ಸಾಹಿತ್ಯಕ್ಕೆ ಕೊ.ಅ. ಉಡುಪರ ಸೇವೆ ಸದಾ ಸ್ಮರಣೀಯ

Upayuktha
0

ಕಿನ್ನಿಗೋಳಿ: ಸಾಹಿತ್ಯ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಕೊ.ಅ. ಉಡುಪರ ಸೇವೆ ಸದಾ ಸ್ಮರಣೀಯ ಎಂದು ಕಟೀಲು ಕ್ಷೇತ್ರದ ಅರ್ಚಕ ಕೆ. ಲಕ್ಷ್ಮೀನಾರಾಯಣ ಆಸ್ರಣ್ಣ ಹೇಳಿದರು.


ಕಿನ್ನಿಗೋಳಿ ಯುಗಪುರುಷ ಸಭಾಭವನದಲ್ಲಿ ಜರಗಿದ ಯುಗಪುರುಷ ಸಂಸ್ಥಾಪಕ ದಿ. ಕೊ. ಅ. ಉಡುಪರ ಸಂಸ್ಮರಣೆ, ಕೊ.ಅ. ಉಡುಪ ಪ್ರಶಸ್ತಿ ಪ್ರದಾನ, ವಿದ್ಯಾರ್ಥಿ ವೇತನ, ವಿತರಣೆ, ಅರ್ಚಕ ಸನ್ಮಾನ, ನೂತನ ಕೃತಿಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.


ಯುಗಪುರುಷ ಪ್ರಕಟಣಾಲಯದಿಂದ ಪ್ರಕಟಿತ ಕೆ. ಬಾಲಕೃಷ್ಣ ಉಡುಪ ರಚಿತ 'ಸ್ಫೂರ್ತಿ' ಹಾಗೂ ದೇವೇಂದ್ರ ಅಮೀನ್ ರಚಿತ 'ಮಾಯದ ಮಾಣಿಕ್ಯ' ಕೃತಿಗಳನ್ನು ಕಸಾಪ ಮಾಜಿ ಅಧ್ಯಕ್ಷ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ಅವರು ಬಿಡುಗಡೆ ಗೊಳಿಸಿದರು. ಕದ್ರಿ ನವನೀತ ಶೆಟ್ಟಿಯವರಿಗೆ ಕೊ. ಅ. ಉಡುಪ ಪ್ರಶಸ್ತಿ ನೀಡಿ, ಯುಗಪುರುಷ ಶ್ರೀ ರಾಘವೇಂದ್ರ ಸ್ವಾಮಿ ಮಂದಿರದ ಅರ್ಚಕ ರಾಘವೇಂದ್ರ ಉಡುಪರವರನ್ನು ಕಮಲಾಕ್ಷಿ ಉಡುಪ ಸ್ಮರಣಾರ್ಥ ಸಾಧಕ ಅರ್ಚಕರ ನೆಲೆಯಲ್ಲಿ ಗೌರವಿಸಲಾಯಿತು. ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸಲಾಯಿತು.


ಕ್ಯಾಂಪ್ಕೊ ಅಧ್ಯಕ್ಷ ಕಿಶೋರ್‌ಕುಮಾರ್ ಕೊಡ್ಗಿ ಅಧ್ಯಕ್ಷತೆ ವಹಿಸಿದ್ದರು. ಕಲ್ಕೂರ ಪ್ರತಿಷ್ಠಾನ ಅಧ್ಯಕ್ಷ ಪ್ರದೀಪ ಕುಮಾರ ಕಲ್ಕೂರ ಸಂಸ್ಮರಣಾ ಭಾಷಣ ಮಾಡಿದರು. ಉದ್ಯಮಿ ಮುಂಬಯಿ ವಿಜಯ ರೆಫ್ರಿಜರೇಶನ್‌ನ ಆಡಳಿತ ವ್ಯವಸ್ಥಾಪಕರಾದ ತಾಳಿಪಾಡಿಗುತ್ತು ಟಿ. ರಾಮಚಂದ್ರ ಶೆಟ್ಟಿ, ಎಂಆರ್‍‌ಪಿಎಲ್‌ ಜನರಲ್ ಮ್ಯಾನೇಜರ್ ರುಡಾಲ್ಫ್ ಜೋಯರ್ ನೋರೋನ್ಹಾ,  ಬಾಲಕೃಷ್ಣ ಉಡುಪ, ದೇವೇಂದ್ರ ಅಮೀನ್ ಉಪಸ್ಥಿತರಿದ್ದರು. ಯುಗಪುರುಷದ ಸಂಪಾದಕರಾದ ಕೊಡೆತ್ತೂರು ಭುವನಾಭಿರಾಮ ಉಡುಪರವರು ಕಾರ್ಯಕ್ರಮದಲ್ಲಿ ಸ್ವಾಗತಿಸಿ, ವಂದಿಸಿದರು. ಪು. ಗುರುಪ್ರಸಾದ್ ಭಟ್, ಅನುಷಾ ಸಂಮಾನ ಪತ್ರ ವಾಚಿಸಿದರು. ರಂಗಕರ್ಮಿ ಶರತ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.


ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ದ.ಕ. ಜಿಲ್ಲೆಯ ಸಹಕಾರದಿಂದ ಶ್ರೀ ವಿನಾಯಕ ಯಕ್ಷ ಕಲಾ ತಂಡ (ರಿ), ಕೆರೆಕಾಡು ಮೂಲ್ಕಿ ಇವರಿಂದ ಯಕ್ಷಗಾನ ಬಯಲಾಟ ಜರಗಿತು.

ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter 


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top