ನುಸುಳುಕೋರರ ಬಗ್ಗೆ ಕಠಿಣ ಕ್ರಮಕೈಗೊಳ್ಳದಿದ್ದರೆ ಭಾರತದ ಸ್ಥಿತಿಯೂ ಫ್ರಾನ್ಸ್‌ನಂತಾದೀತು: ಅನಿಲ್ ಧೀರ

Upayuktha
0
ವಿಶೇಷ ಸಂವಾದ : ಫ್ರಾನ್ಸ್‌ನ ಕಿಡಿ ಭಾರತಕ್ಕೆ ತಗಲುವುದೇ?

ಬೆಂಗಳೂರು: ಯುರೋಪಿನಲ್ಲಿ ಸೆಕ್ಯುಲರ್ ದೇಶವೆಂದು ಫ್ರಾನ್ಸ್‌ನ ಉದಾಹರಣೆ ನೀಡಲಾಗುತ್ತದೆ. ಎರಡನೇ ಮಹಾಯುದ್ಧದ ನಂತರ ಫ್ರಾನ್ಸ್ ನಿರಾಶ್ರಿತರಿಗಾಗಿ ತನ್ನ ಗಡಿಯಲ್ಲಿ ಆಶ್ರಯ ನೀಡಿತ್ತು. ಈಗ ಫಾನ್ಸ್‌ನಲ್ಲಿ ನಡೆಯುತ್ತಿರುವ ಗಲಭೆಗಳು ಅಚಾನಕ್ ಆಗಿ ನಡೆದ ಗಲಭೆಗಳಲ್ಲದೇ 30 ರಿಂದ 40 ವರ್ಷಗಳಿಂದ ನಡೆಯುತ್ತಿದ್ದ ತಯಾರಿಯಾಗಿದೆ. ಇಂದು ಫ್ರಾನ್ಸ್ ನಲ್ಲಿ ಹೇರಲಾದ ಜಾತ್ಯಾತೀತತೆಯ ವಿಫಲತೆಯ ಗಂಭೀರ ಪರಿಣಾಮ ಫ್ರಾನ್ಸಿನಲ್ಲಿನ ನಾಗರೀಕರು ಅನುಭವಿಸುತ್ತಿದ್ದಾರೆ. ಯುರೋಪಿನಲ್ಲಿನ ಇತರ ದೇಶಗಳು ಈಗ ಎಚ್ಚರಗೊಂಡಿದ್ದು, ಫ್ರಾನ್ಸ್‌ನಲ್ಲಿ ಘಟಿಸುತ್ತಿರುವ ಘಟನೆಗಳು ಎಲ್ಲಿ ಬೇಕಿದ್ದರೂ ಘಟಿಸಬಹುದು. ಇಂದು ಭಾರತದಲ್ಲಿ ಕಾನೂನುಬಾಹಿರವಾಗಿ ರೋಹಿಂಗ್ಯ ಮತ್ತು ಬಾಂಗ್ಲಾದೇಶದ ಮುಸಲ್ಮಾನರು ಅನೇಕ ಸ್ಥಳಗಳಲ್ಲಿ ವಾಸಿಸುತ್ತಿದ್ದಾರೆ. ಈ ನುಸುಳಕೋರರ ಬಗ್ಗೆ ಭಾರತ ಸರಕಾರ ಕಠಿಣ ಕ್ರಮ ಕೈಗೊಳ್ಳದಿದ್ದರೆ ಭಾರತದ ಪರಿಸ್ಥಿತಿಯೂ ಫ್ರಾನ್ಸ್‌ನಂತೆಯೇ ಆಗುವುದು, ಎಂದು ‘ಒಡಿಸ್ಸಾ, ಭುವನೇಶ್ವರದಲ್ಲಿನ ಇಂಡಿಯನ್ ನ್ಯಾಷನಲ್ ಟ್ರಸ್ಟ್ ಫಾರ್ ಆರ್ಟ್ ಅಂಡ್ ಕಲ್ಚರಲ್ ಹೆರಿಟೇಜ್’ನ ಸಂಯೋಜಕರು ಹಾಗೂ ಅಭ್ಯಾಸಕರಾದ ಅನಿಲ ಧೀರ ಇವರು ಎಚ್ಚರಿಸಿದರು.

ಹಿಂದೂ ಜನಜಾಗೃತಿ ಸಮಿತಿ ಆಯೋಜಿಸಿದ್ದ ‘ಫ್ರಾನ್ಸ್‌ನ ಕಿಡಿ ಭಾರತಕ್ಕೆ ತಗಲುವುದೇ’ ಈ ವಿಷಯದ ಆನ್‌ಲೈನ್ ವಿಶೇಷ ಸಂವಾದದಲ್ಲಿ ಅವರು ಮಾತನಾಡುತ್ತಿದ್ದರು.

ಧೀರ ಅವರು ಮಾತು ಮುಂದುವರೆಸಿ, ಪೋಲ್ಯಾಂಡ್ ಮತ್ತು ಜಪಾನ್ ಈ ಎರಡು ದೇಶಗಳು ಪ್ರಾರಂಭದಿಂದಲೇ ಕಾನೂನು ಬಾಹಿರ ನುಸುಳುಕೋರರಿಗೆ ಬರಲು ಬಿಡಲಿಲ್ಲ. ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್ ಕೂಡ ಇದೇ ರೀತಿ ಪ್ರಯತ್ನಿಸುತ್ತಿದ್ದಾರೆ. ಹಿಂಸಾಚಾರದ ನಂತರ ಈಗ ಫ್ರಾನ್ಸ್ ನಲ್ಲಿ ಕಠಿಣ ಕಾನೂನು ಜಾರಿ ಮಾಡುವ ಪ್ರಯತ್ನ ಆರಂಭವಾಗಿದೆ. ಈ ಪರಿಸ್ಥಿತಿಯಿಂದ ಭಾರತ ಪಾಠ ಕಲಿತು ಕಾನೂನುಬಾಹಿರ ನುಸುಳುಕೋರರ ಬಗ್ಗೆ ದೇಶದಲ್ಲಿ ಕಠಿಣ ಕಾನೂನು ಜಾರಿಗೊಳಿಸಬೇಕು ಎಂದರು.


ಈ ಸಮಯದಲ್ಲಿ ವಿಶ್ವ ಹಿಂದೂ ಪರಿಷತ್ತಿನ ರಾಷ್ಟ್ರೀಯ ವಕ್ತಾರರಾದ ವಿನೋದ ಬನ್ಸಲ್ ಇವರು, ಪ್ರಸ್ತುತ ಫ್ರಾನ್ಸ್ ನಲ್ಲಿ ಗಲಭೆ ನಡೆಸಲಾಗುತ್ತಿದೆ, ಅಲ್ಪಸಂಖ್ಯಾತರ ‘ಗ್ಲೋಬಲ್ ಪ್ಯಾಟರ್ನ್’ ಹಿಂದಿನಿಂದಲೂ ಇದೆ. ಮೊದಲು ನಿರಾಶ್ರಿತರೆಂದು ಹೋಗುವುದು, ನಂತರ ಅಲ್ಲಿಯ ಸಂಸ್ಕೃತಿ, ಪರಂಪರೆ, ಐತಿಹಾಸಿಕ ಕಟ್ಟಡಗಳ ನಾಶಗೊಳಿಸಿ ಅಲ್ಲಿಯ ಜನರನ್ನೇ ನಿರಾಶ್ರಿತರನ್ನಾಗಿ ಮಾಡುವುದು ಮತ್ತು ಅಲ್ಲಿ ‘ದಾರ್-ಉಲ್-ಇಸ್ಲಾಂ’ನ ರಾಜ್ಯ ತರುವುದು. ಕೆಲವು ವರ್ಷಗಳಿಂದ ಭಾರತದಲ್ಲಿ ಹೀಗೆ ಕಾನೂನು ಬಾಹಿರವಾಗಿ ಬಂದಿರುವ ರೋಹಿಂಗ್ಯ ಮುಸಲ್ಮಾನರಿಂದಲೂ ಈಗ ಅಪಾಯವಿದೆ. ಇಂದು ಭಾರತದಲ್ಲಿ ಅನೇಕ ‘ಮಿನಿ ಪಾಕಿಸ್ತಾನ’ ನಿರ್ಮಾಣವಾಗಿದೆ. ಒಟ್ಟಾರೆ ಭಾರತ ವಿರೋಧಿ ಶಕ್ತಿಗಳ ನಾಶ ಮಾಡಲು ಸಮಾಜವು ಸರಕಾರದೊಂದಿಗೆ ಕೈಜೋಡಿಸಬೇಕು ಎಂದರು.


ಈ ಸಮಯದಲ್ಲಿ ಜರ್ಮನಿಯ ಸುಪ್ರಸಿದ್ಧ ಲೇಖಕಿ ಮಾರಿಯಾ ವರ್ಥ್ ಇವರು, ಪ್ರಸ್ತುತ ಫ್ರಾನ್ಸ್ ನಲ್ಲಿ ನಡೆದಿರುವ ಗಲಭೆ ಪೂರ್ವ ನಿಯೋಜಿತವಾಗಿದೆ. ಫ್ರಾನ್ಸ್ ಮತ್ತು ವಿವಿಧ ದೇಶದಲ್ಲಿನ ರಾಜಕೀಯ ನಾಯಕರು ಗಲಭೆ ಮತ್ತು ಹಿಂಸಾಚಾರ ನಡೆಸಲು ನಿರಾಶ್ರಿತರನ್ನು ಉಪಯೋಗಿಸಿಕೊಳ್ಳುತ್ತಾರೆ; ಆದರೆ ಫ್ರಾನ್ಸ್ ನಲ್ಲಿ ನಿರಾಶ್ರಿತ ಮುಸಲ್ಮಾನರಿಂದ ನಡೆಸಲಾಗುವ ಗಲಭೆಯ ಸಮರ್ಥನೆ ಮಾಡುವ ಅವಶ್ಯಕತೆ ಇಲ್ಲ. ಒಟ್ಟಾರೆ ಫಾನ್ಸ್‌ನ ಸ್ಥಿತಿ ನೋಡಿದರೆ ಭಾರತ ಬಹಳ ಜಾಗರೂಕವಾಗಿರಬೇಕು ಎಂದರು.


 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter   

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top