ಹಾಸನ: ಜಾನಪದ ಸಂಗಮ ಎಂದೇ ಹೆಸರಾಗಿದ್ದ ಡಾ.ಎಸ್.ಕೆ. ಕರೀಂಖಾನರು ಜಾನಪದ ಗೀತೆಗಳ ಗಾಯನ ಹಾಗೂ ಸಂಗ್ರಹದಿಂದ 40-50ರ ದಶಕಗಳಲ್ಲಿ ಮನೆ ಮಾತಾಗಿದ್ದರು ಎಂದು ನಿವೃತ್ತ ವಾಣಿಜ್ಯ ತೆರಿಗೆ ಉಪ ಅಯುಕ್ತರು, ರಂಗಕರ್ಮಿ ಹನ್ಯಾಳು ಹೆಚ್.ಎಸ್.ಗೋವಿಂದಗೌಡರು ತಿಳಿಸಿದರು.
ಕಟ್ಟೇಮನೆ ನಾಗೇಂದ್ರ ಸಮಾಜ ಸೇವಕರು, ತಣ್ಣಿರುಹಳ್ಳ ಇವರ ಪ್ರಾಯೋಜನೆಯಲ್ಲಿ ಹಾಸನದ ಮನೆ ಮನೆ ಸಾಹಿತ್ಯ ಸಂಘಟನೆಯ 307ನೇ ಕಾರ್ಯಕ್ರಮದಲ್ಲಿ ಡಾ. ಎಸ್.ಕೆ.ಕರೀಂಖಾನ್ ಬದುಕುಬರಹ ಕುರಿತು ಮಾತನಾಡುತ್ತಾ ಜನಪದ, ಸಿನಿಮಾ, ನಾಟಕ ಈ ಮೂರು ಕ್ಷೇತ್ರಗಳ ಸಾಧಕರು. 10 ವರ್ಷ ಮದ್ರಾಸಿಗೆ ಹೋದರು. ಚಲನಚಿತ್ರ ಕ್ಷೇತ್ರದಲ್ಲಿ ಬೆಂಗಳೂರಿಗೆ ಬಂದು 26 ಚಲನಚಿತ್ರಗಳಿಗೆ ಸಾಹಿತ್ಯ ಬರೆದರು. 1949ರಲ್ಲಿ ಸಾಹಿತ್ಯ ಸಾಮ್ರಾಜ್ಯ ನಾಟಕ ಮಂಡಳಿ ಸೇರಿ ನಿರ್ದೋಷಿ ಸೇರಿದಂತೆ 16 ನಾಟಕಗಳನ್ನು ಬರೆದಿದ್ದಾರೆ. ಇಂತಹ ಮಹನೀಯರಿಗೆ ಜೀವನದಲ್ಲಿ ಕೊನೆಗೂ ಒಂದು ಮನೆಯೂ ಸಿಗಲಿಲ್ಲ ಸರ್ಕಾರವು ಗಮನಿಸಲಿಲ್ಲ ಎಂದು ಗೋವಿಂದಗೌಡರು ವಿಷಾದಿಸಿದರು.
ಕಾರ್ಯಕ್ರಮದಲ್ಲಿ ಸಾಹಿತಿ ಗೊರೂರು ಅನಂತರಾಜು ಮಾತನಾಡಿ, ಕರೀಂಖಾನರು ಹೈಸ್ಕೂಲ್ ವಿದ್ಯಾರ್ಥಿಯಾಗಿದ್ದಾಗಲೇ ಜನಪದ ಗೀತೆಗಳತ್ತ ಆಕರ್ಷಿತರಾದರು. ಕರೀಂಖಾನರು ಜನಪದ ಗೀತೆಗಳನ್ನು ಸಂಗ್ರಹಗಳನ್ನು ಪ್ರಕಟಿಸುವ ಕಾಲಕ್ಕೆ ಜನಪದದ ಇತರೆಲ್ಲ ಪ್ರಕಾರಗಳಿಗಿಂತ ಗೀತೆಗಳ ಪ್ರಕಾರವೇ ಸಂಗ್ರಾಹಕರನ್ನು ಮುಖ್ಯವಾಗಿ ಆಕರ್ಷಿಸಿತ್ತು. ಜನಪದ ಗೀತೆಗಳ ಸುಮಾರುಒಂಭತ್ತು ಚಿಕ್ಕಚಿಕ್ಕ ಸಂಗ್ರಹಗಳನ್ನು 50-60ರ ದಶಕಗಳಲ್ಲಿ ಪ್ರಕಟಿಸಿದರು. ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾಗಿ ಅವರ ಅವಧಿಯಲ್ಲಿ ಅದುವರೆಗೆ ಅಜ್ಞಾತವಾಗಿದ್ದ ಗಿರಿಜನರ ಸಂಸ್ಕೃತಿಯ ಅಧ್ಯಯನ, ಅವರ ಕಲೆಗಳ ದಾಖಲಾತಿ ಅವರ ಪರಿಸರದಲ್ಲಿಯೇ ಚಿತ್ರೀಕರಿಸುವ ಯೋಜನೆ ರೂಪಿಸಿದರು.
ಅರಸೀಕರೆಯಲ್ಲಿ ನಡೆದ 3ನೇ ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದು ಇಲ್ಲಿ ಕವಿಗೋಷ್ಠಿಯಲ್ಲಿ ತಾನು ಪಾಲ್ಗೊಂಡಿದ್ದನ್ನು ಗೊರೂರು ಅನಂತರಾಜು ಸ್ಮರಿಸಿದರು. ಕವಿಗೋಷ್ಠಿಯಲ್ಲಿ ಲಕ್ಷ್ಮೀದೇವಿ ದಾಸಪ್ಪ, ರೇಖಾ ಪ್ರಕಾಶ್, ಎನ್.ಎಲ್.ಚನ್ನೇಗೌಡ, ಮಲ್ಲೇಶ್ ಜಿ. ಕೆ.ಎನ್.ಚಿದಾನಂದ, ಜಿ.ಪಿ.ಅಣ್ಣಾಜಪ್ಪಗುಂಜೇವು, ಗೊರೂರು ಅನಂತರಾಜು ಕವಿತೆ ವಾಚಿಸಿದರು. ಡಾ.ಬರಾಳು ಶಿವರಾಮ್ ಅವರು ಹನ್ಯಾಳು ಪ್ರಕಾಶನನದಎಲ್ಲಮ್ಮದಕ್ಷಿಣ ಭಾರತದದೇವತೆ ಪುಸ್ತಕ ಕುರಿತು ಮಾತನಾಡಿದರು. ತತ್ವಪದ ಗಾಯಕ ಯೋಗೇಂದ್ರದುದ್ದ ಕರೀಂಖಾನ್ ಸಂಗ್ರಹದ ಜನಪದಗೀತೆ ಹಾಡಿದರು.
ಮಂಜುಳ ಕುಮಾರಸ್ವಾಮಿ ಜನಪದಗೀತೆ, ಹೂವಿನಹಳ್ಳಿ ಕಾವಲು ಗುಂಡುರಾಜ್, ಗಾಡೇನಹಳ್ಳಿ ಜಿ.ಎಂ.ಕೃಷ್ಣೇಗೌಡ, ಗಾಯಕಹೆಚ್.ಜಿ.ಗಂಗಾಧರ್ ಹಾಗೂ ಹೆಚ್.ಎಸ್.ಗೋವಿಂದಗೌಡರು ರಂಗಗೀತೆಗಳಿಂದ ರಂಜಿಸಿದರು. ರಂಗ ಸಂಗೀತ ಪರಿಷತ್ ಸಂಸ್ಥೆಯನ್ನು ಸ್ಥಾಪಿಸಿ ಯಶಸ್ವಿ ರಂಗಸಂಗೀತ ಸಮ್ಮೇಳನ ಸಂಘಟಿಸಿದ, ಹಲವಾರು ಪೌರಾಣಿಕ ನಾಟಕಗಳನ್ನು ಪ್ರಕಟಿಸಿ. ರಂಗಗೀತೆಗಳ ಸಂಗ್ರಹ ಸಿಡಿಗಳನ್ನು ಹೊರತಂದ ರಂಗಭೂಮಿ ಕ್ಷೇತ್ರಕ್ಕೆ ತಮ್ಮದೇ ಕೊಡುಗೆಯನ್ನು ನೀಡಿದ ಹೆಚ್.ಎಸ್.ಗೋವಿಂದಗೌಡರನ್ನು ಮನೆ ಮನೆ ಕವಿಗೋಷ್ಠಿ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ