ಅಂತಶ್ಚಕ್ಷು (ಒಳಗಣ್ಣು) ಮೆಚ್ಚಿದರೆ ಅದೇ ಒಂದು ಸಾರ್ಥಕ್ಯ!

Upayuktha
0

ಭಿರಾಮ್ ಭಾಗವತ್, ಉಜಿರೆ ಧ.ಮಂ. ಕಾಲೇಜಿನಲ್ಲಿ ಬಿ.ಎ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿ. ಮೂಲತಃ ಕುಂದಾಪುರದವನಾದರೂ ತಂದೆ-ತಾಯಿ ಈಗ ಇರುವುದು ಶಿವಮೊಗ್ಗದಲ್ಲಿ. ಅಭಿರಾಮನಿಗೆ ದೃಷ್ಟಿಸಾಮರ್ಥ್ಯ ತೀರ ಕಡಿಮೆ. ಆದರೆ ಅಂತರ್ದೃಷ್ಟಿ ಬಲು ಪ್ರಖರ. ಅಂತೆಯೇ ಈ ಹುಡುಗನ ಪ್ರತಿಭೆ ಕೂಡ. ಕಷ್ಟಪಟ್ಟಾದರೂ ಪುಸ್ತಕಗಳನ್ನು ಓದುವ ಛಲ. ಆಧುನಿಕ ತಂತ್ರಜ್ಞಾನವನ್ನು (ಮೊಬೈಲ್ ಫೋನ್‌ನಲ್ಲಿ text-to-voice ಮತ್ತು voice-to-text ಸೌಕರ್ಯವನ್ನು) ಸಮರ್ಥವಾಗಿ ಬಳಸುವ ಅಭಿರಾಮ್ ಸೋಶಿಯಲ್ ಮೀಡಿಯಾದಲ್ಲೂ ಸಕ್ರಿಯನಾಗಿದ್ದಾನೆ. ಕೊಳಲು ನುಡಿಸುವುದು ಇನ್ನೊಂದು ಹವ್ಯಾಸ. ಚಿಕ್ಕಂದಿನಲ್ಲೊಮ್ಮೆ ಪ್ರವೀಣ ಗೋಡ್ಖಿಂಡಿಯವರನ್ನು ಭೇಟಿಯಾಗಿ ಜೊತೆಗೆ ಫೋಟೊ ತೆಗೆಸಿಕೊಂಡಿದ್ದಾನೆ. ಉಜಿರೆ ಕಾಲೇಜಿನಲ್ಲಿ ಸಾಂಸ್ಕೃತಿಕ ಚಟುವಟಿಕೆಗಳಲ್ಲೆಲ್ಲ ಆಸಕ್ತಿಯಿಂದ ಭಾಗವಹಿಸುತ್ತಾನೆ. ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ಪಡೆಯುತ್ತಾನೆ. ಕಾಲೇಜಿನ ಇಂಗ್ಲಿಷ್ ವಿಭಾಗವು ನಡೆಸಿದ್ದ 'Speak the writer' ಎಂಬ ಕಾರ್ಯಕ್ರಮದಲ್ಲಿ ಇಂಗ್ಲಿಷ್‌ನಲ್ಲಿ ಭಾಷಣ ಮಾಡಿದೆ ಎಂದು ಫೇಸ್‌ಬುಕ್‌ನಲ್ಲೊಂದು ಫೋಟೊ ಹಾಕಿಕೊಂಡಿದ್ದಾನೆ.


ತಿಳಿರುತೋರಣ ಅಂಕಣಬರಹಗಳು ಧ್ವನಿಮಾಧ್ಯಮ (audio podcast)ದಲ್ಲಿ ಸಿಗುವುದು ತನಗೊಂದು ವರದಾನವಿದ್ದಂತೆ ಎಂದು ಅಭಿರಾಮ್ ಉವಾಚ. ಈ ವಾರದ ಅಂಕಣಬರಹಕ್ಕೆ ಅಭಿರಾಮ್ ಬರೆದು ಕಳಿಸಿದ ಪ್ರತಿಕ್ರಿಯೆಯನ್ನು ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ. ಲೇಖನವನ್ನು ಧ್ವನಿಮಾಧ್ಯಮದಲ್ಲೂ ಪ್ರಸ್ತುತಪಡಿಸುವುದಕ್ಕೆ ಇದೊಂದು ಸಾರ್ಥಕತೆ ಮತ್ತು ಧನ್ಯತೆಯ ಕ್ಷಣ. 


ದೇವರ ದಯೆಯಿಂದ ದೃಷ್ಟಿಸಾಮರ್ಥ್ಯ ಚೆನ್ನಾಗಿಯೇ ಇರುವ ನಮ್ಮಂಥವರಿಗೆ ಅಭಿರಾಮ್ ಒಂದು ಪ್ರೇರಣೆ, ಸ್ಫೂರ್ತಿ. ಆತನ ಭವಿಷ್ಯ ಒಳ್ಳೆಯದಾಗಿರಲಿ ಎಂದು ಹಾರೈಕೆ.


- ಶ್ರೀವತ್ಸ ಜೋಶಿ, ವಾಷಿಂಗ್ಟನ್ ಡಿಸಿ. 2 ಜುಲೈ2023.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top