ಮಂಗಳೂರು: ದೇಶದ ಹೈಪರ್ ವ್ಯಾಲ್ಯೂ ಪ್ಲಾಟ್ ಫಾರ್ಮ್ ಆಗಿರುವ ಶಾಪಿ ಕಳೆದ ಒಂದು ವರ್ಷದಲ್ಲಿ 2 ಮತ್ತು 3 ನೇ ಶ್ರೇಣಿಯ ನಗರಗಳು ಸೇರಿದಂತೆ ದೇಶಾದ್ಯಂತ 200 ದಶಲಕ್ಷಕ್ಕೂ ಅಧಿಕ ಶಾಪ್ಸಿ ಆ್ಯಪ್ ಡೌನ್‍ಲೋಡ್ ಆಗಿದೆ. ಒಂದು ವರ್ಷದ ಅವಧಿಯಲ್ಲಿ ಡೌನ್‍ಲೋಡ್ ಪ್ರಮಾಣ ದ್ವಿಗುಣಗೊಂಡಿದೆ.
ಈ ಎರಡನೇ ವಾರ್ಷಿಕೋತ್ಸವ ಆಚರಣೆ ಹಿನ್ನೆಲೆಯಲ್ಲಿ ಶಾಪ್ಸಿಯ ಎರಡನೇ ಆವೃತ್ತಿಯ ಮೆಗಾ ವಾರ್ಷಿಕ ಮಾರಾಟವನ್ನು ಆಯೋಜಿಸಿತ್ತು. ಈ ಮಾರಾಟದ ಸಂದರ್ಭದಲ್ಲಿ ಸೀರೆಗಳು, ಪುರುಷರ ಟೀಶರ್ಟ್ ಗಳು ಮತ್ತು ಕುರ್ತೀಸ್ ಗಳ ಮಾರಾಟದಲ್ಲಿ 2 ಪಟ್ಟು ಹೆಚ್ಚಳ ಕಂಡುಬಂದಿದೆ ಎಂದು ಶಾಪ್ಸಿಯ ಮುಖ್ಯಸ್ಥ ಕಪಿಲ್ ಥಿರಾಣಿ ಪ್ರಕಟಣೆಯಲ್ಲಿ ಹೇಳಿದ್ದಾರೆ.
2021 ರ ಜುಲೈನಲ್ಲಿ ಆರಂಭವಾದ ಶಾಪ್ಸಿ ತನ್ನ ಗ್ರಾಹಕರಿಗೆ ಅತ್ಯುತ್ತಮ ವಿಸ್ತಾರವಾದ ಶ್ರೇಣಿಯ ಉತ್ಪನ್ನಗಳನ್ನು ನೀಡುತ್ತಾ ಬಂದಿದೆ. ಗ್ರಾಹಕರಿಗೆ ಅತ್ಯಂತ ವೇಗದಲ್ಲಿ ಮತ್ತು ವಿಶ್ವಾಸಾರ್ಹವಾದ ರೀತಿಯಲ್ಲಿ ಕೈಗೆಟುಕುವ ದರದಲ್ಲಿ ಈ ಉತ್ಪನ್ನಗಳನ್ನು ಪೂರೈಸುತ್ತಿದೆ. ಇಂದು ಶಾಪ್ಸಿ ಭಾರತದ 19,000 ಪಿನ್ ಕೋಡ್ ವ್ಯಾಪ್ತಿಯಲ್ಲಿರುವ ಗ್ರಾಹಕರಿಗೆ 800ಕ್ಕೂ ಅಧಿಕ ವಿಭಾಗಗಳಲ್ಲಿ 160 ಮಿಲಿಯನ್ ಉತ್ಪನ್ನಗಳನ್ನು ಪೂರೈಕೆ ಮಾಡುತ್ತಿದೆ.
ವಿಶೇಷವಾಗಿ 3 ನೇ ಶ್ರೇಣಿಯ ಮಾರುಕಟ್ಟೆಗಳಲ್ಲಿ ಶೇ.60 ರಷ್ಟು ಬೇಡಿಕೆ ಬಂದಿದೆ. ಆಕರ್ಷಕ ಬೆಲೆಯ ಬ್ರ್ಯಾಂಡ್‍ಗಳಾದ್ಯಂತ ವ್ಯಾಪಕ ಶ್ರೇಣಿಯ ಉತ್ಪನ್ನಗಳು, ಫ್ಲಿಪ್ ಕಾರ್ಟ್ ಬ್ರ್ಯಾಂಡ್ ನ ಮೇಲಿನ ನಂಬಿಕೆ, ಧ್ವನಿ ಮತ್ತು ಇಮೇಜ್ ಹುಡುಕಾಟ, ಸ್ಥಳೀಯ ಭಾಷೆಯ ಇಂಟರ್ಫೇಸ್ ಹಾಗೂ ವಿಶೇಷವಾಗಿ ಎಐ ಚಾಲಿತ ಚಾಟ್ ಬಾಟ್ ಗಳಂತಹ ನವೀನ ಮತ್ತು ಗ್ರಾಹಕ ಸ್ನೇಹಿ ವೈಶಿಷ್ಟ್ಯತೆಗಳು ಈ ಅಳವಡಿಕೆಗೆ ಪ್ರೋತ್ಸಾಹ ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಎಂದು ಪ್ರಕಟಣೆ ಹೇಳಿದೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ