ಮಂಗಳೂರಿನಲ್ಲಿ ಅಕ್ಷರ ಲಕ್ಷ ಗಾಯತ್ರಿ ಜಪ ಯಜ್ಞ ಸಾಮೂಹಿಕ ಪ್ರಾರ್ಥನೆ

Upayuktha
0


ಮಂಗಳೂರು: ಜಿಲ್ಲೆಯ ಎಲ್ಲಾ ತ್ರಿಮತಸ್ಥ ಬ್ರಾಹ್ಮಣ ಸಂಘಟನೆಗಳು ಒಂದೇ ಸೂರಿನಡಿ ಸೇರಿ ಬ್ರಾಹ್ಮಣ ಸಮುದಾಯದ ಸರ್ವತೋಮುಖ ಅಭಿವೃದ್ದಿ, ಬಾಹ್ಯ ಆಕ್ರಮಣಗಳಿಂದ ಸಮಾಜವನ್ನು ಸಂರಕ್ಷಿಸಲು, ಅತ್ಮೋದ್ದಾರಕ್ಕಾಗಿ, ದೇಶದ ಸುಭಿಕ್ಷೆಗಾಗಿ, ದೇಶವನ್ನು ಕಾಯುವ ಸೈನಿಕರ ರಕ್ಷೆಗಾಗಿ ಜಿಲ್ಲೆಯ ಸರ್ವ ವಿಪ್ರ ಸಂಘಟನೆಗಳು ಹಾಗೂ ಅಖಿಲ ಕರ್ಣಾಟಕ ಬ್ರಾಹ್ಮಣ ಅರ್ಚಕ ಮತ್ತು ಪುರೋಹಿತರ ಪರಿಷತ್ (ರಿ) ಬೆಂಗಳೂರು, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ (ರಿ) ಬೆಂಗಳೂರು ಇವರುಗಳ ಸಹಯೋಗದೊಂದಿಗೆ ಬರುವ ಸೆಪ್ಟೆಂಬರ್ 3 ಆದಿತ್ಯವಾರದಂದು ನಗರದ ಬಾಲಂಭಟ್ ಹಾಲ್ ಇಲ್ಲಿ ಅಕ್ಷರ ಲಕ್ಷ ಗಾಯತ್ರಿ ಜಪ ಯಜ್ಞ ಮಾಡಲು ಉದ್ದೇಶಿಸಲಾಗಿದೆ.



ಇದರ ಪೂರ್ವಭಾವಿಯಾಗಿ ಶರವು ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಇಂದು (ಭಾನುವಾರ, ಜು.30) ಸಾಮೂಹಿಕ ಪ್ರಾರ್ಥನೆ ಮಾಡಲಾಯಿತು. ಯಜ್ಞ ಸಮಿತಿಯ ಮಹಾ ಪೋಷಕರು ದೇವಳದ ಧರ್ಮದರ್ಶಿಯೂ ಅದ ರಾಘವೇಂದ್ರ ಶಾಸ್ತ್ರಿ ಸಮಿತಿಯ ಸಂಚಾಲಕರಾದ ಶಿಕಾರಿಪುರ ಕೃಷ್ಣಮೂರ್ತಿ ನಾಗರಾಜ್, ಉದಯಕುಮಾರ್, ಸುಧಾಕರ್ ರಾವ್ ಪೇಜಾವರ, ಶ್ರೀಧರ ಹೊಳ್ಳ, ಕೃಷ್ಣ ಭಟ್ ಕದ್ರಿ, ಅರ್ಚಕ ಪುರೋಹಿತ ಪರಿಷತ್ತಿನ ಶ್ರೀರಂಗ ಐತಾಳ್ ಕದ್ರಿ, ಚಂದ್ರಶೇಖರ ಐತಾಳ ಮಂಗಳಾದೇವಿ, ಸಂಘಟಕರಾದ ಗುರು ಪ್ರಸಾದ್ ದಡ್ಡಿ, ಗಣೇಶ್ ಭಟ್ ಶರವು, ಪಿ ರಾಮಕೃಷ್ಣರಾವ್ ವಾಸುದೇವ ರಾವ್ ಕುಡುಪು, ಕೆ. ಪ್ರಭಾಕರ ರಾವ್, ಸುಹಾಸ್ ಕೋಡಿಕಲ್, ಪ್ರೇಮ್ ಚಂದ್, ವಂದನಾ ಸುರೇಶ್, ಶ್ರೀಕಾಂತ್ ರಾವ್,ದೇವ್ ದಾಸ್, ರಘುರಾಮ್, ರಾಮಕೃಷ್ಣ ಶಿಬರುರಾಯ ಮೊದಲಾದವರು ಉಪಸ್ಥಿತರಿದ್ದರು.

ಶೋಭಕೃತ್ ಸಂವತ್ಸರದ ಅಧಿಕ ಮತ್ತು ನಿಜ ಶ್ರಾವಣ ಮಾಸಗಳಲ್ಲಿ ಜುಲೈ 30ರಿಂದ ಸೆಪ್ಟೆಂಬರ್ 2ರ ವರೆಗೆ ಗಾಯತ್ರೀ ಉಪದಿಷ್ಟ ವಿಪ್ರರು ತಮ್ಮ ತಮ್ಮ ಮನೆಗಳಲ್ಲೇ ನಿತ್ಯ ಸಂಧ್ಯಾವಂದನೆಯ ಜೊತೆಗೆ ಒಂದು ದಿನಕ್ಕೆ 378 ಸಂಖ್ಯೆಯ ಜಪ ಮಾಡಬೇಕೆಂದು ಕೋರಲಾಗಿದೆ.


ವಿಪ್ರ ಸಂಘಗಳು, ಸಮುದಾಯಗಳು, ತಮ್ಮ ತಮ್ಮ ಅನುಕೂಲ ಸ್ಥಳಗಳಲ್ಲಿ ಸೇರಿಕೊಂಡು ಸಭೆ ನಡೆಸಿ, ಅಧಿಕಾಧಿಕ ಸದಸ್ಯರನ್ನು ಒಗ್ಗೂಡಿಸಿ ಜಪ ಯಜ್ಞವನ್ನು ಮಾಡುವ ಕೆಲಸ ಬೇಗನೆ ಆಗಬೇಕಿದೆ. ಜಪಯಜ್ಞವು ಇನ್ನೂ ಹೆಚ್ಚು ಪರಿಣಾಮಕಾರಿಯಾಗಲು ಆಸಕ್ತಿಗೆ ಗಾಯತ್ರೀ ಅನುಷ್ಠಾನ ಯೌಗಿಕ ಅಭ್ಯಾಸ ವರ್ಗವನ್ನು ಪರಿಣತರು ನಡೆಸಿಕೊಡುತ್ತಾರೆ. ಏಕಾಗ್ರತೆ ಮತ್ತು ಧ್ಯಾನದ ಅಭ್ಯಾಸ ಕೂಡ ಇಲ್ಲಿ ಆಗುವುದು. ಅಭ್ಯಾಸ ವರ್ಗಕ್ಕಾಗಿ ಶ್ರೀ ಶ್ರೀಧರ ಶಾಸ್ತ್ರಿ (9901596467) ಅವರನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ಕೋರಲಾಗಿದೆ.



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter 

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top