ಮಾಧ್ಯಮ ಲೋಕ: ಎಷ್ಟು ಎಚ್ಚರಿಕೆಯಿಂದ ಇದ್ದರೂ ಸಾಲದು

Upayuktha
0

 


ತ್ರಿಕೋದ್ಯಮ ಎಂದಾಕ್ಷಣ ಸಮಾಜದ ಜನರಲ್ಲಿ ಭಯ ಮೂಡುವುದು ಸಹಜ. ಯಾಕೆಂದರೆ ಇತ್ತೀಚಿನ ದಿನಗಳಲ್ಲಿ ಪತ್ರಿಕೋದ್ಯಮ ಎನ್ನುವುದು ದೂರನ್ನು ಬರೆಯುವವರು, ಏನೂ ನಡೆದರೂ ಇದ್ದುದನ್ನು ಇದ್ದ ಹಾಗೆ ಸಾವಿರಾರು ಪತ್ರಿಕೆಗಳಲ್ಲಿ ಮೀಡಿಯಾಗಳಲ್ಲಿ ಪ್ರಚಾರ ಮಾಡುತ್ತಾರೆ ಎನ್ನುವುದೇ ಆಗಿದೆ. ಆದರೂ, ಸಮಾಜದ ಆಗು, ಹೋಗುಗಳನ್ನು ತಿಳಿಸುವುದೇ ನಮ್ಮ. ಪತ್ರಿಕೋದ್ಯಮಿಗಳು ಅಲ್ಲವೇ? ಹಾಗೇನಾದರೂ ಇರದೆ ಇದ್ದಿದ್ದರೆ ನಮಗೆ ನಮ್ಮ ದೇಶ, ರಾಜ್ಯದಲ್ಲಾಗುವ ಸುದ್ದಿಗಳನ್ನು ತಿಳಿಯಲು ಸಾಧ್ಯವಿತ್ತಾ ಎನ್ನುವುದರಲ್ಲಿ ಸಹ ಗಮನಹರಿಸಿದಾಗಲೇ ಪತ್ರಿಕೋದ್ಯಮದ ಬೆಲೆ ತಿಳಿಯಲು ಸಾಧ್ಯ.


ಪತ್ರಿಕೋದ್ಯಮಿಗಳೆಂದರೆ ಭಯವಿರುವಂತಹ ಜನರು ಯೋಚಿಸಬೇಕಾದದ್ದು ಏನೆಂದರೆ ಅಲ್ಲಿರುವ ವ್ಯಕ್ತಿಗಳು ಯಾವ ರೀತಿಯಲ್ಲಿ ಕಷ್ಟಗಳನ್ನು ಎದುರಿಸುತ್ತಿದ್ದಾರೆ. ನಮ್ಮ ಹಾಗೆಯೇ ಹೊತ್ತು ಹೊತ್ತು ಹೊಟ್ಟೆಗೆ ಅನ್ನವ ತಿನ್ನುತ್ತಿದ್ದಾರ? ಸಂಸಾರದಲ್ಲಿ ಸರಿಯಾಗಿ ಗಮನ ಹರಿಸುತ್ತಾ ಇದ್ದಾರ ಎಂದು ಕೊಂಚ ಪ್ರಮಾಣದಲ್ಲಾದರೂ ಯೋಚಿಸಲೇ ಬೇಕು. ಎಷ್ಟೋ ದಿನಗಳಲ್ಲಿ ಪತ್ರಿಕೋದ್ಯಮಿಗಳು ಮನೆಯಲ್ಲಿಯೇ ಇರುವುದಿಲ್ಲ ಮಧ್ಯರಾತ್ರಿ ಆಗಿರಬಹುದು, ಇನ್ಯಾವುದೋ ಹೊತ್ತಿನಲ್ಲಿ ಸಮಾಜಕ್ಕಾಗಿ ಹೋರಾಟ ನಡೆಸುತ್ತಾ ಒಂದಷ್ಟು ಮಾದರಿಯನ್ನಾಗಿ ಬದುಕಲು ಚಡಪಡಿಸುತ್ತಿರುತ್ತಾರೆ. ವರದಿಯ ವಿಷಯವೆಂದು ಬಂದರೆ ಎಷ್ಟು ಸೂಕ್ಷ್ಮವಾಗಿರಬೇಕೆಂದು ಆ ಹಾದಿಯಲ್ಲಿ ನಡೆದವರಿಗೆ ಮಾತ್ರ ಅರಿಯಲು ಸಾಧ್ಯ. ಯಾಕೆಂದರೆ ಅಲ್ಲಿ ಒಂದು ಪದ ಇಲ್ಲವೋ ವಾಕ್ಯವು ಬರೆಯಬೇಕಾದರೆ ಎಷ್ಟು ಜಾಗರೂಕರಾಗಿದ್ದರೂ ಸಾಕಾಗುವುದಿಲ್ಲ. ತಪ್ಪು ಎನ್ನುವುದು ಮನುಜನಿಂದ ಸಹಜ ಆದರೆ, ನಿಮ್ಮ ಬೇರೆ ಯಾವುದೇ ತಪ್ಪಾದರೂ ತಿದ್ದಿಕೊಂಡು ಸಾಗಬಹುದು ಆದರೇ, ಪತ್ರಿಕೋದ್ಯಮಿಗಳಿಂದ ತಪ್ಪಾಯಿತು ಎಂದರೆ ಅದರಲ್ಲೂ ಮುದ್ರಣ ಮಾಧ್ಯಮದಲ್ಲಂತೂ ಕೋಟಿಗಟ್ಟಲೆ ಜನರ ವೀಕ್ಷಣೆ ಆಗಿರುತ್ತದೆ. ಅಲ್ಲಿಯ ತಪ್ಪಿಗೆ ಕ್ಷಮೆ ಇರುವುದಿಲ್ಲ. ಅಪಾರ್ಥ ಬಾರದಂತೆ ಎಷ್ಟು ಜಾಗರೂಕತೆಯಿಂದ ಇದ್ದರೂ ಒಂದೊಂದು ಬಾರಿ ನಡೆದು ಹೋಗುತ್ತದೆ.  ದಂಡ ಮಾತ್ರವಲ್ಲದೆ ಎಷ್ಟೋ ವರದಿಗಾರರು ಉದ್ಯೋಗದಿಂದ ಹೊರ ಹೋಗಿರುವಂತಹ ಘಟನೆಗಳೂ ಇವೆ.


ಪತ್ರಿಕೋದ್ಯಮ ನಡೆಸಲು ತಾಳ್ಮೆ ಎನ್ನುವುದು ಬಹು ಮುಖ್ಯ. ಹಾಗೆಯೇ ಅತೀ ತೀವ್ರವಾದ ಆಸಕ್ತಿಯನ್ನು ಹೊಂದಿರಬೇಕಾಗುತ್ತದೆ. ಇದರೊಂದಿಗೆ ಈಗಿನ ಪತ್ರಿಕೋದ್ಯಮಕ್ಕೆ ಹೆಚ್ಚಿನ ಬೇಡಿಕೆಯನ್ನು ಕಾಣಬಹುದು. ಹಾಗಾಗಿ ವಿದ್ಯಾರ್ಥಿಗಳೆಲ್ಲ ಪತ್ರಿಕೋದ್ಯಮ ಕಲಿಯಲು ಮುಂದಾಗುತ್ತಿದ್ದಾರೆ. ಪತ್ರಿಕೋದ್ಯಮ ಎಂದಾಕ್ಷಣ ಕೇವಲ ವರದಿ ಮತ್ತು ನಿರೂಪಣೆ ಮಾಡುವುದು ಮಾತ್ರವಲ್ಲ. ಛಾಯಾಗ್ರಹಣ, ಚಿತ್ರಣಗಳ ಜೋಡಣೆ ಹೀಗೆನೆ ಹಲವು ವಿವಿಧ ಕಾರ್ಯಗಳನ್ನು ಕಾಣಬಹುದು. ವಿದ್ಯಾರ್ಥಿಗಳಿಗೆ ಪತ್ರಿಕೋದ್ಯಮದ ಆಸಕ್ತಿ ಬರಲು ಇವೆಲ್ಲವೂ ಒಂದು ಕಾರಣ ಎನ್ನಬಹುದು. ಪತ್ರಿಕೋದ್ಯಮಕ್ಕೆ ಕೆಟ್ಟ ಹೆಸರು ಬಾರದಂತೆ ಪ್ರತಿಯೊಬ್ಬ ಪತ್ರಕರ್ತರು ಅಚ್ಚುಕಟ್ಟಾಗಿ ನಿಯತ್ತಿನಿಂದ ನಡೆಸುವುದು ಆದ್ಯ ಕರ್ತವ್ಯವೆಂದು ಸಾಗುತ್ತಿದ್ದಾಗಲೇ ಪತ್ರಿಕೋದ್ಯಮ ಉಳಿಯಲು ಸಾಧ್ಯ.

-ಅನನ್ಯ ಎಚ್ ಸುಬ್ರಹ್ಮಣ್ಯ                                   

                                                                                                                                 

ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter  

إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top