ಶಿವರಾಜ್ ಕುಮಾರ್ 61ನೇ ಹುಟ್ಟುಹಬ್ಬ: ನೆನಪಿನ ಕಾಣಿಕೆ ಅಂಚೆ ಚೀಟಿ ಜು.12ರಂದು ಪ್ರದಾನ

Upayuktha
0


ಬೆಂಗಳೂರು: ಚಲನಚಿತ್ರ ನಟ, ಹ್ಯಾಟ್ರಿಕ್ ಹೀರೋ ಡಾ. ಶಿವರಾಜ್ ಕುಮಾರ್ ಅವರಿಗೆ 61ನೇ ವರ್ಷದ ಹುಟ್ಟುಹಬ್ಬದ ಪ್ರಯುಕ್ತ ಅಂಚೆ ಇಲಾಖೆ ಹೊರತಂದಿರುವ "ಶಿವರಾಜಕುಮಾರ್  ಭಾವಚಿತ್ರದ" ಮೈ ಸ್ಟಾಂಪ್" ನ್ನು (MY STAMPS) ಬುಧವಾರ ಬೆಳಿಗ್ಗೆ 8 ಗಂಟೆಗೆ ನಾಗವಾರದಲ್ಲಿರುವ ಅವರ ಮನೆಯಲ್ಲಿ ನೆನಪಿನ ಕಾಣಿಕೆಯಾಗಿ ನೀಡಲಾಗುವುದು ಎಂದು ರಂಗಚಂದಿರ ತಂಡದ ಕಾರ್ಯದರ್ಶಿ ಜಿಪಿಓ ಚಂದ್ರು ತಿಳಿಸಿದ್ದಾರೆ.


ಅಂದಿನ ಕಾರ್ಯಕ್ರಮದಲ್ಲಿ ಡಾ. ಮಾಗಡಿ ಗಿರೀಶ್, ಶ್ರೀಧರ್ ಗೌಡ, ದೊಡ್ಡಯ್ಯ, ಖ್ಯಾತ ಕಥೆಗಾರರಾದ ಕನಕರಾಜ್ ಆರನ ಕಟ್ಟೆ, ನಾಗೇಶ್, ಚಲನಚಿತ್ರ ನಿರ್ಮಾಪಕರಾದ ಕೆಪಿ ಶ್ರೀಕಾಂತ್, ಮತ್ತು ಅಖಿಲ ಕರ್ನಾಟಕ ಶಿವರಾಜ್ ಕುಮಾರ್ ಸೇನಾ ಸಮಿತಿಯ ಅಧ್ಯಕ್ಷರಾದ ಟಿ. ನಾರಾಯಣ್, ಗಂಡುಗಲಿ ಶಿವರಾಜ್ ಕುಮಾರ್ ಸೇನಾ ಸಮಿತಿಯ ಅಧ್ಯಕ್ಷರಾದ ಎಂ. ಮಲ್ಲ ಇವರು ಭಾಗವಹಿಸಲಿದ್ದಾರೆ ಎಂದು ಜಿಪಿಓ ಚಂದ್ರು ಅವರು ತಿಳಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter  


إرسال تعليق

0 تعليقات
إرسال تعليق (0)
To Top