ಕೇಶವ ಕುಡ್ಲ ಅವರ ಸಾಹಿತ್ಯ ಮತ್ತು ಸಂವಾದ ಕಾರ್ಯಕ್ರಮ ಭಾನುವಾರ

Upayuktha
0


ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ತು ವತಿಯಿಂದ ಮನೆ ಮನಗಳಲ್ಲಿ ಸಾಹಿತ್ಯ ಅಭಿಯಾನದಡಿ ಕೇಶವ ಕುಡ್ಲ ಅವರ ಸಾಹಿತ್ಯ ಮತ್ತು ಸಂವಾದ ಕಾರ್ಯಕ್ರಮ ನಾಳೆ (ಜು.30) ಸಂಜೆ 4 ಗಂಟೆಗೆ ಮಂಗಳೂರು ಕೋಡಿಕಲ್‌ ಅಶೋಕನಗರದ ಜೆ.ಬಿ ಲೋಬೋ ರಸ್ತೆಯ 'ನೆಲೆ'ಯಲ್ಲಿ ನಡೆಯಲಿದೆ.


ದ.ಕ ಜಿಲ್ಲಾ ಕಸಾಪ ಅಧ್ಯಕ್ಷ ಡಾ. ಎಂ.ಪಿ ಶ್ರೀನಾಥ ಅವರು ಅಧ್ಯಕ್ಷತೆ ವಹಿಸಲಿದ್ದು, ಹಿರಿಯ ಕವಿ, ಸಾಹಿತಿ ಡಾ. ವಸಂತಕುಮಾರ್ ಪೆರ್ಲ ಅವರು ಸಂವಾದ ನಡೆಸಿಕೊಡಲಿದ್ದಾರೆ. ಮಂಗಳೂರು ತಾಲೂಕು ಕಸಾಪ ಅಧ್ಯಕ್ಷ ಡಾ. ಮಂಜುನಾಥ್ ಎಸ್. ರೇವಣಕರ್ ಗೌರವ ಉಪಸ್ಥಿತರಿರುತ್ತಾರೆ.


ನಿವೃತ್ತ ವಿಮಾ ಅಭಿವೃದ್ಧಿ ಅಧಿಕಾರಿ ಕೇಶವ ಕುಡ್ಲ, ದಕ ಕಸಾಪ ಗೌರವ ಕಾರ್ಯದರ್ಶಿ ರಾಜೇಶ್ವರಿ ಎಂ, ವಿನಯ ಆಚಾರ್ಯ ಎಚ್, ಕೋಶಾಧಿಕಾರಿ ಜಿ. ಐತಪ್ಪ ನಾಯ್ಕ್, ಸಂಘಟನಾ ಕಾರ್ಯದರ್ಶಿಗಳಾದ ಚಂದ್ರಹಾಸ ಶೆಟ್ಟಿ, ಜಗದೀಶ ಎಡಪಡಿತ್ತಾಯ, ಸಂಘಟನಾ ಸಹ ಕಾರ್ಯದರ್ಶಿಗಳಾದ ಯು.ಎಚ್. ಖಾಲಿದ್ ಉಜಿರೆ, ಕಿರಣ್ ಪ್ರಸಾದ್ ರೈ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top