡಿರುವ ದಶಕೋಟಿ ಶ್ರೀ ರಾಮನಾಮ ಜಪಯಜ್ಞವನ್ನು ಉದ್ಘಾಟಿಸಿ, ಸರಳ ಜಪಯಜ್ಞದ ಮಾಹಿತಿ ಕರಪತ್ರ ಬಿಡುಗಡೆಗೊಳಿಸಿದರು. ಬಳಿಕ ಸಾಮೂಹಿಕ ಜಪ ನಡೆಯಿತು.
ಪ್ರತಿನಿತ್ಯ ಸಾಯಂಕಾಲ ನಡೆಯುವ ಶ್ರೀಗಳ ವಿದ್ಯಾರ್ಥಿ ಕೌಶಿಕ್ ಜಪ ವಿಧಾನ ಬೋಧಿಸಿದರು. ಸಂದರ್ಭದಲ್ಲಿ ಭಾಗವಹಿಸುವ ನೂರಾರು ಮಂದಿ ಭಕ್ತರಿಂದ ಸಾಮೂಹಿಕ ಜಪ ನಡೆಯಲಿದೆ. ಅಲ್ಲದೇ ಸೋಮವಾರದಂದು ನಾಡಿನಾದ್ಯಂತ ಇರುವ ಪೇಜಾವರ ಮಠದ ಶಿಕ್ಷಣ ಸಂಸ್ಥೆಗಳೂ ಸೇರಿದಂತೆ ಅನೇಕ ಕಡೆಗಳಲ್ಲಿ ಜಪಯಜ್ಞಕ್ಕೆ ಚಾಲನೆ ದೊರೆತಿದೆ.
ಉದ್ಘಾಟನಾ ಕಾರ್ಯಕ್ರಮದಲ್ಲಿ ವಿದ್ವಾನ್ ಎ.ಹರಿದಾಸ್ ಭಟ್, ಚಾತುರ್ಮಾಸ್ಯ ಸಮಿತಿ ಅಧ್ಯಕ್ಷ ಎಂ.ಕೆ ಪುರಾಣಿಕ್, ಕಾರ್ಯದರ್ಶಿ ರವಿ ಶಾಸ್ತ್ರಿ, ಶ್ರೀನಿವಾಸ ಪ್ರಸಾದ್, ವಿದ್ವಾನ್ ವರಖೇಡಿ ಪದ್ಮನಾಭ ಆಚಾರ್ಯ ಮೊದಲಾದವರು ಉಪಸ್ಥಿತರಿದ್ದರು.
ಮೈಸೂರು: ರೊಗಮೋಚನ ಧನ್ವಂತರಿ ಸನ್ನಿಧಾನ ಶ್ರೀ ಉತ್ತರಾದಿ ಮಠದಲ್ಲಿ ಗಾನಸಿರಿ- ವೇದಾಂತ ಲಹರಿ (33 ತೀರ್ಥಕ್ಷೇತ್ರಗಳ ದರ್ಶನ)ವಿನೂತನ ಸರಣಿ ಕಾರ್ಯಕ್ರಮ ಉದ್ಘಾಟನೆಯನ್ನು ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ನೆರವೇರಿಸಿ ಅನುಗ್ರಹ ಸಂದೇಶ ನೀಡಿದರು. ವಿದ್ವಾನ್ ಬೆ ನಾ ವಿಜಯೀಂದ್ರಾಚಾರ್ಯ, ವಿದ್ವಾನ್ ಗುತ್ತಲ್ ವಿದ್ಯಾಧೀಶಾಚಾರ್ಯ, ಪ್ರಸಿದ್ಧ ಗಾಯಕ ವಿದ್ವಾನ್ ರಾಯಚೂರು ಶೇಷಗಿರಿ ದಾಸ್ ಉಪಸ್ಥಿತರಿದ್ದರು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ