ಮಂಗಳೂರು: ಮಂಗಳೂರು ನಗರದ 3 ಜನ ಕಾರ್ಯಕರ್ತರಿಗೆ ಪೊಲೀಸ್ ಕಮಿಷನರ್ ಗಡಿಪಾರು ನೋಟೀಸ್ ನೀಡಿದ ಕ್ರಮವನ್ನು ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ ಎಂ. ಬಲವಾಗಿ ಖಂಡಿಸಿದ್ದಾರೆ.
ಈ ಕುರಿತು ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿರುವ ಅವರು, ಬಜರಂಗದಳ ಕಾರ್ಯಕರ್ತರನ್ನು ಉಳಿದ ಮತಾಂಧ ಅಥವಾ ಸಮಾಜ ಘಾತುಕ ಶಕ್ತಿಗಳ ಜತೆ ತುಲನೆ ಮಾಡಬೇಡಿ. ಅವರ ಕೇಸು ಫೈಲ್ಸ್ ಅಧ್ಯಯನ ಮಾಡಿದಾಗ ನಿಮಗೆ ಗೊತ್ತಾಗುತ್ತದೆ. ಹಿಂದು ಸಂಘಟನೆಯ ಕಾರ್ಯಕರ್ತರು ಯಾವುದೇ ಪ್ರತಿಫಲ ಅಪೇಕ್ಷೆ ಇಲ್ಲದೆ ಹಿಂದು ಸಮಾಜದ ಸೇವಾ ಕಾರ್ಯವನ್ನು ಮಾಡುತ್ತಾ, ಲವ್ ಜೆಹಾದ್‌ನಲ್ಲಿ ಹಿಂದು ಹುಡುಗಿಯರ ರಕ್ಷಣೆ, ಕಟುಕರಿಂದ ಗೋಸಂರಕ್ಷಣೆ, ಧರ್ಮದ ರಕ್ಷಣೆ ಸಂದರ್ಭ ಕೇಸು ಹಾಕಿಕೊಂಡದ್ದು ಅಂತ ಅರ್ಥ ಮಾಡಿಕೊಳ್ಳಿ. ತುಷ್ಟೀಕರಣದ ರಾಜಕಾರಣಕ್ಕೆ ಬಲಿಯಾಗದೆ ಕಾನೂನನ್ನು ಅನುಷ್ಠಾನ ಮಾಡಿ. ನಿಮಗೆ ಕೊನೆಗೆ ರಕ್ಷಣೆ ಸಿಗೋದು ಹಿಂದು ಸಮಾಜದಿಂದ ಮಾತ್ರ ಅಂತ ತಿಳಿದುಕೊಳ್ಳಿ ಅಂತ ಹೇಳಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ