ಮಂಗಳೂರು: ಬೊಕಪಟ್ಣ ಬೋಳೂರಿನಲ್ಲಿ ಸುಮಾರು 50 ವರ್ಷಗಳ ಹಿಂದೆ ಮಾಸ್ಟರ್ ಬಿ ಸೀತರಾಮ್ ಕುಲಾಲ್ ರವರ ಮಾರ್ಗದರ್ಶನದಲ್ಲಿ ಸ್ಥಾಪನೆಯಾಗಿರುವ ಶ್ರೀ ರಾಮಾಂಜನೇಯ ವ್ಯಾಯಾಮ ಮತ್ತು ತಾಲೀಮ್ ಶಾಲೆಯ ಮಂಗಳೂರು ಶಾಸಕ ವೇದವ್ಯಾಸ್ ಕಾಮತ್ ಮತ್ತು ಸ್ಥಳೀಯ ಕಾರ್ಪೊರೇಟರ್ ಜಗದೀಶ್ ಶೆಟ್ಟಿ ಅವರ ಅನುದಾನದಿಂದ ನವೀಕೃತಗೊಂಡ ಕಟ್ಟಡ ಜುಲೈ 15ರಂದು ವಿವಿಧ ಪೂಜಾ ವಿಧಿಗಳೊಂದಿಗೆ ಗಣ್ಯರ ಉಪಸ್ಥಿತಿಯಲ್ಲಿ ಉದ್ಘಾಟನೆಗೊಂಡಿತು.
ಮಂಗಳೂರು ವಿಧಾನಸಭಾ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್ ದೀಪ ಪ್ರಜ್ವಲಿಸಿ ಯುವ ಜನಾಂಗ ಆರೋಗ್ಯವನ್ನು ಕಾಪಾಡಿಕೊಳ್ಳುವುದಕ್ಕೆ ವ್ಯಾಯಾಮ ಕಸರತ್ತುಗಳನ್ನು ಮಾಡಬೇಕು. ತಾಲೀಮ್ ಪ್ರದರ್ಶನ ನಗರಕ್ಕೆ ಶೋಭೆ ತರಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ಮಹಾಪೌರ ಜಯಾನಂದ ಅಂಚನ್, ಮಹಾನಗರ ಪಾಲಿಕೆಯ ಸದಸ್ಯ ಜಗದೀಶ್ ಶೆಟ್ಟಿ, ವ್ಯಾಯಾಮ ಶಾಲೆಯ ಅಧ್ಯಕ್ಷ ಬಿ. ಪ್ರೇಮಾನಂದ ಕುಲಾಲ್, ಮಾಸ್ಟರ್ ಬಿ ಸೀತಾರಾಮ ಕುಲಾಲ್, ಉಪಾಧ್ಯಕ್ಷ ತಾರನಾಥ್ ಪುತ್ರನ್ ಬೊಕ್ಕಪಟ್ನ, ಗೌರವ ಕಾರ್ಯದರ್ಶಿ ಬಿ. ನಾಗೇಶ್ ಕುಲಾಲ್, ಕೋಶಾಧಿಕಾರಿ ಕೆ ಭಾಸ್ಕರ್ ಅಮೀನ್, ತಾಲೀಮ್ ಶಿಕ್ಷಕರಾದ ಮಾಸ್ಟರ್ ಗೋಪಾಲ್ ಬರ್ಕೆ, ದೇಹದಾಢ್ಯ ಶಿಕ್ಷಕ ಮಾಸ್ಟರ್ ಸಂತೋಷ್ ಬೋಳೂರು ಮತ್ತು ರಾಮಚಂದ್ರ ಕುಲಾಲ್, ಯೋಗೀಶ್ ಕುದ್ರೋಳಿ, ರಾಜೇಶ್ ಸಾಲಿಯಾನ್ ಕೋಡಿಕಲ್, ರಾಜೀವ ಕುಲಾಲ್, ವಿಶುಕುಮಾರ್, ಮೋಹಿತ್ ಉರ್ವ, ನವೀನ್ ಕುಮಾರ್, ಮನಿಷ್ ಕರ್ಕೇರ, ಗಿರೀಶ್ ಕುದ್ರೋಳಿ, ಕುಶಾಲ್ ಚಂದ್ರ, ದ.ಕ. ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃ ಸಂಘ ಅಧ್ಯಕ್ಷ ಮಯೂರ್ ಉಳ್ಳಾಲ್, ಶ್ರೀ ವೀರನಾರಾಯಣ ದೇವಸ್ಥಾನ ಆಡಳಿತ ಮೊಕ್ತೇಸರರು ಪುರುಷೋತ್ತಮ ಕುಲಾಲ್ ಕಲ್ಪಾವಿ, ವೀರನಾರಾಯಣ ಜೀರ್ಣೋದ್ಧಾರ ಸಮಿತಿ ದಾಮೋದರ ಎ, ವೀರನಾರಾಯಣ ಸೇವಾ ಸಮಿತಿ ಅಧ್ಯಕ್ಷ ಕೆ. ಸುಂದರ ಕುಲಾಲ್, ಕುಲಾಲ ಪ್ರತಿಷ್ಠಾನದ ಅಧ್ಯಕ್ಷ, ಸುರೇಶ್ ಕುಲಾಲ್ ಮಂಗಳ ದೇವಿ,
ಎಂ.ಪಿ. ಬಂಗೇರ, ಗಿರಿಧರ್ ಜೆ ಮೂಲ್ಯ, ಸದಾಶಿವ ಕುಲಾಲ್ ಮತ್ತಿತರ ಗಣ್ಯರು ಪಾಲ್ಗೊಂಡಿದ್ದರು. ಪ್ರೇಮಾನಂದ ಕುಲಾಲ್ ಸ್ವಾಗತಿಸಿದರು, ತಾರನಾಥ್ ಪುತ್ರನ್ ಕಾರ್ಯಕ್ರಮ ನಿರೂಪಿಸಿದರು. ನಾಗೇಶ್ ಕುಲಾಲ್ ಧನ್ಯವಾದ ನೀಡಿದರು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ