ಭರತಾಂಜಲಿ 28ನೇ ವಾರ್ಷಿಕೋತ್ಸವ: ಇಂದು ಸಂಜೆ ಪುರಭವನದಲ್ಲಿ ನೃತ್ಯಾಮೃತಮ್

Upayuktha
0


ಮಂಗಳೂರು: ನಗರದ ಹೆಸರಾಂತ ಭರತನಾಟ್ಯ ತರಬೇತಿ ಸಂಸ್ಥೆ 'ಭರತಾಂಜಲಿ' ತನ್ನ 28ನೇ ವಾರ್ಷಿಕೋತ್ಸವದ ಪ್ರಯುಕ್ತ ಇಂದು ಸಂಜೆ 5 ಗಂಟೆಗೆ ಪುರಭವನದಲ್ಲಿ ನೃತ್ಯಾಮೃತಮ್-2023' ಕಾರ್ಯಕ್ರಮ ಆಯೋಜಿಸಿದೆ.


ನಾಟ್ಯಾಚಾರ್ಯ ಗುರು ಉಳ್ಳಾಲ ಮೋಹನ್ ಕುಮಾರ್ ಅವರು ದೀಪ ಬೆಳಗಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಗೌರವ ಅತಿಥಿಗಳಾಗಿ ವಿಧಾನಸಭಾ ಸ್ಪೀಕರ್ ಯು.ಟಿ ಖಾದರ್, ಮುಖ್ಯ ಅತಿಥಿಗಳಾಗಿ ದ.ಕ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ರಾಜೇಶ್ ಜಿ., ಗಣೇಶಪುರ ಶ್ರೀ ಮಹಾಗಣಪತಿ ದೇವಸ್ಥಾನದ ಅಧ್ಯಕ್ಷರಾದ ಧರ್ಮೇಂದ್ರ, ನಾಟ್ಯಾಲಯ ಉರ್ವದ ಗುರು ಶ್ರೀಮತಿ ಕಮಲಾ ಭಟ್ ಅವರು ಭಾಗವಹಿಸಲಿದ್ದಾರೆ.


ಸಭಾ ಕಾರ್ಯಕ್ರಮದ ಬಳಿಕ ಭರತಾಂಜಲಿಯ ವಿದ್ಯಾರ್ಥಿಗಳಿಂದ 'ನೃತ್ಯಾಮೃತಮ್' ಕಾರ್ಯಕ್ರಮ ನಡೆಯಲಿದೆ. ಭರತಾಂಜಲಿ ಸಂಸ್ಥೆಯ ಮ್ಯಾನೇಜಿಂಗ್ ಟ್ರಸ್ಟಿ ಹಾಗೂ ಗುರು ಶ್ರೀಮತಿ ಪ್ರತಿಮಾ ಶ್ರೀಧರ್ ಅವರ ನಿರ್ದೇಶನ ಮತ್ತು ನಟುವಾಂಗದಲ್ಲಿ ವಿವಿಧ ನಾಟ್ಯಗಳ ಪ್ರದರ್ಶನ ಇರಲಿದೆ. ಗಾಯನದಲ್ಲಿ ವಿದ್ವಾನ್ ವಂದನಾ ರಾಣಿ, ಮೃದಂಗದಲ್ಲಿ ವಿದ್ವಾನ್ ಬಾಲಚಂದ್ರ ಭಾಗವತ್, ವಯೊಲಿನ್‌ನಲ್ಲಿ ವಿದ್ವಾನ್ ಶ್ರೀಧರ ಆಚಾರ್ಯ ಮತ್ತು ಮೇಕಪ್‌ನಲ್ಲಿ ದಿಲೀಪ್ ಕುಮಾರ್ ಪಜೀರ್ ಸಹಕರಿಸಲಿದ್ದಾರೆ.


ಭರತಾಂಜಲಿಯ ಟ್ರಸ್ಟಿಗಳಾದ ಗುರು ಶ್ರೀಧರ ಹೊಳ್ಳ, ಶ್ರೀಮತಿ ವೀಣಾ ಶಾಸ್ತ್ರಿ, ನೃತ್ಯಶಾಲೆಯ ಗುರುಗಳಾದ ವಿದ್ವಾನ್ ಶ್ರೀಮತಿ ಪ್ರಕ್ಷಿಲಾ ಜೈನ್,  ವಿದ್ವಾನ್ ಮಾನಸ ಕುಲಾಲ್ ಅವರು ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸುತ್ತಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter  


إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top