ಬಜೆಟ್ ಪ್ರತಿಕ್ರಿಯೆ:
ಸುಳ್ಳು ಗ್ಯಾರಂಟಿ ಯೋಜನೆಗಳನ್ನು ಬಿಟ್ಟು ಕೃಷಿ, ಶಿಕ್ಷಣ, ಅರೋಗ್ಯ, ನಗರಾಡಳಿತ ಪ್ರದೇಶಗಳಿಗೆ ಯಾವುದೇ ಹೊಸ ಯೋಜನೆಗಳನ್ನು ನೀಡದೇ, ಬಿಜೆಪಿ ಸರಕಾರದ ಜನಪರ ಯೋಜನೆಗಳನ್ನು ರದ್ದು ಮಾಡಿರುವುದೇ ಸಾಧನೆಯಾಗಿದೆ.
ಸ್ತ್ರೀ ಸಾಮರ್ಥ್ಯ ಯೋಜನೆ, ಮಹಿಳಾ ಸ್ವಸಹಾಯ ಯೋಜನೆ, ವಿವೇಕಾನಂದ ಯುವ ಶಕ್ತಿ ಯೋಜನೆ, ವಿವೇಕ ಶಾಲೆ, ಅಗ್ನಿವೀರ್ ತರಬೇತಿ ಶಾಲೆ ರದ್ಧುಗೊಳಿಸಿ, ಐಎಎಸ್, ಐಪಿಎಸ್, ಕೆಎಸ್ ಪದವಿ ಪಡೆಯಲು ಮುಸ್ಲಿಂರಿಗೆ ಮಾತ್ರ ಉಚಿತ ತರಬೇತಿ ನೀಡಿ ಜಾತ್ಯಾತೀತದ ಪ್ರತಿಪಾದನೆ ಮಾಡುತ್ತಿರುವ ಕಾಂಗ್ರೆಸ್ ಒಂದು ಕಣ್ಣಿಗೆ ಬೆಣ್ಣೆ ಒಂದು ಕಣ್ಣಿಗೆ ಸುಣ್ಣ ಸವರಿ ಬಹುಸಂಖ್ಯಾತರಿಗೆ ಅನ್ಯಾಯ ಮಾಡಿದೆ. ಎನ್‌ಇಪಿ ರದ್ಧತಿಯಿಂದ ದೇಶದ ನೈಜ ಇತಿಹಾಸಕ್ಕೆ ಹಾಗೂ ಕೃಷಿಕರ ಜನಪರ ಯೋಜನೆಗಳ ರದ್ದತಿಯಿಂದ ರೈತರಿಗೆ ಅನ್ಯಾಯ ಮಾಡಿದ ಶಾಪ ಕಾಂಗ್ರೆಸಿಗರಿಗೆ ತಟ್ಟಲಿದೆ.
- ಸುದರ್ಶನ ಎಂ,
ಜಿಲ್ಲಾಧ್ಯಕ್ಷರು, ಭಾರತೀಯ ಜನತಾ ಪಕ್ಷ, ದ.ಕ ಜಿಲ್ಲೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ