ಭರತನಾಟ್ಯದಿಂದ ಸಂಸ್ಕೃತಿಯ ರಕ್ಷಣೆ: ಶರವು ರಾಘವೇಂದ್ರ ಶಾಸ್ತ್ರಿ

Upayuktha
0

ಮಂಗಳೂರು: ಪಾಶ್ಚಾತ್ಯ ಸಂಸ್ಕೃತಿ ಇಂದು ಬೇರೆ ಬೇರೆ ರೀತಿಯಲ್ಲಿ ಪ್ರವೇಶ ಮಾಡುತ್ತಿರುವ ಪ್ರಸಕ್ತ ಕಾಲಘಟ್ಟದಲ್ಲಿ ಭರತನಾಟ್ಯದಂತಹ ಪ್ರಾಚೀನ ಅಗತ್ಯ ಕಲೆಯನ್ನು ಮಕ್ಕಳಿಗೆ ಕಲಿಸಿ ಪ್ರದರ್ಶಿಸುವುದು ನಮ್ಮ ಸಂಸ್ಕೃತಿ ರಕ್ಷಿಸಿದಂತೆ ಎಂದು ಶರವು ಶ್ರೀ ಮಹಾಗಣಪತಿ ದೇವಳದ ಧರ್ಮದರ್ಶಿ, ರಾಘವೇಂದ್ರ ಶಾಸ್ತ್ರಿ ಹೇಳಿದರು.


ಅವರು ದೇವಳದ ಧ್ಯಾನ ಮಂದಿರದಲ್ಲಿ ಕರ್ನಾಟಕ ಕರಾವಳಿ ನೃತ್ಯ ಕಲಾ ಪರಿಷತ್ತು ರಿ ಇವರು ಆಯೋಜಿಸಿರುವ ಪ್ರಸ್ತುತ ವರ್ಷದ ಕಾರ್ಯಕ್ರಮಗಳ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.


ಭರತ ಮನೆ ಭರತ ಮುನಿ ಭಾರತದ ಖ್ಯಾತ ನಾಟ್ಯ ಶಾಸ್ತ್ರಜ್ಞ ಭರತಮುನಿಯ ನಾಟ್ಯ ಶಾಸ್ತ್ರ ಗ್ರಂಥವು ನಾಟ್ಯ ಮತ್ತು ರಂಗಭೂಮಿಗೆ ಹೊಸ ದಿಶೆಯನ್ನು ತೋರಿದ ಗ್ರಂಥವಾಗಿದೆ ಎಂದರು. ಈ ಗ್ರಂಥದ ಆಧಾರದಲ್ಲೇ ನೃತ್ಯ ಗುರುಗಳು ಮತ್ತಷ್ಟು ಸಾಧನೆ ಮಾಡುವಂತಾಗಲಿ, ಪ್ರಸಕ್ತ ಸಾಲಿನಲ್ಲಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಕಲಾ ಗುರುಗಳ ಕಲಾವಿದ್ಯಾರ್ಥಿಗಳ ಉನ್ನತಿಗಾಗಿ ಕರ್ನಾಟಕ ಕರಾವಳಿ ನೃತ್ಯ ಕಲಾ ಪರಿಷತ್ ಹಮ್ಮಿಕೊಳ್ಳಲಾಗಿರುವ ನೃತ್ಯ ಸಮ್ಮೇಳನವು ಯಶಸ್ವಿಯಾಗಿ ಜರಗಲಿ ಎಂದರು.


ಪರಿಷತ್ತಿನ ಅಧ್ಯಕ್ಷ ವಿದ್ವಾನ್ ಯುಕೆ ಪ್ರವೀಣ್ ಸ್ವಾಗತಿಸಿದರು. ಕಾರ್ಯದರ್ಶಿ ವಿದ್ವಾನ್ ಸುಧೀರ್ ಕೊಡವೂರು ನಿರೂಪಿಸಿ ವಂದಿಸಿದರು. ನಿಕಟಪೂರ್ವ ಅಧ್ಯಕ್ಷ ಗುರು ಕಮಲಾಕ್ಷ ಆಚಾರ್, ಕೋಶಾಧಿಕಾರಿ ಸುರೇಶ್ ಅತ್ತಾವರ ಸಂಘಟನಾ ಕಾರ್ಯದರ್ಶಿ ಶ್ರೀಧರ ಹೊಳ್ಳ ಸದಸ್ಯರಾದ ವಿದುಷಿಯರಾದ ನಯನ ರೈ, ಶಾರದಾಮಣಿ ಶೇಖರ್, ರಾಜಶ್ರೀ ಉಳ್ಳಾಲ್, ಡಾ. ಶ್ರೀ ವಿದ್ಯಾ ಹಾಗೂ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಗಳ ನೃತ್ಯ ಗುರುಗಳು ಉಪಸ್ಥಿತರಿದ್ದರು.

ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter 


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top