ಕಾರ್ಗಿಲ್ ವಿಜಯ ದಿವಸ್: ವೀರ ಯೋಧರಿಗೊಂದು ನಮನ

Upayuktha
0

ಕಾರ್ಗಿಲ್ ವಿಜಯ ದಿನವನ್ನು ಭಾರತ ಪಾಕಿಸ್ತಾನದ ವಿರುದ್ಧ ಕಾರ್ಗಿಲ್ ಅಲ್ಲಿ ನಡೆದ ಯುದ್ದವನ್ನು ಪಾಕಿಸ್ತಾನವನ್ನು ಮಣಿಸುವುದರ ಮೂಲಕ ಇಂದು ಅಂದರೆ 1999 ಜುಲೈ 26 ರಂದು ಗೆಲುವು ಸಾಧಿಸುತ್ತಾರೆ. ಆ ವಿಜಯದ ಸ್ಮರಣಾರ್ಥವಾಗಿ ನಾವು ಕಾರ್ಗಿಲ್ ವಿಜಯ ದಿವಸವನ್ನು ಆಚರಿಸುತ್ತೇವೆ. ಆ‌ ಮೂಲಕ ಯುದ್ಧದಲ್ಲಿ ಹೋರಾಡಿದ ನಮ್ಮ ಹೆಮ್ಮೆಯ ಯೋಧರಿಗೆ ಗೌರವ ಅರ್ಪಣೆ ಮಾಡುವ ಕೆಲಸವಾಗುತ್ತಿದೆ. ಭಾರತ ಮತ್ತು ಪಾಕಿಸ್ತಾನದ ಗಡಿ ನಿಯಂತ್ರಣ ರೇಖೆಯಲ್ಲಿ ಪಾಕಿಸ್ತಾನದ ಸೈನಿಕರು ಭಾರತದ ನೆಲೆಗಳಿಗೆ ಕಾಶ್ಮೀರಿ ಉಗ್ರರೊಂದಿಗೆ ಒಳನುಸುಳುವಿಕೆ ಆರಂಭಿಸಿದ್ದೆ ಈ ಯುದ್ದಕ್ಕೆ ಮೂಲ ಕಾರಣವೆಂದು ವಿಶ್ಲೇಷಣೆ ಮಾಡಲಾಗುತ್ತದೆ. ಪಾಕ್ ಸೈನಿಕರು ಮತ್ತು ಉಗ್ರಗಾಮಿಗಳು ಆಕ್ರಮಿಸಿಕೊಂಡಿದ್ದ ಭಾರತದ ನೆಲೆಗಳನ್ನು ನಮ್ಮ ಸೇನೆಯು ಭಾರತೀಯ ವಾಯುಪಡೆಯ ಸಹಾಯದೊಂದಿಗೆ ವಶಪಡಿಸಿಕೊಳ್ಳಲು ಆಪರೇಷನ್ ವಿಜಯವನ್ನು ಆರಂಭಿಸಿತು.


ಈ ಯುದ್ಧವು 1999 ಮೇ ಮತ್ತು ಜುಲೈ ತಿಂಗಳಲ್ಲಿ ಕಾರ್ಗಿಲ್ ಜಿಲ್ಲೆಯಲ್ಲಿ ಮತ್ತು ಭಾರತದ ಗಡಿ ನಿಯಂತ್ರಣ ರೇಖೆಯ ನೆಲೆಗಳಲ್ಲಿ ಸಂಭವಿಸಿತ್ತು. ಸಮುದ್ರ ಮಟ್ಟದಿಂದ ಸರಿಸುಮಾರು 2676 ಮೀಟರ್ ಅಂದರೆ 8780 ಅಡಿ ಎತ್ತರದಲ್ಲಿರುವ ಪರ್ವತ ಭೂ ಪ್ರದೇಶವಾಗಿತ್ತು. ಕಾರ್ಗಿಲ್ ಹಾಗಾಗಿ ನಾವು ನೀವುಗಳು ಯುದ್ಧದ ಪರಿಸ್ಥಿತಿಯನ್ನು ನಮ್ಮ ಯೋಚನೆಯಲ್ಲಿ ಊಹಿಸುವುದೂ ಕಷ್ಟಕರ. ಅಂತಹ ಪರಿಸ್ಥಿತಿಯಲ್ಲೂ ನಮ್ಮ ದೇಶದ ಸೈನಿಕರು ಶತ್ರು ರಾಷ್ಟ್ರದ ಸೈನಿಕರನ್ನು ಸದೆಬಡಿಯುವ ಕಾರ್ಯವನ್ನು ಯಶಸ್ವಿಯಾಗಿ ಮಾಡುವುದರ ಮೂಲಕ ಭಾರತೀಯರ ಪರಾಕ್ರಮವನ್ನು ಮತ್ತೊಮ್ಮೆ ಪಾಕಿಸ್ತಾನಕ್ಕೂ ಮತ್ತು ಜಗತ್ತಿಗೂ ಅನಾವರಣಗೊಳಿಸಿದ್ದರು. ಈ ಯುದ್ಧವು ಅತಿ ಎತ್ತರದ ಭೂ ಪ್ರದೇಶದಲ್ಲಿ ಘಟಿಸಿರುವ ಯುದ್ಧದ ಉದಾಹರಣೆಯಾಗಿಯು ಇಂದಿಗೂ ಉಳಿದಿದೆ. ಈ ಯುದ್ಧವು ಸರಿ ಸುಮಾರು 60 ದಿನಗಳ ಕಾಲ ಜರುಗಿದ್ದು ಯುದ್ಧದ ನಂತರ ವಿಶ್ವ ಮಟ್ಟದಲ್ಲಿ ಪಾಕಿಸ್ತಾನವು ಭಾರಿ ಪ್ರಮಾಣದ ಟೀಕೆಗೆ ಗುರಿಯಾಯಿತು. ಪಾಕಿಸ್ತಾನವು ಈ ಯುಧ್ಧ ಕಾಶ್ಮೀರಿ ಸ್ವಾತಂತ್ರ್ಯ ಹೋರಾಟಗಾರರ ಕದನವೆಂದು ಬಿಂಬಿಸಲು ಹೊರಟರು ಅದು ಯಶಸ್ವಿಯಾಗಿಲಿಲ್ಲ. 


ಭಾರತದ ಪರವಾಗಿ ಹೋರಾಡಿದ ಅನೇಕ ಯೋಧರು ಶೌರ್ಯ ಪ್ರಶಸ್ತಿಗಳನ್ನು ಗಳಿಸಿದರು. ಅದರಲ್ಲಿ 18 ಗ್ರೇನೆಡಿಯರ್ಸ ಸೇರಿದ ಗ್ರೇನೆಡಿಯರ್ ಯೋಗೇಂದ್ರ ಸಿಂಗ್ ಯಾದವ್ ಪರಮವೀರ ಚಕ್ರವನ್ನು ಮರಣೋತ್ತರವಾಗಿ ಪಡೆದರು. ಕ್ಯಾಪ್ಟನ್ ವಿಕ್ರಮ್ ಭಾತ್ರಾರವರು ಕೂಡ 13 JAK ರೈಫಲ್ಸ್ ಪರಮವೀರ ಚಕ್ರವನ್ನು ಪಡೆದರು.

ಹೀಗೆ ನೂರಾರು ಸಾವಿರಾರು ಮಂದಿ ಯೋಧರ ತ್ಯಾಗದ ಮೂಲಕ ಕಾರ್ಗಿಲ್ ಅಲ್ಲಿ ಘಟಿಸಿದ ಕರಾಳ ಯುದ್ಧ ಚರಿತ್ರೆಯಿಂದ ಹಿಡಿದು ಇಂದಿಗೂ ಕೂಡ ನಾವು ಜನ ಸಾಮಾನ್ಯರು ನೆಮ್ಮದಿಯ ಬದುಕನ್ನು ನೆಡೆಸುತ್ತಿದ್ದೇವೆ. ಹಾಗಾಗಿ ಪ್ರತಿ ನಿತ್ಯವು ಯೋಧರಿಗೆ ನಮನ ಸಲ್ಲಿಸುವ ಕಾರ್ಯವಾಗಲಿ ಎಂದು ಆಶಿಸುತ್ತೇನೆ.

- ಪ್ರದೀಪ ಶೆಟ್ಟಿ ಬೇಳೂರು

ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter 

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top