ಅಪಘಾತದಲ್ಲಿ ಗಾಯಗೊಂಡ ಬಜರಂಗದಳ ಕಾರ್ಯಕರ್ತನಿಗೆ ಬಿಜೆಪಿ ಯುವಮೋರ್ಚಾದಿಂದ ಧನಸಹಾಯ

Upayuktha
0

ಜಿಲ್ಲಾಧ್ಯಕ್ಷರು, ಗಣ್ಯರ ಸಮ್ಮುಖ 1.60 ಲಕ್ಷ ರೂಗಳ ಚೆಕ್ ಹಸ್ತಾಂತರಿಸಿದ ಶಾಸಕ ಡಾ. ಭರತ್ ಶೆಟ್ಟಿ


ಮಂಗಳೂರು: ಬಜರಂಗದಳ ಸುರತ್ಕಲ್ ಪ್ರಖಂಡದ ಕಾರ್ಯಕರ್ತ ಕಳವಾರು ನಿವಾಸಿ ಮೇಘರಾಜ್ ಅವರು ಅಪಘಾತದಿಂದ ತೀವ್ರ ಗಾಯಗೊಂಡು ಎ.ಜೆ ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಾ ಇದ್ದಾರೆ.


ಮೇಘರಾಜ್ ರವರ ಚಿಕಿತ್ಸೆಗೆ ಬಿಜೆಪಿ ಯುವಮೋರ್ಚಾ ಮಂಗಳೂರು ಉತ್ತರ ಮಂಡಲದಿಂದ ಕಾರ್ಯರ್ತರು ಹಾಗೂ ದಾನಿಗಳಿಂದ ಸಂಗ್ರಹಿಸಿದ 1,60,000 ರೂಪಾಯಿಗಳ ಚೆಕ್ ಅನ್ನು ಶಾಸಕರಾದ ಡಾ. ಭರತ್ ಶೆಟ್ಟಿಯವರು, ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಸುದರ್ಶನ್ ಮೂಡಬಿದ್ರೆ, ಮಂಡಲ ಅಧ್ಯಕ್ಷರಾದ ತಿಲಕ್ ರಾಜ್ ಕೃಷ್ಣಾಪುರ, ರಾಜ್ಯ ಯುವ ಮೋರ್ಚಾ ಕಾರ್ಯದರ್ಶಿ ಶ್ವೇತಾ ಪೂಜಾರಿಯವರ ಸಮ್ಮುಖದಲ್ಲಿ ಮೇಘರಾಜ್ ರವರ ತಂದೆಯವರಿಗೆ ನೀಡಿದರು.


ಈ ಸಂದರ್ಭದಲ್ಲಿ ಯುವಮೋರ್ಚಾ ಮಂಡಲ ಅಧ್ಯಕ್ಷರಾದ ಭರತ್ ರಾಜ್ ಕೃಷ್ಣಾಪುರ, ಬಜರಂಗದಳದ ಪ್ರಮುಖರಾದ ನವೀನ್ ಮೂಡು ಶೆಡ್ಡೆ, ಬಿಜೆಪಿಯ ಪ್ರಮುಖರಾದ ಶೋಧನ್ ಅಧ್ಯಪಾಡಿ, ಸಂಜೀತ್ ಶೆಟ್ಟಿ, ತಿಲಕ್ ರಾಜ್, ಹರಿಪ್ರಸಾದ್ ಶೆಟ್ಟಿ, ಸಂಜೀತ್ ಸಾಲ್ಯಾನ್, ದೀಪಕ್ ದೇವಾಡಿಗ ಹಾಗೂ ಮತ್ತಿತರರು ಉಪಸ್ಥಿತರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top