ಹಾಸನ ಹಿಮ್ಸ್ ಸಂಸ್ಥೆಯ ಎನ್‌ಎಸ್‌ಎಸ್ ಶಿಬಿರದಲ್ಲಿ ಉಪನ್ಯಾಸ, ಹಾಡು ನೃತ್ಯ ಕಿರು ನಾಟಕ

Upayuktha
0

ಹಾಸನ: ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ, ಬೆಂಗಳೂರು ಹಾಸನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ರಾಷ್ಟ್ರೀಯ ಸೇವಾ ಯೋಜನೆಯ ಅಮೃತ ಸಮುದಾಯ ಯೋಜನೆಯಡಿಯಲ್ಲಿ 2022-23ನೇ ಸಾಲಿನ ವಾಷಿ೯ಕ ವಿಶೇಷ ಶಿಬಿರವನ್ನು ಹಾಸನ ತಾಲ್ಲೂಕು ಅಮ್ಮಗೋಡನಹಳ್ಳಿ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದ್ದು ಕಾನೂನು ಅರಿವು, ವ್ಯಸನ ಮುಕ್ತ ಸಮಾಜ ಮತ್ತು ಪೋಕ್ಸೋ ಕಾಯಿದೆ ವಿಷಯಗಳ ಉಪನ್ಯಾಸದಲ್ಲಿ ವಕೀಲರ ಸಂಘದ ಮಾಜಿ ಅಧ್ಯಕ್ಷ ಚಂದ್ರಶೇಖರ, ಮದ್ಯ ವ್ಯಸನ ಮುಕ್ತಿ ಕೇಂದ್ರದ ನಿರ್ದೇಶಕಿ ಶ್ರೀಮತಿ ಅಂಜಲಿ ಗೋವಿಂದರಾಜು, ಹಿಮ್ಸ್ ಸಖಿ-1 ಸ್ಟಾಪ್ ಕೇಂದ್ರದ ಸಮಾಜ ಸೇವಾ ಕಾಯಕರ್ತೆ ಕು.ಸಹನ ಇವರು ಮಾತನಾಡಿದರು.


ಸಾಹಿತಿ ಗೊರೂರು ಅನಂತರಾಜು, ಹಿಮ್ಸ್  ಕಾಲೇಜಿನ  ಡಾ.ಪ್ರಕಾಶ್. ಬಿ.ಎಸ್, ಡಾ.ವಿಠಲ್. ಬಿ.ಜಿ, ಡಾ.ಗಿರೀಶ್ ಬಾಬು, ಡಾ.ಸುಧನ್ವ, ಹಿಮ್ಸ್‌ನ ರಾಷ್ಟ್ರೀಯ ಸೇವಾ ಯೋಜನೆಯ ಶಿಬಿರಾಧಿಕಾರಿ ಶ್ರೀಮತಿ ನಿಚಿತ ಕುಮಾರಿ, ಸಹ ಶಿಬಿರಾಧಿಕಾರಿ ಡಾ.ಕಾವ್ಯಶ್ರೀ.ಜಿ, ವಕೀಲರಾದ ಶೇಷಾದ್ರಿ ಇವರೆಲ್ಲರೂ ಉಪಸ್ಥಿತರಿದ್ದರು.


ನಿವೃತ್ತ ಮುಖ್ಯೋಪಾಧ್ಯಾಯ ಕೃಷ್ಣೇಗೌಡರು ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದರು. ಶ್ರೀ ಬೆನಕ ಕಲಾ ಸೌರಭ ತಂಡದ ಶ್ರೀಮತಿ ರಾಣಿ ಮತ್ತು ತಂಡದವರಿಂದ ನೃತ್ಯ ವೈವಿಧ್ಯ, ಯೋಗೇಂದ್ರ, ದುದ್ದ ರವರಿಂದ ಜನಪದ ಗೀತೆ ಮತ್ತು ಕಾಲೇಜು ವಿದ್ಯಾರ್ಥಿಗಳಿಂದ ಕಿರು ನಾಟಕ ಪ್ರದಶ೯ನ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾದವು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter  

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top