ಎಷ್ಟೊಂದು ವಿದ್ಯಾರ್ಥಿಗಳಿಗೆ ಜೀವನದಲ್ಲಾಗುವ ರೂಪುಗಳ ಅರಿವೇ ಇರುವುದಿಲ್ಲ ಹಾಗಾಗಿ ಏನಾದರೂ ಎದುರಾದರೇ ನನ್ನಿಂದ ಇದನ್ನು ಎದುರಿಸಲು ಆಗುವುದಿಲ್ಲವೆಂದು ನೊಂದು ಹಿಂಜರಿಯುವ ಜೊತೆಗೆ ತೀರವಾದ ಮಾನಸಿಕ ಅಸ್ವಸ್ಥೆಗೆ ಒಳಗಾಗಿ ಸಾವೇ ಪರಿಹಾರವೆಂದು ಸಾವಿನ ಮುಖವನ್ನು ನೋಡುವವರೇ ಹೆಚ್ಚು.
ಸಾವಿನ ಸಂದರ್ಭದಲ್ಲಿ ನನ್ನ ಹೆತ್ತು ಹೊತ್ತು ಸಾಕಿ ಸಲಹಿದ ಪೋಷಕರ ಕಷ್ಟ ಪ್ರೀತಿಯತ್ತಾ ಕಣ್ಣಾಯಿಸುವುದೇ ಇಲ್ಲ. ಹಾಗೆನೇ ತಾನು ಜೀವನವ ನಡೆಸಲು ಸಾಕಷ್ಟು ಸಮಯವಿದೆ ಇದೊಂದೆ ಅಲ್ಲ ಎಂದು ಅರಿಯದೇ ಇರುವವರೇ ಹೆಚ್ಚು. ಸಾಯುವಾತನಿಗೆ ಯಾವುದೇ ಯೋಚನೆ ಇರದೆ ಇದ್ದರೂ ಆತನ ಹಿಂಬದಿಯವರಿಗೆ ಎಷ್ಟೊಂದು ಆಸೆ, ಆಕಾಂಕ್ಷೆ ನೋವುಗಳು ಕಾಡುತ್ತಿರುತ್ತವೆ. ಹೆರುವಾಗ ತಾಯಿಯು ತನ್ನ ಮಗ /ಮಗಳು ಜೀವನದಲ್ಲಿ ದೊಡ್ಡ ಹೆಸರುವಾಸಿಯಾದ ವ್ಯಕ್ತಿಯಾಗಬೇಕು . ಎಲ್ಲರೂ ಈತನ /ಇವಳ ಹೆಸರನ್ನೇ ಕರೆದು ಹುಡುಕುವಂತಹ ಸಾಧನೆಯ ಮಾಡಬೇಕು ಎಂದೆಲ್ಲಾ ಕನಸನ್ನು ಹೊತ್ತು ನಮ್ಮನ್ನು ಭೂವಿಗೆ ತರುತ್ತಾರೆ . ಇದನ್ನು ಯಾಕೆ ನಾವು ನೊಂದಾಗ ಅರಿವು ಮಾಡಿಕೊಳ್ಳುವುದಿಲ್ಲ ಎನ್ನುವುದೇ ಇಂದು ಪೋಷಕರಿಗೆ ಕಾಡುವ ನೋವು ಎನ್ನಬಹುದು.
ಒಂದು ಬಾರಿ ನಿಧಾನವಾಗಿ ಯೋಚಿಸುವ ಶಕ್ತಿ ಇಲ್ಲದಾಗಿರುವುದೇ ನಮ್ಮ ಕೈಯಲ್ಲಿರುವಂತಹ ಮೊಬೈಲ್ ಗಳು ಎನ್ನಬಹುದು. ಯಾಕೆಂದರೆ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣವೆನ್ನುವುದು ಎಷ್ಟು ಉಪಕಾರಿಯಾಗಿದೆಯೋ ಅದೇ ರೀತಿ ಅದರಲ್ಲಿ ಬರುವಂತಹ ಕೆಟ್ಟ ಘಟನೆಗಳು ಸಂದರ್ಶನೆಗಳು ಅದರತ್ತ ನಮ್ಮನು ಎಳೆದುಕೊಂಡು ನಮ್ಮ ಸುತ್ತಮುತ್ತಲಿನಲ್ಲಿ ಆಗು ಹೋಗುಗಳತ್ತಾ ಗಮನ ನೀಡದಂತೆ ಮಾಡುತ್ತಿದೆ ಹಾಗೆಯೇ ಮಾನಸಿಕ ಖಿನ್ನತೆಗೆ ಸರಿಸುತ್ತಿದೆ. ಇಂತಹದರಿಂದ ನಮ್ಮಲ್ಲಿ ಯೋಚನೆಯ ಶಕ್ತಿ ಕಡಿಮೆಯಾಗಿದೆ ಎನ್ನಬಹುದು. ಎದುರಿಸುವಂತಹ ಶಕ್ತಿ ನಮ್ಮಲ್ಲಿ ಇಲ್ಲದಂತಾಗಿದ್ದು ಸೋತಿದ್ದೇವೆ ಎನ್ನುತ್ತೇವೆ. ಸೋತಾಗಲೇ ಗೆಲುವು ಮೆಟ್ಟಿಲನ್ನು ಏರಲು ಸಾಧ್ಯವೆನ್ನುವುದನ್ನು ಅರಿಯಲೇಬೇಕು ಅರಿಯಬೇಕಾದರೆ ನಮಗೆ ಸಾವಿರಾರು ಪುಸ್ತಕಗಳ ಪ್ರೇಮಿಗಳಾಗಬೇಕು. ಹಾಗೆಯೇ ಮೊಬೈಲ್‌ನಲ್ಲಿ ಬೇಕಾಗುವ ಮಾಹಿತಿಯನ್ನು ಪಡೆದುಕೊಂಡು ಹೆಚ್ಚಿನ ಸಮಯವನ್ನು ಅದಕ್ಕೆ ಮೀಸಲಿಡುವುದನ್ನು ಸ್ವಲ್ಪ ಪ್ರಮಾಣದಲ್ಲಾದರೂ ದೂರ ಸರಿಸುವ ಪ್ರಯತ್ನ ಇಂದಿನ ವಿದ್ಯಾರ್ಥಿಗಳದ್ದು ಆಗಬೇಕು.
ನಮ್ಮ ಹಾಗೆಯೇ ನೋವು ನಲಿವುಗಳ ನಡುವೆ ಬೆರೆತ ಮಹಾನುಭಾವರ ಇತಿಹಾಸವನ್ನು ಪರೀಶೀಲಿಸಿ ನೋಡಬೇಕು ಇದೆಲ್ಲಾ ಹೇಗೆಂದರೆ ಅತಿಯಾಗಿ ಪುಸ್ತಕಗಳನ್ನು ಓದುತ್ತ ಇದ್ದರೆ ಸಾಧ್ಯವೆನ್ನಬಹುದು. ಸಾಧಿಸುವ ಛಲದ ಗುರಿಯೊಂದಿದ್ದರೆ ಸಾಲುವುದಿಲ್ಲ. ಅದಕ್ಕಾಗಿ ಹೆಚ್ಚಿನ ಪ್ರಮಾಣದ ಪ್ರಯತ್ನ ಶ್ರಮ ಹಾಕಿದಾಗಲೇ ಸಾಧ್ಯ.
-ಅನನ್ಯ ಎಚ್ ಸುಬ್ರಹ್ಮಣ್ಯ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ