ಗುರುಪೂರ್ಣಿಮೆ- ಗುರುನಮನ

Upayuktha
0


ಗುರುವಿಗೆ ನಮನ ಗುರುವಿಗೆ ನಮನ
ಗುರುಪೂರ್ಣಿಮೆ ದಿನ ಗುರುವಿಗೆ ನಮನ

ಕಗ್ಗತ್ತಲಲಿ ಚಂದ್ರನಂತೆ ಹೊಳೆಯುವ
ಬಗ್ಗದ ಅಜ್ಞಾನ ಕತ್ತಲ ಸರಿಸುವ
ಕುಗ್ಗಿಸಿ ಅಹಂಕಾರ ಶಿಕ್ಷಿಸಿ ಸಲಹುವ
ಮುಗ್ಗರಿಸದಂತೆ ಜೊತೆಯಲೆ ಇರುವ

ಯೋಗ್ಯ ಕಲ್ಲು ಹುಡುಕುವ ಶಿಲ್ಪಿಯಂತೆ
ಯೋಗ್ಯ ಶಿಷ್ಯರ ಗುರುವು ಹುಡುಕುವ
ಯೋಗ್ಯತೆ ಹೆಚ್ಚಿಸೊ ಉಳಿಯೇಟಿನಂತೆ 
ಯೋಗ್ಯ ಗುರುವು ಗುರಿ ಮುಟ್ಟಿಸುವ

ಅನುಭವ ಅನುಭಾವವ ತಿಳಿಸುವ
ಅನುಕ್ಷಣವೂ ಒಳಿತನ್ನು ಬಯಸುವ
ಅನುಪಮ ಗುರಿಯನು ಕೊಟ್ಟು ಸಲಹುವ
ತನುಮನವನು ಧಾರೆ ಎರೆವ

ಜಗದ್ಗುರು ಕೃಷ್ಣ ಅರ್ಜುನನ ಕಾಯ್ದಂತೆ
ಸೊಗಸಾಗಿ ಆತ್ಮಜ್ಞಾನ ಬಿಡಿಸಿ ಹೇಳಿದಂತೆ
ನಗುತ ಕಷ್ಟಗಳ ದೂರಮಾಡಿದಂತೆ
ಜಗತ್ಪಿತ ಸಿರಿಹರಿ ಗುರುವಾಗಿ ಪೊರೆವ

ಶ್ರೀ ಕೃಷ್ಣಾರ್ಪಣಮಸ್ತು

-ರೂಪಶ್ರೀ ಶಶಿಕಾಂತ್


 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter  

Tags

إرسال تعليق

0 تعليقات
إرسال تعليق (0)
To Top