ಶಾಲೆ ಶಾಲೆಯಲ್ಲಿ ಕನ್ನಡದ ಕಂಪು ಹರಡಲು ವಿಶೇಷ ಅಭಿಯಾನ: ಮಂಜುನಾಥ ಎಸ್. ರೇವಣ್ಕರ್

Upayuktha
0

ಮಂಗಳೂರು: ಪ್ರತಿ ಶಾಲೆಯಲ್ಲಿಯೂ ಕನ್ನಡದ ಕಂಪನ್ನು ಹರಡುವ ಪ್ರಯತ್ನದಲ್ಲಿ ದ.ಕ ಜಿಲ್ಲಾ ಕಸಾಪ ಮಂಗಳೂರು ತಾಲೂಕು ಘಟಕ ತೊಡಗಿಕೊಳ್ಳಲಿದೆ ಎಂದು ಕಸಾಪ ಮಂಗಳೂರು ತಾಲೂಕು ಘಟಕದ ಅಧ್ಯಕ್ಷ ಮಂಜುನಾಥ ಎಸ್. ರೇವಣ್ಕರ್ ಹೇಳಿದರು.


ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ, ಸ್ಯಾಂಡ್ಸ್ ಪಿಟ್ ಬೆಂಗ್ರೆ ಇಲ್ಲಿನ ವಿದ್ಯಾರ್ಥಿಗಳಿಗೆ ಕನ್ನಡ ಕವನ ಗಾಯನ ಸ್ಪರ್ಧೆಯಲ್ಲಿ ನಿರ್ಣಾಯಕ ಹಾಗೂ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಕನ್ನಡ ಭಾವಗೀತೆಗಳನ್ನು ಹಾಡುವ ಮಕ್ಕಳ ಉತ್ಸಾಹವನ್ನು ಕೊಂಡಾಡಿದ ಅವರು, ಅಧ್ಯಯನ, ಪ್ರತಿಭೆ ಮತ್ತು ಹವ್ಯಾಸಗಳ ಮೂಲಕ ಜೀವನದಲ್ಲಿ ಯಶಸ್ಸು ಗಳಿಸುವ ದಾರಿಯನ್ನು ತಿಳಿಸಿಕೊಟ್ಟರು. ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ರಾಕೇಶ್ ವಿ ಸುವರ್ಣ ಅಧ್ಯಕ್ಷತೆ ವಹಿಸಿದ್ದರು.


ಗೀತ ಗಾಯನ ಸ್ಪರ್ಧೆ 7ನೇ ತರಗತಿ ವಿಭಾಗದಲ್ಲಿ ನವ್ಯ (ಪ್ರಥಮ), ಗಂಗಮ್ಮ (ದ್ವಿತೀಯ), ಗೌತಮ್ (ತೃತೀಯ), 6ನೇ ತರಗತಿ ವಿಭಾಗದಲ್ಲಿ ಹವಿಶ (ಪ್ರಥಮ) ದಿಯಾ (ದ್ವಿತೀಯ), ಅನುಷ್ಕಾ (ತೃತೀಯ) ಹಾಗೂ 1ರಿಂದ 4ನೆಯ ತರಗತಿ ವಿಭಾಗದಲ್ಲಿ ಡಿಂಪಲ್ (ಪ್ರಥಮ), ನಿಹಾರಿಕಾ (ದ್ವಿತೀಯ), ತನು (ತೃತೀಯ) ಬಹುಮಾನ ಪಡೆದರು.


ತಾಲೂಕು ಘಟಕದ ಕೋಶಾಧಿಕಾರಿ ಎನ್. ಸುಬ್ರಾಯ ಭಟ್ ವಿದ್ಯಾರ್ಥಿಗಳ ಗಾಯನದ ಬಗ್ಗೆ ಹರ್ಷ ವ್ಯಕ್ತ ಪಡಿಸುತ್ತಾ ಉಪಯುಕ್ತ ಸಲಹೆಗಳನ್ನು ನೀಡಿದರು. ಶಾಲಾ ಮುಖ್ಯ ಶಿಕ್ಷಕಿ ಉಮಾಲಕ್ಷ್ಮೀಯವರು ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿ ಇನ್ನಷ್ಟು ಇಂತಹ ಕಾರ್ಯಕ್ರಮಗಳಾಗಲಿ ಎಂದು ಹಾರೈಸಿದರು.


ಶಿಕ್ಷಕಿ ಸುಮ ನಿರೂಪಿಸಿದರು. ಬೋಧಕ ವರ್ಗದ ಉಷಾ ಕೆ, ಅಶ್ವಿನಿ, ಶೀತಲ್, ದೀಪಾ ಉಪಸ್ಥಿತರಿದ್ದು ಸಹಕರಿಸಿದರು. ಸುಮಾರು 80 ವಿದ್ಯಾರ್ಥಿಗಳು ಹಾಜರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter  

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top