ಬಹುಮುಖ ಪ್ರತಿಭೆ ಹೆಚ್.ಎಸ್. ಪ್ರತಿಮಾ ಹಾಸನ್‌ಗೆ ಪ್ರಶಸ್ತಿ ಪ್ರದಾನ ಪುರಸ್ಕಾರ

Upayuktha
0

ಹಾಸನ: ಮಾನವ ಹಕ್ಕುಗಳ ಜನ ಸೇವಾ ಸಮಿತಿಯ ಹಾಸನದ ಜಿಲ್ಲಾಧ್ಯಕ್ಷರು, ಕರ್ನಾಟಕ ಮುಕ್ತಕ ಕವಿ ಪರಿಷತ್ತಿನ ಹಾಸನ ಜಿಲ್ಲಾಧ್ಯಕ್ಷರು, ರಾಜ್ಯ ಒಕ್ಕಲಿಗರ ಕೆಂಪೇಗೌಡರ ಯುವ ಸೇನೆಯ ಮಹಿಳಾ ಸಂಘಟನಾ ಕಾರ್ಯದರ್ಶಿ, ವಾತ್ಸಲ್ಯ ಫೌಂಡೇಶನ್ ವೃದ್ಧ ಆಶ್ರಮದ ಕಾರ್ಯಕರ್ತೆ, ಹಲವು ಸಂಸ್ಥೆಗಳ ಸದಸ್ಯರು, ಬಹುಮುಖ ಪ್ರತಿಭೆ, ಸದಾ ಕ್ರಿಯಾಶೀಲರಾದ ಶ್ರೀಮತಿ ಹೆಚ್. ಎಸ್. ಪ್ರತಿಮಾ ಹಾಸನ್ ರವರಿಗೆ "ಕರುನಾಡ ಚೇತನ ಪ್ರಶಸ್ತಿ"ನೀಡಿ ಸನ್ಮಾನಿಸಲಾಯಿತು. ಚೇತನ ಫೌಂಡೇಶನ್ ಕರ್ನಾಟಕ ಅಧ್ಯಕ್ಷರಾದ ಚಂದ್ರಶೇಖರ್ ಮಾಡಲಗೇರಿ ಅವರು ಆಯೋಜಿಸಿದ್ದರು.


ಕರ್ನಾಟಕ ಐದನೇ ಸಾಹಿತ್ಯ ಸಮ್ಮೇಳನವು ಬೆಂಗಳೂರಿನ ಶಿವಾನಂದ ಸರ್ಕಲ್‌ನ ಗಾಂಧಿ ಭವನದಲ್ಲಿ ಭಾನುವಾರ ನಡೆಯಿತು. ಈ ಸಂದರ್ಭದಲ್ಲಿ ಶ್ರೀಮತಿ ಹೆಚ್. ಎಸ್. ಪ್ರತಿಮಾ ಹಾಸನ್ ಅವರಿಗೆ ಕರುನಾಡ ಚೇತನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಇವರ ಸಾಮಾಜಿಕ, ಶೈಕ್ಷಣಿಕ, ಸಾಹಿತ್ಯ, ಸಾಂಸ್ಕೃತಿಕ, ಇವರ  ಕ್ರಿಯಾಶೀಲತೆಯನ್ನು ಗಮನಿಸಿ ಮತ್ತು ಶಿಕ್ಷಕಿಯಾಗಿದ್ದು, ಪತ್ರಕರ್ತೆಯಾಗಿ, ಅಂಕಣಗಾರ್ತಿಯಾಗಿ, ಸಾಮಾಜಿಕ ಚಿಂತಕಿಯಾಗಿ, ತನ್ನದೇ ಆದಂತಹ  ಸೇವೆಯನ್ನು ಸಲ್ಲಿಸುತ್ತಿರುವುದನ್ನು ಗಮನಿಸಿ ಆಯ್ಕೆ ಮಾಡಲಾಗಿತ್ತು.


ಇವರು ಹಲವು ರಾಜ್ಯ ಮತ್ತು ರಾಷ್ಟ್ರ ಪ್ರಶಸ್ತಿಯ ತಮ್ಮ ಮುಡಿಗೆರಿಸಿಕೊಂಡಿದ್ದಾರೆ. ಈ ಕಾರ್ಯಕ್ರಮದಲ್ಲಿ ಶ್ರೀ ವೀರಭದ್ರ ಚನ್ನಮಲ್ಲ ದೇಶಿಕೇಂದ್ರ ಮಹಾಸ್ವಾಮಿಗಳು, ಕ. ಸುಚೇಂದ್ರ ಪ್ರಸಾದ್, ಬಾ.ಮ ಹರೀಶ, ಪ್ರೊ. ಸಮತಾ ಬಿ. ದೇಶಮಾನೆ ಇನ್ನೂ ಹಲವಾರು ಗಣ್ಯಾತಿ ಗಣ್ಯರು, ಸಾಹಿತಿಗಳು, ಸಮಾಜ ಸೇವಕರು, ಎಲ್ಲಾ ಕ್ಷೇತ್ರದ ಗಣ್ಯರು ಉಪಸ್ಥಿತರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter 

إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top