ರಕ್ತಹೀನತೆ ಜಾಗೃತಿ ಜಾಥಾಗೆ ಚಾಲನೆ

Upayuktha
0

ಮಂಗಳೂರು: ಪಿ&ಜಿ ಹೆಲ್ತ್ ಸಂಸ್ಥೆಯು ಭಾರತದ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರ ಸೊಸೈಟಿಗಳ ಒಕ್ಕೂಟದ ಸಹಯೋಗದಲ್ಲಿ ಎರಡನೇ ವರ್ಷದ  'ನಾ ನಾ ಅನೀಮಿಯಾ ಬಸ್ ಯಾತ್ರೆ' ಗೆ ಚಾಲನೆ ನೀಡಿದೆ.


ದಕ್ಷಿಣ ಭಾರತದಲ್ಲಿ ಈ ಉಪಕ್ರಮವನ್ನು ವಿಸ್ತರಿಸುವ ನಿಟ್ಟಿನಲ್ಲಿ ಈ ಯಾತ್ರೆ ಜನರಲ್ಲಿ ಕಬ್ಬಿಣದ ಕೊರತೆಯ ರಕ್ತದ ಹೀನತೆಯ (ಐಡಿಎ) ಬಗ್ಗೆ ಜಾಗೃತಿ ಮೂಡಿಸುತ್ತದೆ. ಈ ಜಾಗೃತಿ ಜಾಥಾಗೆ ಪ್ರಾಕ್ಟರ್ & ಗ್ಯಾಂಬಲ್ ಹೆಲ್ತ್ ಲಿಮಿಟೆಡ್ ನ ವ್ಯವಸ್ಥಾಪಕ ನಿರ್ದೇಶಕ ಮಿಲಿಂದ್ ಥಟ್ಟೆ ಮತ್ತು ಡಾ.ಹೃಷಿಕೇಷ್ ಪೈ ಹಸಿರು ನಿಶಾನೆ ತೋರಿದರು.


ಈ ಜಾಥಾ ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು, ಕರ್ನಾಟಕ ಮತ್ತು ಕೇರಳ ರಾಜ್ಯಗಳಲ್ಲಿ ಸಂಚರಿಸಲಿದ್ದು, ಬೆಂಗಳೂರಿನಲ್ಲಿ ಸಮಾಪನಗೊಳ್ಳಲಿದೆ ಎಂದು ಪ್ರಕಟಣೆ ಹೇಳಿದೆ.


ಈ ಜಾಥಾ ಸಂದರ್ಭದಲ್ಲಿ ಸ್ತ್ರೀರೋಗ ತಜ್ಞರು ಮತ್ತು ವೈದ್ಯರನ್ನು ಒಳಗೊಂಡ ತಂಡವು ಸುಮಾರು 2000 ಕ್ಕೂ ಅಧಿಕ ಜನರ ರಕ್ತದೊತ್ತಡ ತಪಾಸಣೆಯನ್ನು ನಡೆಸಲಿದೆ. ಕಬ್ಬಿಣದ ಕೊರತೆ ಬಗ್ಗೆ ಜನಸಾಮಾನ್ಯರಲ್ಲಿ ಜಾಗೃತಿ ಜಾಗೃತಿ ಮೂಡಿಸಲು ಮತ್ತು ಈ ಬಗ್ಗೆ ಶಿಕ್ಷಣ ನೀಡುವ ಉದ್ದೇಶದಿಂದ ಯಾತ್ರೆ ಹಮ್ಮಿಕೊಳ್ಳಲಾಗಿದೆ. ಕಳೆದ ವರ್ಷ ಉತ್ತರ ಭಾರತದ ನಗರಗಳಲ್ಲಿ ಸಾಧಿಸಿದ ಯುಶಸ್ಸಿನ ಹಿನ್ನೆಲೆಯಲ್ಲಿ ಈ ಬಾರಿ ದಕ್ಷಿಣ ಭಾರತದಲ್ಲೂ ನಡೆಸಲಾಗುತ್ತಿದೆ ಎಂದು ವಿವರಿಸಿದ್ದಾರೆ.


 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter  

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top