ಕಾಸರಗೋಡಿನ ಹಳ್ಳಿಹಳ್ಳಿಗಳಲ್ಲಿ ಕನ್ನಡ ಚಟುವಟಿಕೆಗಳು ವಿಸ್ತರಣೆಯಾಗಲಿ: ಡಾ. ರಮಾನಂದ ಬನಾರಿ

Upayuktha
0


ಅಗಲ್ಪಾಡಿ: "ಕಾಸರಗೋಡಿನಲ್ಲಿ ಕನ್ನಡ ಉಳಿಸಿ ಬೆಳೆಸುವ ಪ್ರಯತ್ನಕ್ಕೆ ಹೊಸತನದ ಆಕರ್ಷಣೀಯ ಕಾರ್ಯಕ್ರಮಗಳು ಬೇಕು. ಹಳ್ಳಿ ಹಳ್ಳಿಗಳಲ್ಲಿ ಚಟುವಟಿಕೆಗಳು ವಿಸ್ತರಣೆಯಾಗಬೇಕು. ಕನ್ನಡದ ಪ್ರೀತಿ ಇರುವವರೆಲ್ಲ ಕೈಜೋಡಿಸಬೇಕು. ಹೆಚ್ಚು ಹೆಚ್ಚು ಜನರ ಒಳಗೊಳ್ಳುವಿಕೆಯಿಂದ ಈ ಕನ್ನಡದ ಬೇರುಗಳು ಬಲವಾಗುತ್ತವೆ. ಕಾಸರಗೋಡು ಚಿನ್ನಾ ಅವರು ಕನ್ನಡದ ಜೀವಂತಿಕೆಗೆ ನೀಡಿದ ಕೊಡುಗೆ ಅನುಕರಣೀಯ ಎಂದು ಕವಿ, ಸಾಹಿತಿ, ಜನಪ್ರಿಯ ವೈದ್ಯ ಡಾ. ರಮಾನಂದ ಬನಾರಿ ಅವರು 'ಕಾಸರಗೋಡು ಕನ್ನಡ ಹಬ್ಬದ' ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ನುಡಿದರು.


ಶ್ರೀ ಕ್ಷೇತ್ರ ಅಗಲ್ಪಾಡಿಯ ಆಡಳಿತ ಮಂಡಳಿಯ ವಿಶ್ವಸ್ಥರಾದ ಎ ಜಿ ಶರ್ಮರವರು ದೀಪ ಬೆಳಗಿಸಿ ಕಾಸರಗೋಡು ಕನ್ನಡ ಹಬ್ಬದ ಸಮಾರೋಪ ಸಮಾರಂಭವನ್ನು ಶ್ರೀ ದುರ್ಗಾಪರಮೇಶ್ವರಿ ಸಭಾಂಗಣದಲ್ಲಿ ಉದ್ಘಾಟಿಸಿದರು. ಕಾಸರಗೋಡು ಚಿನ್ನಾ ಹಾಗೂ ಡಾ.ರಮಾನಂದ ಬನಾರಿಯವರನ್ನು ಕ್ಷೇತ್ರದ ವತಿಯಿಂದ ಶಾಲು ಹೊದಿಸಿ ಗೌರವಿಸಿದರು. ಈ ಕಾರ್ಯಕ್ರಮದ ವೇದಿಕೆಯಲ್ಲಿ ಶ್ರೀ ಕಾಸರಗೋಡು ಚಿನ್ನಾ, ಕೋಳಾರು ಸತೀಶ್ ಚಂದ್ರ ಭಂಡಾರಿ, ಚಂದ್ರಶೇಖರ ಏತಡ್ಕ, ಪತ್ರಕರ್ತ ಗಣೇಶ್ ಕಾಸರಗೋಡು, ರಂಗಾ ಶರ್ಮ ಉಪ್ಪಂಗಳ ಮುಂತಾದವರು ಉಪಸ್ಥಿತರಿದ್ದರು. ಬಾಲಕ ಶ್ರೀ ಪ್ರದ್ಯುಮ್ನ ಶರ್ಮಾ ಉಪ್ಪಂಗಳ ಪ್ರಾರ್ಥನೆ ಗೈದರು. ರಂಗಾ ಶರ್ಮಾ  ಉಪ್ಪಂಗಳ ಸ್ವಾಗತಿಸಿ ನಿರೂಪಣೆ ನಿರ್ವಹಿಸಿದರು. ಕೊಳಾರು ಸತೀಶ್ಚಂದ್ರ ಭಂಡಾರಿಯವರು ಧನ್ಯವಾದಗಳಿನ್ನಿತ್ತರು.


ಕಾಸರಗೋಡಿನ ಪ್ರಖ್ಯಾತ ಸಾಮಾಜಿಕ ಸಾಂಸ್ಕೃತಿಕ ಸಂಸ್ಥೆ ರಂಗ ಚಿನ್ನಾರಿ ಕಾಸರಗೋಡು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಯೋಗದೊಂದಿಗೆ ಶ್ರೀ ಕ್ಷೇತ್ರ ಅಗಲ್ಪಾಡಿಯಲ್ಲಿ ಕಾಸರಗೋಡು ಕನ್ನಡ ಹಬ್ಬದ ಸರಣಿ ಕಾರ್ಯಕ್ರಮಗಳ ಕೊನೆಯ ಕಾರ್ಯಕ್ರಮವಾಗಿ ಮೂಡಿಬಂತು. ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾಸಂಘ ದೇಲಂಪಾಡಿ ಇವರು ಸಂಘಟಿಸಿದ 'ಅಂಗದ ಸಂಧಾನ' ಯಕ್ಷಗಾನ ತಾಳಮದ್ದಳೆ ನಡೆಯಿತು. ಡಾ. ರಮಾನಂದ ಬನಾರಿ ಇವರು ತಾಳಮದ್ದಳೆ ಕಾರ್ಯಕ್ರಮವನ್ನು ನಿರ್ದೇಶಸಿದ್ದರು. ಕುಮಾರಿ ರಚನಾ ಚಿದ್ಗಲ್ ಭಾಗವತಿಕೆಯಲ್ಲಿ ಅಮೋಘವಾದ ಕಾರ್ಯಕ್ರಮವನ್ನು ನೀಡಿದರು. ಹಿಮ್ಮೇಳನದಲ್ಲಿ ಚಂಡೆ ವಾದಕರಾಗಿ ಕುಮಾರ ಸುಬ್ರಹ್ಮಣ್ಯ ವಳಕುಂಜೆ, ಮದ್ದಳೆಯಲ್ಲಿ ಚಂದ್ರಶೇಖರ ಗುರುವಾಯನಕೆರೆ ಸಹಕರಿಸಿದರು ಅರ್ಥದಾರಿಗಳಾಗಿ ಡಾ.ರಮಾನಂದ ಬನಾರಿ, ಪೆರ್ಮುದೆ ಜಯಪ್ರಕಾಶ್ ಶೆಟ್ಟಿ, ವೆಂಕಟರಾಮ ಭಟ್ಟ ಸುಳ್ಯ, ರಾಮಣ್ಣ ಮಾಸ್ಟರ್ ದೇಲಂಪಾಡಿ, ಎಂ. ರಮಾನಂದ ರೈ ದೇಲಂಪಾಡಿ ಸಹಕರಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top