ಕಟೀಲಿನಲ್ಲಿ ರಾಮಧಾನ್ಯ ಚರಿತೆ : ಅರ್ಥಾನುಸಂಧಾನ

Upayuktha
0

              ಧಾನ್ಯಗಳ ಮೂಲಕ ಕನಕದಾಸರಿಂದ ಸಾಮಾಜಿಕ ಧ್ಯಾನ


ಕಟೀಲು: ವರ್ಣಾಶ್ರಮದ ಹೆಸರಿನಲ್ಲಿ  ನಾರಾಯಣಗುರು, ನಿತ್ಯಾನಂದರು. ದಾಸಶ್ರೇಷ್ಟರಾದ ಕನಕದಾಸರನ್ನು ಒಂದು ಜಾತಿಗೆ ಸೀಮಿತಗೊಳಿಸುವುದು ಸರಿಯಲ್ಲ. ಸಮಾಜವನ್ನು ಒಂದಾಗಿಸುವ ಕನಕದಾಸರ ಕೀರ್ತನೆಗಳನ್ನು ಕೇಳುವ ಅರ್ಥೈಸುವ ಮೂಲಕ ಬದುಕನ್ನು ಅರಿಯುವ ಚಿಂತನೆಗಳಿಂದ ಬೆಳೆಯುವ ಅಗತ್ಯವಿದೆ ಎಂದು ಕಟೀಲು ದೇಗುಲದ ಆನುವಂಶಿಕ ಮೊಕ್ತೇಸರ ಶ್ರೀಹರಿನಾರಾಯಣದಾಸ ಆಸ್ರಣ್ಣ ಹೇಳಿದರು. 


ಮಂಗಳೂರು ವಿಶ್ವವಿದ್ಯಾನಿಲಯ ಕನಕದಾಸ ಸಂಶೋಧನ ಕೇಂದ್ರದ ವತಿಯಿಂದ ಶ್ರೀ ದುರ್ಗಾಪರಮೇಶ್ವರೀ ದೇವಳ ಪ್ರಥಮ ದರ್ಜೆ ಕಾಲೇಜು ಕಟೀಲು, ಲಲಿತಕಲಾ ಸಂಘದ ಸಹಯೋಗದಲ್ಲಿ  ಕನಕದಾಸರ ರಾಮಧಾನ್ಯ ಚರಿತೆ : ಅರ್ಥಾನುಸಂಧಾನ – ಗಾಯನ ವ್ಯಾಖ್ಯಾನ ಕಾರ್ಯಕ್ರಮವನ್ನು ಕಾಲೇಜಿನ ವಾಗ್ದೇವಿ ಸಭಾಂಗಣದಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.


ವಿವಿಯ ಕನಕದಾಸ ಸಂಶೋಧನ ಕೇಂದ್ರದ ನಿರ್ದೇಶಕ ಡಾ. ಧನಂಜಯ ಕುಂಬ್ಳೆ ತಮ್ಮ ಆಶಯ ಭಾಷಣದಲ್ಲಿ, ಕನಕದಾಸರ ಕೀರ್ತನೆಗಳು  ಕಾವ್ಯಮೌಲ್ಯದ ದೃಷ್ಟಿಯಿಂದ ಮಹತ್ವಪೂರ್ಣವಾದವು. ಅವರ ಕಾವ್ಯಗಳಿಗೆ ಭಕ್ತಿ ಮತ್ತು ಸಾಮಾಜಿಕ ಕಾಳಜಿಗಳೆಂಬ ಎರಡು ಧಾರೆಗಳಿವೆ. ಧಾನ್ಯಗಳ ಮೂಲಕ ಸಾಮಾಜಿಕ ಧ್ಯಾನವನ್ನು ಮಾಡಿದ ರಾಮಧಾನ್ಯ ಚರಿತೆಯನ್ನು ಸಾಮಾಜಿಕ ಪಠ್ಯವಾಗಿ ಅಧ್ಯಯನ ಮಾಡಿದಾಗ ಆಧುನಿಕ ಭಾರತದ ಅನೇಕ  ಸಮಸ್ಯೆಗಳನ್ನು ಅದು ಎದುರುಗೊಳ್ಳುವುದನ್ನು ಗಮನಿಸಬಹುದು, ಎಂದರು.


ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷರಾದ  ಸನತ್ಕುಮಾರ್ ಶೆಟ್ಟಿ ಕೊಡೆತ್ತೂರುಗುತ್ತು ಕಾರ್ಯಕ್ರಮದ ಅಧ್ಯಕ್ಷತೆ  ವಹಿಸಿದ್ದರು.  ಮುಲ್ಕಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಮಿಥುನ್ ಕೊಡೆತ್ತೂರು, ಕಾಲೇಜಿನ ಪ್ರಾಂಶುಪಾಲರಾದ ಡಾ. ಕೃಷ್ಣ, ಲಲಿತಕಲಾ ಸಂಘದ ಸಂಯೋಜಕಿ ಶ್ರೀಮತಿ ಪೂಜಾ ಕಾಂಚನ್ ಉಪಸ್ಥಿತರಿದ್ದರು.

 

ಗಮಕ- ಅರ್ಥಾನುಸಂಧಾನ  ಕಾರ್ಯಕ್ರಮದಲ್ಲಿ ಕನಕದಾಸರ ರಾಮಧಾನ್ಯ ಚರಿತೆಯ ಅರ್ಥಾನುಸಂಧಾನವನ್ನು ಕಲ್ಮಾಡಿ ಎ.ಎಸ್.ಇ.ಎಂ.ಎಸ್ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಪವನ್ ಕಿರಣಕೆರೆ ನಡೆಸಿಕೊಟ್ಟರು. ಸರಕಾರಿ ಕಾಲೇಜು, ಕಾಸರಗೋಡು ಕನ್ನಡ ಸ್ನಾತಕೋತ್ತರ ವಿಭಾಗದ ಸಂಶೋಧನಾರ್ಥಿ ಶ್ರದ್ಧಾ ಭಟ್ ನಾಯರ್ಪಳ್ಳ ಇವರು ಗಮಕ ವಾಚನ ಮಾಡಿದರು. 


ಉಪನ್ಯಾಸಕಿ ಆಶಾಕೀರ್ತಿ ನಿರೂಪಿಸಿದರು. ಪ್ರಾಚಾರ್ಯ ಡಾ. ಕೃಷ್ಣ ಸ್ವಾಗತಿಸಿದರು. ಲಲಿತಕಲಾ ಸಂಘದ ಪೂಜಾ ಕಾಂಚನ್ ವಂದಿಸಿದರು.ಡಾ.ಪದ್ಮನಾಭ ಮರಾಠೆ ಕಾರ್ಯಕ್ರಮ ಸಂಯೋಜಿಸಿದರು. 


 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter  

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top