ದ.ಕ.ಚುಟುಕು ಸಮ್ಮೇಳನದ ಸರ್ವಾಧ್ಯಕ್ಷರಾಗಿ ಜಿ.ಯು. ನಾಯಕ

Upayuktha
0


ಉಡುಪಿ: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲಾ ಕಚುಸಾಪ ಚುಟುಕು ಸಾಹಿತ್ಯ ದ್ವಿತೀಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಮಕ್ಕಳ ಸಾಹಿತಿ, ಹಿರಿಯ ಚಿಂತಕ, ನಿವೃತ್ತಿ ಮುಖ್ಯ ಶಿಕ್ಷಕ ಜಿ.ಯು. ನಾಯಕ ಆಯ್ಕೆಯಾಗಿದ್ದಾರೆಂದು ಸಂಚಾಲಕ ಕೃಷ್ಣಮೂರ್ತಿ ಕುಲಕರ್ಣಿ ತಿಳಿಸಿದ್ದಾರೆ.


ಆಗಸ್ಟ್ 13 ಭಾನುವಾರ ಬೆಳಿಗ್ಗೆ 9 ಗಂಟೆಯಿಂದ ವಾಣಿಶ್ರೀ ತಂಡದವರಿಂದ ನೃತ್ಯ ಸಂಗೀತ ವೈಭವ, ನಂತರ ವಿಚಾರಗೋಷ್ಟಿ, ಚುಟುಕು ವಾಚನ ಗೋಷ್ಟಿ, ಸಂಜೆ 4 ಗಂಟೆಗೆ ಪರ್ಯಾಯ ಕೃಷ್ಣಮಠದ ಶ್ರೀಪಾದ ಸಾನಿಧ್ಯದಲ್ಲಿ 40 ಅರ್ಹ ದಂಪತಿಗಳಿಗೆ ತಲಾ ಹತ್ತು ಪುಸ್ತಕ ದಾನ ಸಮಾರಂಭವನ್ನು ಕಸಾಪ ಮಾಜಿ ರಾಜ್ಯ ಅಧ್ಯಕ್ಷ ಹರಿಕೃಷ್ಣ ಪುನರೂರು ಉದ್ಘಾಟಿಸುವರು. ಹಿರಿಯ ಚಿಂತಕರಾದ ವಿಶ್ವನಾಥ ಶೆಣೈ ಮುಖ್ಯ ಅತಿಥಿಗಳಾಗಿ ಆಗಮಿಸುವರು. ಚುಟುಕು ವಾಚನಾಸಕ್ತರು, ಸಾಹಿತ್ಯಾಸಕ್ತ ಅರ್ಹ ದಂಪತಿಗಳು ಜುಲೈ 25 ರ ಒಳಗೆ 9482181305 ಗೆ ಕರೆ ಮಾಡಿ ಹೆಸರು ನೋಂದಾಯಿಸುವಂತೆ ಜಿಲ್ಲಾ ಉಪಾಧ್ಯಕ್ಷ ಎನ್.ರಾಜು ಆಚಾರ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter 

Post a Comment

0 Comments
Post a Comment (0)
To Top